'ರಾಜಣ್ಣನ ಮಗ'ನ ಜೊತೆ ಪ್ರತ್ಯಕ್ಷವಾದ ಶಿವಣ್ಣ
ಶೀರ್ಷಿಕೆಯಿಂದಲೇ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ರಾಜಣ್ಣನ ಮಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಹಾಗೂ ಆಡಿಯೋ ರಿಲೀಸ್ ಮೂಲಕ ಪವರ್ ಫುಲ್ ಸಬ್ಜೆಕ್ಟ್ ಎನಿಸಿಕೊಂಡಿರುವ ಈ ಸಿನಿಮಾ ಈಗ ವಿಶೇಷವಾದ ವಿಷ್ಯಕ್ಕೆ ಸುದ್ದಿಯಾಗಿದೆ.
ಹೌದು, 'ರಾಜಣ್ಣನ ಮಗ' ಚಿತ್ರದ ಸೆಟ್ ಗೆ ಡಾ ರಾಜಣ್ಣನ ಮಗ ಶಿವರಾಜ್ ಕುಮಾರ್ ಭೇಟಿ ನೀಡಿರುವ ಸಂಗತಿ ಹೊರಬಿದ್ದಿದೆ. ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ, ಇದರಲ್ಲಿ ಶಿವಣ್ಣ ಭೇಟಿ ನೀಡಿರುವುದನ್ನ ಬಹಿರಂಗಪಡಿಸಿದ್ದಾರೆ.
ಶಿವಣ್ಣ ಅಭಿನಯಿಸುತ್ತಿರುವ ಕವಚ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆ, ಪಕ್ಕದಲ್ಲಿ 'ರಾಜಣ್ಣನ ಮಗ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸುದ್ದಿ ತಿಳಿದು ಸೆಟ್ ಗೆ ವಿಸಿಟ್ ಮಾಡಿದ್ರಂತೆ. ಅದಕ್ಕೂ ಮುಂಚೆಯೆ ಚಿತ್ರತಂಡ ಶಿವಣ್ಣ ಅವರಿಗೆ ಪ್ರೀತಿಯಿಂದ ಆಹ್ವಾನ ಕೂಡ ನೀಡಿದ್ದರು.

ಪ್ರೀತಿಯ ಆಹ್ವಾನ ಮತ್ತು ಹೊಸಬರು ಚೆನ್ನಾಗಿ ಮೇಕಿಂಗ್ ಮಾಡ್ತಿದ್ದಾರೆ ಎಂಬ ಭರವಸೆ ಹಾಗೂ ರಾಜಣ್ಣನ ಮಗ ಎಂಬ ಟೈಟಲ್ ಇಟ್ಟಿರುವ ಕಾರಣಕ್ಕೆ ಮೆಚ್ಚುಗೆಯಿಂದ ಶಿವಣ್ಣ ಆಗಮಿಸಿ, ನಾಯಕ ಹರೀಶ್ ಮತ್ತು ತಂಡಕ್ಕೆ ಶುಭಕೋರಿದ್ದಾರೆ.

ಇನ್ನುಳಿದಂತೆ 'ರಾಜಣ್ಣನ ಮಗ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ರಾಜಣ್ಣನ ಮಗ ಚಿತ್ರದಲ್ಲಿ ನಾಯಕನಾಗಿ ಹರೀಶ್ ಟಿ ಜಲಗೆರೆ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಅಕ್ಷತಾ ಜೊತೆಯಾಗಿದ್ದಾರೆ. ಕೋಲಾರ್ ಸೀನು ನಿರ್ದೇಶನ ಮಾಡಿದ್ದು, ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾವನ್ನ ಖುದ್ದು ನಾಯಕ ಹರೀಶ್ ಅವ್ರೇ, ತಮ್ಮ ಹೋಂ ಬ್ಯಾನರ್‌ನಲ್ಲಿ ನಿರ್ಮಿಸಿರುವುದು ವಿಶೇಷ.


Click it and Unblock the Notifications











