For Quick Alerts
  ALLOW NOTIFICATIONS  
  For Daily Alerts

  ಶಶಿಕುಮಾರ್ ಮಗನ 'ಸೀತಾಯಣ' ಟೀಸರ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ

  |

  ಸುಪ್ರೀಂ ಹೀರೋ ಶಶಿಕುಮಾರ್ ಮಗ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ನವೆಂಬರ್ 11 ರಂದು ಮಧ್ಯಾಹ್ನ 2.45 ಗಂಟೆಗೆ ಸೆಂಚುರಿ ಸ್ಟಾರ್ ಸೀತಾಯಣ ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ.

  ಅಕ್ಷಿತ್ ಶಶಿಕುಮಾರ್ ನಟಿಸುತ್ತಿರುವ ಸೀತಾಯಣ ಎರಡು ಭಾಷೆಯಲ್ಲಿ ತಯಾರಾಗಿದೆ. ಮೊದಲ ಸಿನಿಮಾದಲ್ಲೇ ಕನ್ನಡ ಮತ್ತು ತೆಲುಗಿನಲ್ಲಿ ಎಂಟ್ರಿಯಾಗುತ್ತಿದ್ದಾರೆ. ಈಗಾಗಲೇ ಸೀತಾಯಣ ಚಿತ್ರದ ಶೂಟಿಂಗ್ ಮುಗಿದಿದೆ. ಡಬ್ಬಿಂಗ್ ಕೆಲಸವೂ ಮುಗಿದಿದೆ.

  'ಆ ಅಪಘಾತ'ದ ಬಳಿಕ ಶಶಿಕುಮಾರ್ ಎದುರಿಸಿದ ಕಷ್ಟ ಯಾರಿಗೂ ಬೇಡ'ಆ ಅಪಘಾತ'ದ ಬಳಿಕ ಶಶಿಕುಮಾರ್ ಎದುರಿಸಿದ ಕಷ್ಟ ಯಾರಿಗೂ ಬೇಡ

  ರಿಲೀಸ್‌ಗೆ ತಯಾರಾಗುತ್ತಿರುವ ಸೀತಾಯಣ ಅದಕ್ಕೂ ಮುಂಚೆ ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನು ಪ್ರೇಕ್ಷಕರ ಮುಂದೆ ತರುವ ಹಾದಿಯಲ್ಲಿದೆ.

  ಅಂದ್ಹಾಗೆ, ಸೀತಾಯಣ ಚಿತ್ರವನ್ನು ಲಲಿತಾ ರಾಜ್ಯಲಕ್ಷ್ಮಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿದೆ. ಪ್ರಭಾಕರ್ ಆರಿಪಾಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಹೊಸ ಚಿತ್ರ ಘೋಷಿಸಿ ಮಾಧ್ಯಮಗಳಿಗೆ ಖಡಕ್ ಸಂದೇಶ ಕೊಟ್ಟ ಧ್ರುವ ಸರ್ಜಾ | Dhruva Sarja | Dubari | Nanda Kishore

  ಸೀತಾಯಣ ಚಿತ್ರಕ್ಕೂ ಮೊದಲು 'ಮೊಡವೆ' ಎಂಬ ಸಿನಿಮಾ ಮುಹೂರ್ತ ನಡೆದಿತ್ತು. ಬಳಿಕ ಆ ಸಿನಿಮಾ ಶೂಟಿಂಗ್ ನಿಲ್ಲಿಸಿತ್ತು. ಆದ್ರೆ, ಸೀತಾಯಣ ಸಿನಿಮಾ ಯಶಸ್ವಿಯಾಗಿ ಶೂಟಿಂಗ್ ಮುಗಿಸಿ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.

  English summary
  Century Star Dr Shiva rajkumar to launch the teaser of Akshith Shashi kumar's debut Seethayanam on Nov 11th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X