'ಪಾರ್ವತಿ' ನೋಡಲು ಮೃಗಾಲಯಕ್ಕೆ ಕುಟುಂಬ ಸಮೇತ ಶಿವಣ್ಣ ಭೇಟಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕುಟುಂಬ ಸಮೇತರಾಗಿ ಚಾಮರಾಜೇಂದ್ರ ಮೃಗಾಲಯಕ್ಕೆ ಗುರುವಾರ ಭೇಟಿ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣ ಬಿಡುವಿನ ಸಂದರ್ಭದಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಮೃಗಾಲಯದ ಸುತ್ತ ಅಡ್ಡಾಡಿ, ಪ್ರಾಣಿ-ಪಕ್ಷಿಗಳು ವೀಕ್ಷಿಸಿದರು. ಅಲ್ಲದೇ ಅವುಗಳ ಚಲನವಲನ ಗಮನಿಸಿ ಮನರಂಜನೆ ಪಡೆದರು.
ಅಲ್ಲದೇ, ತಾವೇ ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿಪಟ್ಟರು. ಇದೇ ವೇಳೆ ಶಿವರಾಜ್ ಕುಮಾರ್ ಮೃಗಾಲಯದ ನಿರ್ವಹಣೆ ಕಾರ್ಯ ಹೇಗೆ ಸಾಗಿದೆ ಹಾಗೂ ಮೃಗಾಲಯದ ಬಗ್ಗೆ, ಪ್ರಾಣಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಾಣಿಗಳನ್ನು ನೋಡಿ ಎಂಪಿ ಶಂಕರ್ ನೆನಪಾದರು: ಶಿವರಾಜ್ ಕುಮಾರ್
ʻಲಾಕ್ಡೌನ್ ಮುಗಿದ ಮೇಲೆ ನಾನು ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಹೊರಗೆ ಬಂದಿದ್ದೇನೆ. 6 ತಿಂಗಳ ನಂತರ ಮೊದಲು ಬಂದಿದ್ದೆ ಮೈಸೂರಿಗೆ. ಇಲ್ಲಿನ ಮೃಗಾಲಯ ನೋಡಿ ಖುಷಿಯಾಗಿದೆ. ಪ್ರಾಣಿಗಳನ್ನು ನೋಡಿದ ತಕ್ಷಣ ಎಂ.ಪಿ.ಶಂಕರ್ ನೆನಪಾದರು. ಅಪ್ಪಾಜಿ ಜೊತೆಗಿನ ಸಿನಿಮಾ ನೆನಪಾಯ್ತು. ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದು ಖುಷಿಯಾಯಿತುʼ ಎಂದು ಸಂತೋಷ ಹಂಚಿಕೊಂಡರು.

ಪಾರ್ವತಿ ಹೆಸರಿನ ಆನೆ ದತ್ತು ಪಡೆದಿದ್ದೀನಿ: ಶಿವಣ್ಣ
ನಾನು ಪಾರ್ವತಿ ಅನ್ನೋ ಆನೆ ದತ್ತು ಪಡೆದಿದ್ದೇನೆ. ನನ್ನ ನೂರಾರು ಅಭಿಮಾನಿಗಳು ಸಹ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಅಭಿಮಾನಿಗಳು ನಮ್ಮನ್ನ ಫಾಲೋ ಮಾಡ್ತಾರೆ ಅನ್ನೋದಕ್ಕೆ ಇದೆ ಘಟನೆ ಸಾಕ್ಷಿ. ಮೃಗಾಲಯದ ಎಲ್ಲ ಸಿಬ್ಬಂದಿಗು ನನ್ನ ಧನ್ಯವಾದಗಳು ಎಂದರು.

ಮಕ್ಕಳು ಅಳಿಯನ ಜೊತೆಗೆ ಭೇಟಿ
ಪತ್ನಿ ಇಬ್ಬರು ಮಕ್ಕಳು ಅಳಿಯನ ಜೊತೆ ಭೇಟಿ. ಮೃಗಾಲಯದಲ್ಲಿ ಸುತ್ತಾಡಿ ಎಂಜಾಯ್ ಮಾಡಿದ ಕುಟುಂಬಸ್ಥರು. ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿ ಪಟ್ಟ ಶಿವರಾಜ್ ಕುಮಾರ್. ಮೃಗಾಲಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಿವರಾಜ್ ಕುಮಾರ್. ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳ ಕಂಡು ಸಂತಸ ಪಟ್ಟ ಶಿವಣ್ಣ ಕುಟುಂಬಸ್ಥರು.

ಶಿವರಾಜ್ ಕುಮಾರ್ ನೋಡಲು ಜನರ ದಂಡು
ಮೃಗಾಲಯಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ ವಿಚಾರ ತಿಳಿದು ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಿ ಅವರೂ ಖುಷಿಪಟ್ಟರು.


Click it and Unblock the Notifications











