twitter
    For Quick Alerts
    ALLOW NOTIFICATIONS  
    For Daily Alerts

    'ಪಂಚತಂತ್ರ' ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ

    |

    Recommended Video

    ಪಂಚತಂತ್ರ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ..! | Filmibeta Kannada

    ಯೋಗರಾಜ್ ಭಟ್ ತುಂಬಾ ಇಷ್ಟಪಟ್ಟು ನಿರ್ದೇಶನ ಮಾಡಿರುವ ಸಿನಿಮಾ 'ಪಂಚತಂತ್ರ'. ಹೊಸ ಕಲಾವಿದರನ್ನಿಟ್ಟು ಹೊಸ ರೀತಿ ಮನರಂಜನೆ ನೀಡಲು ಮುಂದಾಗಿರುವ ಭಟ್ಟರು ಇತ್ತೀಚಿಗಷ್ಟೆ ರೋಮ್ಯಾಂಟಿಕ್ ಹಾಡೊಂದಕ್ಕೆ ಸುದ್ದಿಯಾಗಿದ್ದರು.

    ಈಗ 'ಪಂಚತಂತ್ರ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪಂಚತಂತ್ರ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುತ್ತಿದ್ದು, ಇಂದು ಸಂಜೆ 5.30ಕ್ಕೆ ಅನಾವರಣ ಮಾಡಲಿದ್ದಾರೆ.

    ಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ಸಿಕ್ಕ ನಾಯಕಿ ಇವರೇಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ಸಿಕ್ಕ ನಾಯಕಿ ಇವರೇ

    '1/4 ಕೆಜಿ' ಚಿತ್ರದ ಖ್ಯಾತಿಯ ವಿಹಾನ್ ಪಂಚತಂತ್ರದ ನಾಯಕನಾಗಿದ್ದು, ಇವರಿಗೆ ಅಕ್ಷರಾ ಗೌಡ ಮತ್ತು ಸೋನಾಲ್ ಇಬ್ಬರು ನಾಯಕಿಯರಿದ್ದಾರೆ.

    Shiva rajkumar to unveil first look of Panchatantra

    ರಂಗಪ್ಪ ಕಾಂಪ್ಲೆಕ್ಸ್ ಮತ್ತು ಬಾಂಡ್ ಗ್ಯಾರೇಜ್ ಎಂಬೆರಡು ಜಾಗಗಳನ್ನೇ ಮುಖ್ಯವಾಗಿಟ್ಟುಕೊಂಡು ಈ ಚಿತ್ರವನ್ನು ಭಟ್ಟರು ಕಟ್ಟಿಕೊಡಲಿದ್ದಾರಂತೆ. ರಂಗಾಯಣ ರಘು, ಕರಿಸುಬ್ಬು, ದೀಪಕ್ ಶೆಟ್ಟಿ, ಸತ್ಯಣ್ಣ ಸೇರಿದಂತೆ ಹಲವು ಕಲಾವಿದರ ಹೊಸಬರಿಗೆ ಸಾಥ್ ನೀಡಿದ್ದಾರೆ.

    'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ' : ಹರೆಯದ ಬಗ್ಗೆ ಭಟ್ಟರ ಪಾಠ'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ' : ಹರೆಯದ ಬಗ್ಗೆ ಭಟ್ಟರ ಪಾಠ

    ಇನ್ನುಳಿದಂತೆ ಯೋಗರಾಹ್ ಭಟ್ ಅವರ ನಿರ್ದೇಶನವಿರುವ ಈ ಚಿತ್ರಕ್ಕೆ ಹರಿಪ್ರಸಾದ್ ಮತ್ತು ಸನತ್ ಬಂಡವಾಳ ಹೂಡುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದು, ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

    English summary
    Kannada actor Shiva rajkumar to unveil first look of Panchatantra at 5 pm today. the movie directed by yogaraj bhat.
    Friday, September 21, 2018, 14:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X