ಶಿವರಾಜ್ ಕುಮಾರ್ 'ಘೋಸ್ಟ್' ಚಿತ್ರಕ್ಕೆ KGF ಟಚ್!

ಇತ್ತೀಚೆಗಷ್ಟೆ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶಿವಣ್ಣನ 60ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಶಿವರಾಜ್ ಕುಮಾರ್ ಮುಂಬರುವ ಸಾಲು-ಸಾಲು ಸಿನಿಮಾಗಳು ಪ್ರಕಟಗೊಂಡಿವೆ.

ಶಿವರಾಜ್ ಕುಮರ್ ಅವ್ರನ್ನು ಒಂದು ಪದದಲ್ಲಿ ಬಣ್ಣಿಸಲು ಅಸಾಧ್ಯ. ಬಣ್ಣಿಸಿದರೂ, ವಿವಿಧತೆಯಲ್ಲಿ ಏಕತೆ ಇರುವ ನಟ ಎನ್ನಬಹುದು. ಅಷ್ಟರ ಮಟ್ಟಿಗೆ ಹೊಸ ಪ್ರಯೋಗಗಳನ್ನ ಮಾಡುವುದರಲ್ಲಿ ನಟ ಶಿವರಾಜ್ ಕುಮಾರ್ ಸದಾ ಮುಂದು.

ಹಾಗಾಗಿಯೆ ಹಲವು ನಿರ್ದೇಶಕ, ನಿರ್ಮಾಪಕರು ಶಿವಣ್ಣನನ್ನು ನಂಬಿ ದುಡ್ಡು ಹಾಕುತ್ತಾರೆ. ಇನ್ನು ಇತ್ತೀಚೆಗೆ ಪ್ರಕಟಗೊಂಡ ನಟ ಶಿವರಾಜ್ ಕುಮಾರ್ ಸಿನಿಮಾಗಳಲ್ಲಿ 'ಘೋಸ್ಟ್' ಸಿನಿಮಾ ಕೂಡ ಒಂದು. ಇದೇ ಚಿತ್ರಕ್ಕೆ ಕೆಜಿಎಫ್ ಟಚ್ ಕೊಡಲಾಗುತ್ತಿದೆ. ಅದು ಹೇಗೆ ಎನ್ನುವುದನ್ನು ಮುಂದೆ ಓದಿ...

ಘೋಸ್ಟ್ ಶೂಟಿಂಗ್ ಶೀಘ್ರದಲ್ಲೇ!

ಘೋಸ್ಟ್ ಶೂಟಿಂಗ್ ಶೀಘ್ರದಲ್ಲೇ!

ನಟ ಶಿವರಾಜ್ ಕುಮಾರ್ ಅಭಿನಯಿಸಲಿರುವ 'ಘೋಸ್ಟ್' ಸಿನಿಮಾದ ಟೈಟಲ್ ಪೋಸ್ಟರ್ ಶಿವಣ್ಣನ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ. ಪೋಸ್ಟರ್ ಕೂಡ ಹೆಚ್ಚಿನ ಗಮನ ಸೆಳದಿದೆ. ವಿಭಿನ್ನ ಪೋಸ್ಟರ್ ಮೂಲಕ ವಿಭಿನ್ನ ಕತೆಯನ್ನು ಹೇಳಲು ಬರ್ತಿದೆ ಈ ಸಿನಿಮಾ ಎನ್ನುವುದು ಪೋಸ್ಟರ್ ಮೂಲಕ ತಿಳಿಯಲಿದೆ.

ಘೋಸ್ಟ್‌ಗೆ ಕೆಜಿಎಫ್ ಶಿವಕುಮಾರ್ ಎಂಟ್ರಿ!

ಶಿವರಾಜ್ ಕುಮಾರ್ ಅವರ ಘೋಸ್ಟ್ ಚಿತ್ರಕ್ಕೂ, ಕೆಜಿಎಫ್ ಸಿನಿಮಾಗೂ ಏನಪ್ಪ ನಂಟು ಎಂದುಕೊಂಡಿರಾ?. ಈ ಚಿತ್ರಕ್ಕೆ ಕೆಜಿಎಫ್ ಬಳದ ಶಿವಕುಮಾರ್ ಸೇರಿಕೊಂಡಿದ್ದಾರೆ. ಶಿವಕುಮಾರ್ ಆರ್ಟ್ ಡೈರೆಕ್ಟರ್. ಕೆಜಿಎಫ್ ಸಿನಿಮಾದ ಸಂಪೂರ್ಣ ಸೆಟನ್ನು ಇವರೇ ಹಾಕಿರುವು. ಈಗ 'ಘೋಸ್ಟ್' ಸಿನಿಮಾಗೆ ಎಂಟ್ರಿ ಕೊಡುವ ಮೂಲಕ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಶ್ರೀನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಘೋಸ್ಟ್ ಚಿತ್ರಕ್ಕೆ ಅದ್ದೂರಿ ಸೆಟ್!

ಘೋಸ್ಟ್ ಚಿತ್ರಕ್ಕೆ ಅದ್ದೂರಿ ಸೆಟ್!

ಇನ್ನು ಘೋಸ್ಟ್ ಸಿನಿಮಾ ಪೋಸ್ಟರ್ ನೋಡಿದರೆ ಗೊತ್ತಾಗುತ್ತೆ. ಇದು ಅಪರೂಪದ ಕಥೆಯನ್ನು ಹೇಳುವ ಸಿನಿಮಾ ಎನ್ನುವುದು. ಈ ಚಿತ್ರದ ಟೈಟಲ್ ಇದೊಂದು ಹಾರರ್ ಕಹಾನಿ ಇರಬಹುದು ಎನ್ನುವುದನ್ನು ಹೇಳುತ್ತದೆ. ಹಾಗಾಗಿ ಇದಕ್ಕೆ ಪ್ರತ್ಯೇಕ ಪ್ರಪಂಚವೆ ಬೇಕಾಗಬಹುದು. ಈಗ ಶಿವಕುಮಾರ್ ಎಂಟ್ರಿ ಕೊಟ್ಟಿರುವುದು, ಸಹಜವಾಗಿಯೇ ಕುತೂಹಲವನ್ನು ಹೆಚ್ಚು ಮಾಡಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಅಭಿನಯ!

ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಅಭಿನಯ!

ಸಚಿನ್ ನಿರ್ದೇಶನದಲ್ಲಿ ಶಿವಣ್ಣನ 127ನೇ ಸಿನಿಮಾ ಪ್ರಕಟಗೊಂಡಿದೆ.ನಅರ್ಜುನ್ ಜನ್ಯ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, '45' ಎನ್ನುವ ಚಿತ್ರವನ್ನು ಶಿವಣ್ಣನಿಗೆ ನಿರ್ದೇಶನ ಮಾಡ್ತಿದ್ದಾರೆ. ಜೊತೆಗೆ ಶಿವಣ್ಣ, ಪ್ರಭುದೇವ ಕಾಂಬಿನೇಷನ್‌ನಲ್ಲಿ ಯೋಗರಾಜ್ ಭಟ್ ಸಿನಿಮಾ ಮಾಡ್ತಿದ್ದಾರೆ. ಶಿವಣ್ಣ ಮುಂದಿನ ಸಿನಿಮಾ ವೇದ ರಿಲೀಸ್‌ಗೆ ರೆಡಿಯಾಗಿದೆ.

More from Filmibeat

English summary
Shiva Rajkumar Upcoming Ghost Movie Art Director Will Be KGf Art Director Shivakumar, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X