ಶಿವರಾಜ್ ಕುಮಾರ್-ಡಾಲಿ ಜತೆಯಾಗಿ ನಟಿಸುತ್ತಿರುವ ಸಿನಿಮಾಕ್ಕೆ ಹೆಸರು ಫಿಕ್ಸ್

'ಟಗರು' ನಂತರ ನಟ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಮತ್ತೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾಕ್ಕೆ ಹೆಸರು ನಿಗದಿಯಾಗಿದೆ.

Recommended Video

ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada

ತಮಿಳಿನ ವಿಜಯ್ ಮಿಲ್ಟನ್ ನಟಿಸುತ್ತಿರುವ ಶಿವರಾಜ್ ಕುಮಾರ್ ಅಭಿನಯದ 123 ನೇ ಈ ಸಿನಿಮಾಕ್ಕೆ 'ಶಿವಪ್ಪ' ಎಂಬ ಮಾಸ್ ಹೆಸರು ಇಡಲಾಗಿದೆ. ಸಿನಿಮಾದ ಹೆಸರು ಸೂಚಿಸುತ್ತಿರುವಂತೆ ಸಿನಿಮಾದ ಕತೆಯಲ್ಲಿ ಶಿವರಾಜ್ ಕುಮಾರ್ ಪಾತ್ರವನ್ನು ಕೇಂದ್ರವಾಗಿರಲಿದೆ.

ಶಿವರಾಜ್ ಕುಮಾರ್, ಡಾಲಿ ಧನಂಜಯ್ ಜೊತೆಗೆ ಹೊಸ ನಾಯಕ ನಟ ಪೃಥ್ವಿ ಅಂಬರ್ ಸಹ ಇರಲಿದ್ದಾರೆ. ಕತೆ, ಲೊಕೇಶನ್, ಪಾತ್ರವರ್ಗ ಎಲ್ಲವೂ ಓಕೆ ಆಗಿದ್ದು, ಇದೇ ತಿಂಗಳ 23 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ನವೆಂಬರ್ 23 ರಿಂದ ಚಿತ್ರೀಕರಣ ಪ್ರಾರಂಭ

ನವೆಂಬರ್ 23 ರಿಂದ ಚಿತ್ರೀಕರಣ ಪ್ರಾರಂಭ

ಸಿನಿಮಾದ ಚಿತ್ರೀಕರಣವು ನವೆಂಬರ್ 23 ರಿಂದ ಪ್ರಾರಂಭವಾಗಲಿದ್ದು, ಮೊದಲ ಎರಡು ದಿನ ಶಿವರಾಜ್ ಕುಮಾರ್, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಡುವಿನ ಕೆಲ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಡಾಲಿ ಧನಂಜಯ್ ನವೆಂಬರ್ 25 ಕ್ಕೆ ಚಿತ್ರೀಕರಣ ತಂಡ ಸೇರಿಕೊಳ್ಳಲಿದ್ದಾರೆ.

ಪಕ್ಕಾ ಆಕ್ಷನ್ ಸಿನಿಮಾ 'ಶಿವಪ್ಪ'

ಪಕ್ಕಾ ಆಕ್ಷನ್ ಸಿನಿಮಾ 'ಶಿವಪ್ಪ'

ಪಕ್ಕಾ ಆಕ್ಷನ್ ಸಿನಿಮಾ ಆಗಿರುವ 'ಶಿವಪ್ಪ' ನಲ್ಲಿ ಶಿವರಾಜ್ ಕುಮಾರ್ ಮೂರು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಉಳಿಕೆ ಪಾತ್ರಗಳ ಆಯ್ಕೆ ನಡೆಯುತ್ತಿದೆ. ನಾಯಕಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ತಮಿಳಿನಲ್ಲಿ ನಾಲ್ಕು ಸಿನಿಮಾ ನಿರ್ದೇಶನ

ತಮಿಳಿನಲ್ಲಿ ನಾಲ್ಕು ಸಿನಿಮಾ ನಿರ್ದೇಶನ

ಸಿನಿಮಾಟೋಗ್ರಾಫರ್ ಆಗಿ ದೊಡ್ಡ ಹೆಸರುಗಳಿಸಿರುವ ವಿಜಯ್ ಮಿಲ್ಟನ್ ತಮಿಳಿನಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದ ಅಟ್ಟಹಾಸ, ಪೊಗರು ಸಿನಿಮಾಕ್ಕೆ ಇವರೇ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದಲ್ಲಿ 'ಶಿವಪ್ಪ' ಮಿಲ್ಟನ್ ಅವರ ಮೊದಲ ನಿರ್ದೇಶನದ ಸಿನಿಮಾ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಸಿನಿಮಾ

ಯೋಗರಾಜ್ ಭಟ್ ನಿರ್ದೇಶನದಲ್ಲಿ ಸಿನಿಮಾ

ಶಿವರಾಜ್ ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಪ್ರಭುದೇವಾ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಭಜರಂಗಿ 2 ಸಿನಿಮಾ ಬಿಡುಗಡೆಗೆ ತಯಾರಾಗಿದೆ. ತೆಲುಗಿನ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ. ಸಾಲು-ಸಾಲು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ.

More from Filmibeat

English summary
Shiva Rajkumar-Dali Dhanajay's movie titles as Shivappa. Vijay Milton directing the movie. Shooting will start from November 23
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X