ಶಿವರಾತ್ರಿ ಹಬ್ಬದಂದು ಶಿವಣ್ಣ ಕೊಡಲಿದ್ದಾರೆ ಸರ್ಪ್ರೈಸ್

ಶಿವರಾಜ್ ಕುಮಾರ್ ಅವರು ಇಂದು (ಬುಧವಾರ) ಸಂಜೆ ಫೇಸ್‌ಬುಕ್ ಲೈವ್ ಬಂದು ಅಭಿಮಾನಿಗಳೊಂದಿಗೆ ಚುಟುಕಾಗಿ ಮಾತನಾಡಿದರು.

ನಾಳೆ, ಶಿವರಾತ್ರಿ ಹಬ್ಬದಂದು ತಮ್ಮ 125 ನೇ ಸಿನಿಮಾ ಬಗ್ಗೆ ವಿಶೇಷ ಘೋಷಣೆಯೊಂದನ್ನು ಮಾಡುವುದಾಗಿ ನಟ ಶಿವರಾಜ್ ಕುಮಾರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.

'ನನ್ನ ನಟನೆಯ 125 ನೇ ಸಿನಮಾದ ಬಗ್ಗೆ ಪ್ರಮುಖವಾದ ಘೋಷಣೆಯನ್ನು ಶಿವರಾತ್ರಿ ಹಬ್ಬದಂದು ಮಾಡಲಿದ್ದೇವೆ. ಸಿನಿಮಾದ ನಿರ್ದೇಶಕರು, ನಿರ್ಮಾಪಕರು, ಪ್ರೊಡಕ್ಷನ್ ಹೌಸ್ ಎಲ್ಲದರ ಪರಿಚಯವನ್ನು ನಾಳೆ ಮಾಡಿಕೊಡಲಿದ್ದೇವೆ, ಸಿನಿಮಾದ ಹೆಸರನ್ನೂ ಸಹ ನಾಳೆಯೇ ಘೋಷಿಸಲಿದ್ದೇವೆ. ಜೊತೆಗೆ ಸಿನಿಮಾದ ಪೋಸ್ಟರ್‌ ಕೂಡ ಬಿಡುಗಡೆ ಆಗಲಿದೆ' ಎಂದಿದ್ದಾರೆ ಶಿವಣ್ಣ.

Shiva Rajkumar to Announce His 125th Movie On March 11

'ನನ್ನ 124 ಸಿನಿಮಾಗಳಿಗೆ ನೀವು ಹರಸಿ, ಆಶೀರ್ವಾದ ಮಾಡಿದ್ದೀರಿ ಅಂತೆಯೇ 125 ನೇ ಸಿನಿಮಾಕ್ಕೆ ಅದೇ ಪ್ರೀತಿಯನ್ನು ತೋರಿಸುತ್ತೀರೆಂಬ ನಂಬಿಕೆ ಇದೆ. 125 ನೇ ಸಿನಿಮಾ ನನಗೆ ವಿಶೇಷ. ಅದನ್ನು ವಿಶೇಷ ದಿನದಂದು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿತ್ತು. ಅಂತೆಯೇ ಶಿವರಾತ್ರಿ ಹಬ್ಬ ಬಂದಿದೆ. ಅದೇ ದಿನ 125ನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು' ಎಂದರು ಶಿವರಾಜ್ ಕುಮಾರ್.

ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಶಿವರಾಜ್ ಕುಮಾರ್ ಅವರು ಸಿನಿಮಾ ರಂಗ ಪ್ರವೇಶಿಸಿ 35 ವರ್ಷಗಳಾದವು. ಅದನ್ನು ಶಿವರಾಜ್ ಕುಮಾರ್ ಅಭಿಮಾನಿಗಳು ಆಚರಿಸಿ ಸಂಭ್ರಮಿಸಿದ್ದರು.

Recommended Video

ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada

ಶಿವರಾಜ್ ಕುಮಾರ್ ಅವರು ಪ್ರಸ್ತುತ 'ಶಿವಪ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಅವರು ಸಹ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ಅವರ ಜೊತೆ ಮುಂದಿನ ಸಿನಿಮಾ ಸಹಿ ಮಾಡಿರುವುದಾಗಿ ಶಿವಣ್ಣ ಹೇಳಿದ್ದರು. ಅದೇ ಅವರ 125ನೇ ಸಿನಿಮಾ ಆಗಿರುವ ಸಾಧ್ಯತೆ ಇದೆ. ನಾಳೆ ಎಲ್ಲವೂ ಸ್ಪಷ್ಟವಾಗಲಿದೆ.

More from Filmibeat

English summary
Actor Shiva Rajkumar said he will announce his 125th movie on March 11. He request to show love for his 125th movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X