ಶಿವಣ್ಣನಿಗೆ ಕೋಪ, ಕಿರಿಕಿರಿ ಯಾಕೆ.? ಕಾರಣ ಇಲ್ಲಿದೆ ಓದಿರಿ....
Recommended Video

ಯಾರಿಗೆ ತಾನೆ ಕೋಪ ಬರಲ್ಲ ಹೇಳಿ... ಒಂದಲ್ಲಾ ಒಂದು ಕಾರಣಕ್ಕೆ ಪ್ರತಿದಿನ ನಿಮಗೆ ಕಿರಿಕಿರಿ ಆಗಲ್ವಾ.? ಮನುಷ್ಯ ಅಂದಮೇಲೆ ಕೋಪ, ಕಿರಿಕಿರಿ, ಮುನಿಸು, ಸಿಟ್ಟು ಸರ್ವೇಸಾಮಾನ್ಯ ಅಲ್ವಾ.!
ಆದ್ರೆ, ಅಣ್ಣಾವ್ರ ಮಗ ಶಿವಣ್ಣ ಸೌಮ್ಯ ಸ್ವಭಾವದವರು. ಚಿತ್ರರಂಗದಲ್ಲಿ ಮೂರು ದಶಕಗಳಿಂದ ಸಕ್ರಿಯರಾಗಿರುವ ಶಿವಣ್ಣ ಸಿಟ್ಟು ಮಾಡಿಕೊಂಡು ರೇಗಾಡಿರುವ ಉದಾಹರಣೆಗಳು ತೀರಾ ಕಮ್ಮಿ.
ಹಾಗ್ನೋಡಿದ್ರೆ, ಸ್ಯಾಂಡಲ್ ವುಡ್ ನಲ್ಲಿ ಶಿವರಾಜ್ ಕುಮಾರ್ ಅಜಾತಶತ್ರು. ಅವರ ಟೆಂಪರ್ ಅಷ್ಟು ಸುಲಭವಾಗಿ ರೈಸ್ ಆಗಲ್ಲ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಸದಾ ಕೆಲಸದ ಮೇಲೆ ಶ್ರದ್ಧೆ ಇಟ್ಟಿರುವ ನಾಯಕ 'ಕರುನಾಡ ಚಕ್ರವರ್ತಿ' ಶಿವರಾಜ್ ಕುಮಾರ್.
'ದೊಡ್ಡ ಸ್ಟಾರ್' ಎಂಬ ಅಹಂ ಇಲ್ಲದೆ, ಶೂಟಿಂಗ್ ಟೈಮ್ ಗೆ ಸರಿಯಾಗಿ ಹಾಜರ್ ಆಗಿ ನಿರ್ಮಾಪಕರ ಡಾರ್ಲಿಂಗ್ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ನಟ ಶಿವರಾಜ್ ಕುಮಾರ್. ಇಂತಿಪ್ಪ ಶಿವಣ್ಣ 'ಕವಚ' ಶೂಟಿಂಗ್ ಟೈಮ್ ನಲ್ಲಿ ಕೆಲವರ ಮೇಲೆ ಕೂಗಾಡಿದ್ದರಂತೆ. ಹೀಗೆ ಆಗಿದ್ದು ಯಾಕೆ.? ಉತ್ತರ ಇಲ್ಲಿದೆ, ಓದಿರಿ...

ಕೋಪ ಹೆಚ್ಚಾಗಿತ್ತು....
ಇತ್ತೀಚಿನ ದಿನಗಳಲ್ಲಿ ಶಿವಣ್ಣನಿಗೆ ಕೋಪ ಸ್ವಲ್ಪ ಜಾಸ್ತಿ ಆಗಿತ್ತಂತೆ. ಅದರಲ್ಲೂ 'ಕವಚ' ಶೂಟಿಂಗ್ ಟೈಮ್ ನಲ್ಲಿ ಅವರು ಕೆಲವರ ಮೇಲೆ ಮುನಿಸಿಕೊಂಡಿದ್ದರಂತೆ. ಸಾಲದಕ್ಕೆ, ಒಂದಿಬ್ಬರಿಗೆ ಬೈದಿದ್ದರಂತೆ.

ಯಾಕೆ ಹೀಗೆ.?
'ಕವಚ' ಸಿನಿಮಾದಲ್ಲಿ ಹೇಳಿ ಕೇಳಿ ಶಿವಣ್ಣ ಕುರುಡನಾಗಿ ಕಾಣಿಸಿಕೊಳ್ತಿದ್ದಾರೆ. ಅಂಧನಾಗಿ ನಟಿಸಬೇಕು ಅಂದ್ರೆ, ಕಣ್ಣಿನ ಗುಡ್ಡೆಗಳನ್ನ ಮೇಲಕ್ಕೆತ್ತಿಕೊಳ್ಳಬೇಕು. ಹೀಗೆ ಮಾಡಿ ಮಾಡಿ ಶಿವಣ್ಣನಿಗೆ ಪ್ರತಿದಿನ ತಲೆ ನೋವು ಕಾಡುತ್ತಿತ್ತಂತೆ. ಅತಿಯಾದ ತಲೆ ನೋವಿನ ಪರಿಣಾಮ ಕಿರಿಕಿರಿಗೊಂಡಿದ್ದ ಶಿವಣ್ಣ ಕೆಲವರಿಗೆ ರೇಗಿದ್ದರಂತೆ.

ಕ್ಷಮೆ ಕೇಳಿದ ಶಿವಣ್ಣ.!
''ತಲೆನೋವು ಜಾಸ್ತಿ ಆಗಿ ಹಲವರಿಗೆ ಬೈದಿದ್ದೇನೆ. ಜಗಳ ಮಾಡಿಕೊಂಡಿದ್ದೇನೆ. ಇದರಿಂದ ಬೇಸರ ಆಗಿದ್ದರೆ ಕ್ಷಮಿಸಿ'' ಎಂದು ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಶಿವಣ್ಣ ಕೇಳಿಕೊಂಡರು. ದೊಡ್ಡ ಗುಣ ಅಂದರೆ ಇದೇ ಅಲ್ಲವೇ.!

ರೀಮೇಕ್ ಸಿನಿಮಾ.!
''ಇನ್ಮುಂದೆ ರೀಮೇಕ್ ಸಿನಿಮಾ ಮಾಡಲ್ಲ'' ಅಂತ ಶಿವಣ್ಣ ಪ್ರತಿಜ್ಞೆ ಮಾಡಿದ್ದರು. ಆದ್ರೆ, ಮಲಯಾಳಂ ನ 'ಒಪ್ಪಂ' ಚಿತ್ರವನ್ನ ನೋಡಿ 'ಕವಚ' ಚಿತ್ರಕ್ಕೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟರು. ಮೂಲ ಚಿತ್ರದಂತೆಯೇ 'ಕವಚ' ಕೂಡ ಉತ್ತಮವಾಗಿ ಮೂಡಿಬರಬೇಕು ಎನ್ನುವುದು ಶಿವಣ್ಣನ ಹಂಬಲ. ಸದ್ಯ 'ಕವಚ' ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.


Click it and Unblock the Notifications











