ACT 1978 ಚಿತ್ರಕ್ಕೆ ಸಾಥ್ ನೀಡಿದ ನಟ ಶಿವರಾಜ್ ಕುಮಾರ್
ರಾಷ್ಟ್ರ ಪ್ರಶಸ್ತಿ ನಿರ್ದೇಶಕ ಮಂಸೋರೆ ನಿರ್ದೇಶಕದ ACT 1978 ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮುಗಿಸಿರುವ ಚಿತ್ರ ಯಾವುದೇ ಕಟ್ ಇಲ್ಲದೆ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ.
ಆನ್‌ಲೈನ್ ವೇದಿಕೆಯಲ್ಲಿ ರಿಲೀಸ್ ಮಾಡಲು ಹಿಂದೇಟು ಹಾಕಿರುವ ACT 1978 ನೇರವಾಗಿ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡಲು ಯೋಜಿಸಿದೆ.
ACT 1978 ಚಿತ್ರಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜೊತೆಯಾಗಿದ್ದಾರೆ. ACT 1978 ಆಡಿಯೋವನ್ನು ನಟ ಶಿವಣ್ಣ ಅಕ್ಟೋಬರ್ 25 ರ ಸಂಜೆ 6 ಘಂಟೆಗೆ ಪಿಆರ್‌ಕೆ ಆಡಿಯೋ ಯ್ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ರಚಿಸಿದ್ದು, ರಾಹುಲ್ ಶಿವಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಡಬಗೆರೆ ಮುನಿರಾಜು ಹಾಡಿಗೆ ಧ್ವನಿಯಾಗಿದ್ದಾರೆ.

ಅಂದ್ಹಾಗೆ, ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ, ಆರಣ್ಯಾ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











