ಆರೋಗ್ಯ ತಪಾಸಣೆಗೆ ಒಳಗಾದ ನಟ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರು-ಪೇರಾಗಿದೆ ಎಂಬ ಗಾಳಿ ಸುದ್ದಿ ಇಂದು ಬೆಳಿಗ್ಗೆ ಹರಿದಾಡಿತ್ತು, ಆದರೆ ಶಿವರಾಜ್ ಕುಮಾರ್ ಆರೋಗ್ಯವಾಗಿಯೇ ಇದ್ದು, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ ಅಷ್ಟೆ.

ಆರೋಗ್ಯ ತಪಾಸಣೆ ಬಳಿಕ ಮಾಧ್ಯಮದೊಟ್ಟಿಗೆ ಮಾತನಾಡಿರುವ ಶಿವರಾಜ್ ಕುಮಾರ್, ''ಸತತ ಶೂಟಿಂಗ್ ಹಾಗೂ ಪ್ರಯಾಣದಿಂದ ಇಂದು ಬೆಳಿಗ್ಗೆ ತುಸು ಸುಸ್ತಾದಂತಾಗಿತ್ತು ಅಷ್ಟೆ. ಹಾಗಾಗಿ ಆಸ್ಪತ್ರೆಗೆ ಬಂದು, ಇಸಿಜಿ, ಬಿಪಿ ಇನ್ನಿತರೆ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿದೆ. ವರದಿ ಎಲ್ಲವೂ ನಾರ್ಮಲ್ ಎಂದಿದ್ದಾರೆ'' ಎಂದರು.

''ಸತತ ಒಂದು ತಿಂಗಳಿನಿಂದಲೂ 'ವೇದಾ' ಸಿನಿಮಾದ ಚಿತ್ರೀಕರಣದಲ್ಲಿದ್ದೇನೆ. ಶೂಟಿಂಗ್ ನಿಮಿತ್ತ ಸತತವಾಗಿ ಬೆಂಗಳೂರು-ಮೈಸೂರಿಗೆ ಟ್ರಾವೆಲ್ ಮಾಡಿದೆ. ಹಾಗೂ ಕಳೆದ ಎರಡು ದಿನ 'ಬೈರಾಗಿ' ಸಿನಿಮಾದ ಡಬ್ಬಿಂಗ್ ಮಾಡಿದೆ. ಸತತವಾಗಿ ನಿಂತುಕೊಂಡೆ ಮಾತನಾಡಿದ ಕಾರಣ ಇಂದು ಬೆಳಿಗ್ಗೆ ಸ್ವಲ್ಪ ಸುಸ್ತಾಗಿತ್ತು ಅಷ್ಟೆ ಬೇರೇನೂ ಸಮಸ್ಯೆ ಇಲ್ಲ'' ಎಂದರು.

Shiva Rajkumar Undergone Routine Health Checkup In Mysore

''ಜೊತೆಗೆ ಇತ್ತೀಚೆಗೆ ಹವಾಮಾನ ಸಹ ಏರು-ಪೇರಾಗುತ್ತಲೇ ಇದೆ. ಬೆಳಿಗ್ಗೆ ಸುಡು ಬಿಸಿಲಿರುತ್ತೆ, ಸಂಜೆ ಆದ ಕೂಡಲೇ ಮಳೆ ಬರುತ್ತೆ. ಜೊತೆಗೆ ನನ್ನ ಕಾಲಿಗೆ ಕ್ರ್ಯಾಂಪ್ ಆಗಿತ್ತು, ಅದರ ನೋವು ಕೂಡ ಹೆಚ್ಚಾಗಿತ್ತು. ಹಾಗಾಗಿ ಒಂದು ಪರೀಕ್ಷೆ ಆಗಿ ಹೋಗಲಿ ಎಂದುಕೊಂಡು ಬ್ಲಡ್ ಟೆಸ್ಟ್ ಸಮೇತವಾಗಿ ಮಾಡಿಸಿದೆ. ಎಲ್ಲ ವರದಿಗಳು ನಾರ್ಮಲ್ ಎಂದೇ ಬಂದಿವೆ'' ಎಂದರು ಶಿವಣ್ಣ.

''ಹೃದಯದ ಸಮಸ್ಯೆ ಏನೂ ಅಲ್ಲ. ಹೌದು, ನನಗೆ ಹೃದಯದ ಸಮಸ್ಯೆ ಆಗಿತ್ತು, ನನಗೆ ಮಾತ್ರವಲ್ಲ ನಮ್ಮ ಕುಟುಂಬದವರೆಲ್ಲರಿಗೂ ಆ ಸಮಸ್ಯೆ ಇದೆ. ಹಾಗಾಗಿ ನಾವೆಲ್ಲರೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ. ಈಗ ಸಹ ಬೆಂಗಳೂರಿಗೆ ಹೋದ ಕೂಡಲೇ ಹೃದಯದ ಪರೀಕ್ಷೆ ಮಾಡಿಸುತ್ತೇನೆ. ಆದರೆ ಈಗ ಆ ಸಮಸ್ಯೆ ಏನೂ ಆಗಿರಲಿಲ್ಲ, ಸಣ್ಣ ಸುಸ್ತು ಅಷ್ಟೆ'' ಎಂದು ಮಾಹಿತಿ ನೀಡಿದರು ಶಿವರಾಜ್ ಕುಮಾರ್.

''ಆರೋಗ್ಯ ಸಮಸ್ಯೆ ಏನೂ ಇಲ್ಲ ಚಿತ್ರೀಕರಣಕ್ಕೆ ಹೋಗಬಹುದು ಎಂದಿದ್ದಾರೆ. ಇಷ್ಟು ದಿನ 'ವೇದಾ' ಸಿನಿಮಾದ ಚಿತ್ರೀಕರಣದಲ್ಲಿದ್ದೆ, ಇಂದೂ ಸಹ ಚಿತ್ರೀಕರಣ ನಡೆಯುತ್ತಿದೆ. ನಾಳೆ ನಾನು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ'' ಎಂದರು. ಆದರೆ ಇಂದೇ ಶಿವರಾಜ್ ಕುಮಾರ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಶಿವಣ್ಣ ಸೆನ್‌ನಲ್ಲಿ ಕುಳಿತಿರುವ ಚಿತ್ರಗಳು ವಿಡಿಯೋ ವೈರಲ್ ಆಗಿವೆ.

ಶಿವರಾಜ್ ಕುಮಾರ್ ಪ್ರಸ್ತುತ ನಟಿಸುತ್ತಿರುವ 'ವೇದಾ' ಸಿನಿಮಾವನ್ನು ಅವರ ಪತ್ನಿ ಗೀತಾ ಅವರು ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡುತ್ತಿರುವುದು ಹರ್ಷ. ಇದರ ಜೊತೆಗೆ ಹಲವು ಸಿನಿಮಾಗಳನ್ನು ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಕುಲದಲ್ಲಿ ಕೀಳ್ಯಾವುದೊ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ನೀ ಸಿಗೊವರೆಗೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀನಿ ನಿರ್ದೇಶನದ ಸಿನಿಮಾ, ತೆಲುಗಿನ ನಿರ್ದೇಶಕರ ಜೊತೆ ಒಂದು ಸಿನಿಮಾ, ರಿಷಬ್ ಶೆಟ್ಟಿ ನಿರ್ದೇಶನದ ಒಂದು ಸಿನಿಮಾ, ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದೀಗ ಶಿವಣ್ಣ ನಟನೆಯ ''ಬೈರಾಗಿ' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

English summary
Shiva Rajkumar undergone routine health checkup in Mysore. He said he felt little low today morning so he undergone health checkup result came up normal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X