ಪೈಲ್ವಾನ್ ಸಿನಿಮಾ ನೋಡಲಿದ್ದಾರೆ ನಟ ಶಿವರಾಜ್ ಕುಮಾರ್
ಪೈಲ್ವಾನ್ ಸಿನಿಮಾ ಪೈರಸಿ ಮತ್ತು ದರ್ಶನ್ ಅಭಿಮಾನಿಗಳ ಜೊತೆ ವಿವಾದದ ಸುದ್ದಿಗಳ ನಡುವೆ ಇಲ್ಲೊಂದು ಸರ್ಪ್ರೈಸ್ ಸುದ್ದಿ ಸಿಕ್ಕಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಪೈಲ್ವಾನ್ ಸಿನಿಮಾ ನೋಡಲಿದ್ದಾರೆ.
ಇಂದು ಬೆಳಿಗ್ಗೆ (ಸೆಪ್ಟೆಂಬರ್ 18) ಹ್ಯಾಟ್ರಿಕ್ ಹೀರೋ ಸುದೀಪ್ ಅಭಿನಯದ ಪೈಲ್ವಾನ್ ವೀಕ್ಷಿಸಲಿದ್ದಾರೆ ಎಂದು ಸ್ವತಃ ನಿರ್ದೇಶಕ ಕೃಷ್ಣ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಆದರೆ ಯಾವ ಚಿತ್ರಮಂದಿರಲ್ಲಿ ಎಂಬುದನ್ನ ಸ್ಪಷ್ಟಪಡಿಸಿಲ್ಲ. ಶಿವಣ್ಣ ಸಿನಿಮಾ ನೋಡುವ ಹಿನ್ನೆಲೆ ಸುದೀಪ್ ಕುಡ ಜೊತೆಯಾಗುತ್ತಾರಾ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ.

ಇನ್ನುಳಿದಂತೆ ಕೃಷ್ಣ ನಿರ್ದೇಶನದ ಪೈಲ್ವಾನ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ನಾಲ್ಕು ದಿನಕ್ಕೆ ಸುಮಾರು 40 ಕೋಟಿವರೆಗೂ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ ದ್ರೋಣ ಮತ್ತು ಆಯುಷ್ಮಾನ್ ಭವ ಚಿತ್ರಗಳ ಚಿತ್ರೀಕರಣವನ್ನ ಬಹುತೇಕ ಮುಗಿಸಿರುವ ಶಿವಣ್ಣ, ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.
English summary
Hatrick Hero Dr Shiva rajkumar to watch kiccha sudeep's starrer Pailwaan Today morning.


Click it and Unblock the Notifications