ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಶೀರ್ಷಿಕೆ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಮತ್ತೊಂದು ಹೊಸ ಸಿನಿಮಾ ಆರಂಭವಾಗುತ್ತಿದೆ. ನಿರ್ದೇಶಕ ಕೆ ರಾಮ್ ನಾರಾಯಣ್ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರದ ಶೀರ್ಷಿಕೆಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅನಾವರಣಗೊಳಿಸಲಿದ್ದಾರೆ.
ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಸಾಥ್ ಕೊಡ್ತಿದ್ದು, ದಿನಾಂಕ ಮತ್ತು ಸಮಯದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇನ್ನು ದೇವರಾಜ್ ಪುತ್ರನ ಹೊಸ ಸಿನಿಮಾದ ಹೆಸರೇನು ಏನಿರಬಹುದು ಎಂಬ ಕುತೂಹಲವೇ ಕಾಡ್ತಿದೆ.
ಪ್ರಜ್ವಲ್ ದೇವರಾಜ್ ಸದ್ಯ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾ ಮಾಡ್ತಿದ್ದು, ಅದರ ಜೊತೆಗೆ 'ಅರ್ಜುನ್ ಗೌಡ' ಹಾಗೂ 'ವೀರಂ' ಎಂಬ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈಗ ಕೆ ರಾಮ್ ನಾರಾಯಣ್ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.

ನಿರ್ದೇಶಕ ರಾಮ್ ನಾರಾಯಣ್ ಕುರಿತು ಹೇಳಬೇಕಾದರೆ, ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಜೊತೆ 'ಟೈಸನ್' ಮತ್ತು 'ಕ್ರ್ಯಾಕ್' ಎಂಬ ಎರಡು ಚಿತ್ರ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ ಕೊನೆ ಸಿನಿಮಾ 'ರಾಜಮಾರ್ತಂಡ' ಚಿತ್ರಕ್ಕೂ ಇವರೇ ಆಕ್ಷನ್ ಕಟ್ ಹೇಳಿದ್ದಾರೆ.
ಸದ್ಯ ಲಾಕ್‌ಡೌನ್‌ನಿಂದ ಬ್ರೇಕ್ ತೆಗೆದುಕೊಂಡಿರುವ ಡೈನಾಮಿಕ್ ಪ್ರಿನ್ಸ್ ಇತ್ತೀಚಿಗಷ್ಟೆ ಡಿ ಬಾಸ್ ದರ್ಶನ್ ಜೊತೆ ಬೈಕ್ ರೈಡ್ ಹೋಗಿದ್ದರು. ಬೆಂಗಳೂರಿನಿಂದ ಮಡಿಕೇರಿವರೆಗೂ ಬೈಕ್‌ಗಳಲ್ಲಿ ಸವಾರಿ ಮಾಡಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದರು.


Click it and Unblock the Notifications











