'ಪಂಚತಂತ್ರ' ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ

Recommended Video

ಪಂಚತಂತ್ರ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ..! | Filmibeta Kannada

ಯೋಗರಾಜ್ ಭಟ್ ತುಂಬಾ ಇಷ್ಟಪಟ್ಟು ನಿರ್ದೇಶನ ಮಾಡಿರುವ ಸಿನಿಮಾ 'ಪಂಚತಂತ್ರ'. ಹೊಸ ಕಲಾವಿದರನ್ನಿಟ್ಟು ಹೊಸ ರೀತಿ ಮನರಂಜನೆ ನೀಡಲು ಮುಂದಾಗಿರುವ ಭಟ್ಟರು ಇತ್ತೀಚಿಗಷ್ಟೆ ರೋಮ್ಯಾಂಟಿಕ್ ಹಾಡೊಂದಕ್ಕೆ ಸುದ್ದಿಯಾಗಿದ್ದರು.

ಈಗ 'ಪಂಚತಂತ್ರ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪಂಚತಂತ್ರ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುತ್ತಿದ್ದು, ಇಂದು ಸಂಜೆ 5.30ಕ್ಕೆ ಅನಾವರಣ ಮಾಡಲಿದ್ದಾರೆ.

'1/4 ಕೆಜಿ' ಚಿತ್ರದ ಖ್ಯಾತಿಯ ವಿಹಾನ್ ಪಂಚತಂತ್ರದ ನಾಯಕನಾಗಿದ್ದು, ಇವರಿಗೆ ಅಕ್ಷರಾ ಗೌಡ ಮತ್ತು ಸೋನಾಲ್ ಇಬ್ಬರು ನಾಯಕಿಯರಿದ್ದಾರೆ.

Shiva rajkumar to unveil first look of Panchatantra

ರಂಗಪ್ಪ ಕಾಂಪ್ಲೆಕ್ಸ್ ಮತ್ತು ಬಾಂಡ್ ಗ್ಯಾರೇಜ್ ಎಂಬೆರಡು ಜಾಗಗಳನ್ನೇ ಮುಖ್ಯವಾಗಿಟ್ಟುಕೊಂಡು ಈ ಚಿತ್ರವನ್ನು ಭಟ್ಟರು ಕಟ್ಟಿಕೊಡಲಿದ್ದಾರಂತೆ. ರಂಗಾಯಣ ರಘು, ಕರಿಸುಬ್ಬು, ದೀಪಕ್ ಶೆಟ್ಟಿ, ಸತ್ಯಣ್ಣ ಸೇರಿದಂತೆ ಹಲವು ಕಲಾವಿದರ ಹೊಸಬರಿಗೆ ಸಾಥ್ ನೀಡಿದ್ದಾರೆ.

ಇನ್ನುಳಿದಂತೆ ಯೋಗರಾಹ್ ಭಟ್ ಅವರ ನಿರ್ದೇಶನವಿರುವ ಈ ಚಿತ್ರಕ್ಕೆ ಹರಿಪ್ರಸಾದ್ ಮತ್ತು ಸನತ್ ಬಂಡವಾಳ ಹೂಡುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದು, ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Kannada actor Shiva rajkumar to unveil first look of Panchatantra at 5 pm today. the movie directed by yogaraj bhat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X