Don't Miss!
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- News
ಮಹಾರಾಷ್ಟ್ರದಲ್ಲಿ 1 ಸಾವಿರ ಲಂಚ ಪಡೆದ ನಾಗರೀಕ ಅಧಿಕಾರಿ ಬಂಧನ
- Sports
ರಾಯ್ಪುರದಲ್ಲಿ ರಾರಾಜಿಸಿದ ರೋಹಿತ್ ಪಡೆ: 8 ವಿಕೆಟ್ಗಳ ಅಮೋಘ ಗೆಲುವಿನೊಂದಿಗೆ ಸರಣಿ ವಶಕ್ಕೆ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಜ್ಜಿ ಮನೆಗೆ ಶಿವಣ್ಣ ಭೇಟಿ, ಹಳೆ ನೆನಪುಗಳ ಮೆಲುಕು
ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಬಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಳೆದ ಮೂರು ದಿನಗಳಿಂದಲೂ ಶಿರಸಿಯಾದ್ಯಂತ ಸುತ್ತಾಡುತ್ತಿದ್ದಾರೆ. ಶಿವಣ್ಣನ ನೋಡಲು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.
ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ, ಶಿವಣ್ಣನವರ ಮಾವ ಭೀಮಣ್ಣ ನಾಯ್ಕ ಅವರ ನೂತನ ಹೋಟೆಲ್ ಉದ್ಘಾಟನೆಗೆಂದು ಕುಟುಂಬ ಸಮೇತ ಶಿರಸಿಗೆ ಆಗಮಿಸಿದ್ದ ಡಾ.ಶಿವರಾಜಕುಮಾರ್, ಸದ್ಯ ಶಿರಸಿಯಲ್ಲೇ ತಂಗಿದ್ದಾರೆ. ಹೀಗಾಗಿ ಶಿರಸಿಯ ವಿವಿಧೆಡೆ ತಿರುಗಾಡಿ ಶಿರಸಿಯೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
Exclusive:
ನಿಖಿಲ್
ಕುಮಾರ್
'ಯುದುವೀರ'
ಸಿನಿಮಾ
ಸ್ಥಗಿತ:
ನಿರ್ಮಾಣ
ಸಂಸ್ಥೆ
ಹೇಳಿದ್ದೇನು?
ಶಿರಸಿ ತಾಲೂಕಿನ ಮಳಲಗಾಂವ್ ನಲ್ಲಿರುವ ಅಜ್ಜಿ ಮನೆಗೆ ಭೇಟಿ ನೀಡಿದ ಶಿವರಾಜ್ ಕುಮಾರ್, ಅಲ್ಲಿ ಕುಟುಂಬಸ್ಥರೊಂದಿಗೆ ಕೆಲ ಕಾಲ ಸಮಯ ಕಳೆದರು. ತದನಂತರ ಶಕ್ತಿಪೀಠಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶಿರಸಿಯ ಪ್ರಸಿದ್ಧ ಮಳಿಗೆ ಟಿಎಸ್ಎಸ್ ಸೂಪರ್ ಮಾರ್ಕೆಟ್ ಗೂ ಭೇಟಿ ನೀಡಿ ಸುತ್ತಾಡಿದರು. ಬನವಾಸಿಯ ಮಧುಕೇಶ್ವರನ ದರ್ಶನ ಪಡೆದರು.

'ನಮ್ಮೂರ ಮಂದಾರ ಹೂವೆ' ಚಿತ್ರೀಕರಣದ ಜಾಗಕ್ಕೆ ಭೇಟಿ
ಅಲ್ಲಿಂದ ಸಹಸ್ರಲಿಂಗಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಒಂದಷ್ಟು ಫೊಟೊ ಪೋಸ್ ನೀಡಿದರು. ಈ ಬಗ್ಗೆ ಫೇಸ್‌ಬುಕ್ ನಲ್ಲಿ ಹಂಚಿಕೊಂಡಿರುವ ಅವರು, 'ನಮ್ಮೂರ ಮಂದಾರ ಹೂವೆ' ಚಿತ್ರೀಕರಣದ ವೇಳೆಗೆ ಇಲ್ಲಿಗೆ ಬಂದಿದ್ದೆ. ಅದಾದನಂತರ 25 ವರ್ಷಗಳ ಬಳಿಕ ಮತ್ತೆ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.

ಸಂಬಂಧಿಕರ ನಿವಾಸಕ್ಕೆ ಭೇಟಿ ನೀಡಿದ ಶಿವಣ್ಣ
ಶಿರಸಿಯೊಂದಿಗೆ ಡಾ.ಶಿವರಾಜ್ ಕುಮಾರ್ ಅವರ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಅವರ ಅಜ್ಜಿಯ ಮನೆಯಿಂದ ಹಿಡಿದು ಅನೇಕ ಸಂಬಂಧಿಗಳ ಮನೆ ಕೂಡ ಶಿರಸಿಯಲ್ಲಿದೆ. ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಕೂಡ ಶಿವಣ್ಣನ ಬಾಮೈದ. ಹೀಗಾಗಿ ಕುಪಟೂರಿನ ಅವರ ಮನೆಗೂ ಈ ವೇಳೆ ಅವರು ಭೇಟಿ ನೀಡಿದ್ದಾರೆ. ಶಿವಣ್ಣನ ಈ ಸುತ್ತಾಟದ ವೇಳೆ ಅವರ ಪತ್ನಿ ಗೀತಾ, ಮಧು ಬಂಗಾರಪ್ಪ, ಭೀಮಣ್ಣ ನಾಯ್ಕ ಸೇರಿದಂತೆ ಅನೇಕರು ಸಾಥ್ ನೀಡಿದ್ದಾರೆ.

ಮುತ್ತಿಗೆ ಹಾಕುತ್ತಿದ್ದಾರೆ ಅಭಿಮಾನಿಗಳು
ಒಟ್ಟಾರೆ 25 ವರ್ಷಗಳ ನಂತರ ಬಿಡುವು ಮಾಡಿಕೊಂಡು ಶಿರಸಿಗೆ ಭೇಟಿ ನೀಡಿರುವ ಶಿವಣ್ಣ, ಮಲೆನಾಡಿನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಹೋದಲ್ಲೆಲ್ಲ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಾರೆ. ಶಿವಣ್ಣ ಸಹ ಅಭಿಮಾನಿಗಳಿಗೆ ಬೇಸರ ಮಾಡದೆ, ಫೊಟೊಕ್ಕೆ ಫೋಸು ನೀಡುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ.

ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ
ಶಿವರಾಜ್ ಕುಮಾರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ ನಟನೆಯ 'ಬೈರಾಗಿ' ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಆ ಬಳಿಕ 'ವೇದ' ಸಿನಿಮಾ ತೆರೆಗೆ ಬರಲಿದೆ. 'ನೀ ಸಿಗೊವರೆಗೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಳಿಕ ಯೋಗರಾಜ್ ಭಟ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ. ಸೂಪರ್ ಮ್ಯಾನ್ ಕತೆಯುಳ್ಳ ಹೊಸ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ನಿರ್ದೇಶಣದ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ. ತೆಲುಗಿನ ನಿರ್ದೇಶಕನೊಬ್ಬನ ಸಿನಿಮಾಕ್ಕೂ ಎಸ್ ಎಂದಿದ್ದಾರೆ. ಒಟ್ಟಾರೆ ಹಲವಾರು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ.