ಶಿರಸಿ ಸಹಸ್ರಲಿಂಗ ದೇವಸ್ಥಾನದಲ್ಲಿ ಪತ್ನಿ ಜೊತೆಗೆ ಶಿವರಾಜ್ ಕುಮಾರ್!
ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದಾ ಖುಷಿ ಖುಷಿಯಾಗಿ ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ನಟ. ಶಿವರಾಜ್ ಕುಮಾರನ್ನು ನೋಡಿದರೆ ಎಂತಹವರಿಗೂ ಕೂಡ ಹುಮ್ಮಸ್ಸು ಹುಟ್ಟಿಕೊಳ್ಳುತ್ತದೆ. ಸದಾ ಲವಲವಿಕೆಯಿಂದ ಇರುವ ನಟ ಶಿವರಾಜ್ ಕುಮಾರ್.
ಶಿವರಾಜ್ ಕುಮಾರ್ ಇತ್ತೀಚಿಗೆ ಶಿರಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ನಿ ಗೀತಾ ಜೊತೆಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಜೊತೆಗೆ ಶಿರಸಿಗೆ ಭೇಟಿ ನೀಡಿದ್ದು, ಅಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಶಿವರಾಜ್ ಕುಮಾರ್ ಆಗಾಗ ಸಮಯ ಮಾಡಿಕೊಂಡು ಖಾಸಗಿ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ. ಹಾಗೆ ತಮ್ಮ ಖಾಸಗಿ ಕಾರ್ಯಕ್ರಮಕ್ಕಾಗಿ ಶಿರಸಿಗೆ ಭೇಟಿ ನೀಡಿದ್ದರು.
ಸಹಸ್ರಲಿಂಗ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ದಂಪತಿ!
ಶಿರಸಿಗೆ ಭೇಟಿ ನೀಡಿದ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಅಲ್ಲಿನ ಸಹಸ್ರಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತ್ನಿಯ ಜೊತೆಗೆ ಶಿವಲಿಂಗಕ್ಕೆ ಶಿವಣ್ಣ ಪೂಜೆ ಸಲ್ಲಿಸಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನ ದರ್ಶನದ ಜೊತೆಗೆ ಅಲ್ಲಿನ ಪರಿಸರದಲ್ಲಿ ಶಿವರಾಜ್ ಕುಮಾರ್ ಕಾಲ ಕಳೆದಿದ್ದಾರೆ. ನದಿಯ ಪಕ್ಕ ಕನ್ನಡಕ ಹಾಕಿಕೊಂಡು ಸ್ಟೈಲಿಶ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಬ್ಯುಸಿ!
ನಟ ಶಿವರಾಜ್ ಕುಮಾರ್ ಇತ್ತೀಚಿಗೆ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 'ಬೈರಾಗಿ' ರಿಲೀಸ್ ಗೆ ರೆಡಿಯಾಗಿದ್ದು, ಇದರ ಜೊತೆಗೆ 'ವೇದ' ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಈಗಾಗಲೇ 'ವೇದ' ಸಿನಿಮಾದ ಶೂಟಿಂಗ್ ಕೂಡ ಬಹುತೇಕ ಮುಗಿಯುತ್ತಾ ಬಂದಿದೆ. ಈ ಚಿತ್ರದ ನಂತರ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ ಅಭಿನಯಿಸಲಿದ್ದಾರೆ.

ರಿಯಾಲಿಟಿ ಶೋನಲ್ಲಿ ಶಿವಣ್ಣ!
ಅಪ್ಪು ಅಗಲಿಕೆಯ ನೋವಿನಿಂದ ಹೊರಬರಲು ಶಿವರಾಜ್ ಕುಮಾರ್ ಕೆಲಸಗಳಲ್ಲಿ ತುಂಬಾನೇ ಬ್ಯಸಿಯಾಗಿರಲು ಪ್ರಯತ್ನ ಪಡುತ್ತಿದ್ದಾರೆ. ಈಗ ಕಿರುತೆರೆ ಡಾನ್ಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಶಿವರಾಜ್ ಕುಮಾರ್ ಭಾಗಿಯಾಗಿದ್ದಾರೆ. ಹಾಗಾಗಿ ಸಿನಿಮಾ ರಿಲೀಸ್ ಆದಾಗ ಮಾತ್ರ ಅವರನ್ನ ತೆರೆಯಮೇಲೆ ನೋಡುತ್ತಿದ್ದ ಅಭಿಮಾನಿಗಳು, ಕಿರುತೆರೆಯ ಮೂಲಕ ಪ್ರತಿವಾರ ನೋಡಬಹುದಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವರಾಜ್ ಕುಮಾರ್!
ಇನ್ನು ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಎ.ಹರ್ಷ ನಿರ್ದೇಶನದ ಸಿನಿಮಾ 'ವೇದ' ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಪ್ರಭುದೇವ ಜೊತೆಗೆ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಖಚಿತಪಡಿಸಿದ್ದಾರೆ.


Click it and Unblock the Notifications











