For Quick Alerts
  ALLOW NOTIFICATIONS  
  For Daily Alerts

  'ಸಲಗ' ನೋಡಿದ ಶಿವಣ್ಣ: ಹೊಗಳಿದ್ದು ಯಾವ ನಟರನ್ನು?

  |

  ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ 'ಸಲಗ' ಸಿನಿಮಾವನ್ನು ಚಿತ್ರಮಂದಿರದಲ್ಲಿಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೀಕ್ಷಿಸಿದರು.

  ಸಿನಿಮಾ ವೀಕ್ಷಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶಿವರಾಜ್ ಕುಮಾರ್, ''ಸಲಗ' ಸಿನಿಮಾ ನನಗೆ ಇಷ್ಟವಾಯಿತು, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ಎನಿಸದಂತೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ನಟನೆ, ನಿರ್ದೇಶನ ಎರಡನ್ನೂ ಚೆನ್ನಾಗಿ ಮಾಡಿದ್ದಾರೆ'' ಎಂದು ಹೊಗಳಿದರು.

  'ಸಲಗ' ಸಿನಿಮಾದಲ್ಲಿ ಸಣ್ಣ-ಸಣ್ಣ ಪಾತ್ರಗಳು ಸಹ ಚೆನ್ನಾಗಿವೆ. ಎಲ್ಲರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ದೊಡ್ಡ ನಟರು ನಟಿಸಬೇಕಿತ್ತೇನೊ ಎಂದುಕೊಳ್ಳುವಂಥ ಪಾತ್ರಗಳನ್ನು ಸಹ ಹೊಸ ನಟರು ಬಹಳೆ ಚೆನ್ನಾಗಿ ನಟಿಸಿದ್ದಾರೆ. 'ಟಗರು'ನಲ್ಲಿ ಕಾಕ್ರೋಚ್ ಆಗಿದ್ದ ಸುಧಿ 'ಸಾವಿತ್ರಿ' ಪಾತ್ರ ಮಾಡಿದ್ದಾರೆ. ಅದು ಬಹಳ ಎಂಗೇಜಿಂಗ್ ಆಗಿದೆ. ದುನಿಯಾ ವಿಜಯ್‌ ಸಣ್ಣ ವಯಸ್ಸಿನ ಪಾತ್ರ ಮಾಡಿದ ಹುಡುಗನೂ ಬಹಳ ಚೆನ್ನಾಗಿ ನಟಿಸಿದ್ದಾನೆ. ಸಿನಿಮಾದಲ್ಲಿ ಸದಾ ನಗುತ್ತಲೇ ಇರುವ ಪಾತ್ರವೊಂದಿದೆ ಅದೂ ಸಹ ನನಗೆ ಇಷ್ಟವಾಯಿತು'' ಎಂದು ಶಿವಣ್ಣ ಹೊಸ ನಟರನ್ನು ಹೊಗಳಿದರು.

  ''ದುನಿಯಾ ವಿಜಯ್ ಬಗ್ಗೆ ಹೇಳಂಗೇ ಇಲ್ಲ. 'ದುನಿಯಾ' ಸಿನಿಮಾದಲ್ಲೇ ಪ್ರೂವ್ ಮಾಡಿಬಿಟ್ಟಿದ್ದಾರೆ. ಅದಕ್ಕೂ ಮುನ್ನಾ ನಮ್ಮೊಟ್ಟಿಗೆ ನಟಿಸುವಾಗಲೂ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದರು. ಇದರಲ್ಲಿ ನಿರ್ದೇಶನ ಸಹ ಚೆನ್ನಾಗಿ ಮಾಡಿದ್ದಾರೆ. ಕತೆ ಹೇಳಿಬಿಡಬಹುದು ಆದರೆ ಚಿತ್ರಕತೆ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ ಅದನ್ನು ಚೆನ್ನಾಗಿ ಮಾಡಿದ್ದಾರೆ ವಿಜಯ್. ಧನಂಜಯ್ ಸಹ ಚೆನ್ನಾಗಿ ನಟಿಸಿದ್ದಾರೆ. ಅವರು ಬಹಳ ಮುದ್ದಾಗಿ ಕಾಣುತ್ತಾರೆ. ನಟಿ ಸಂಜನಾ ಮುದ್ದಾಗಿದ್ದಾರೆ ಜೊತೆಗೆ ಬೋಲ್ಡ್ ಆಗಿಯೂ ನಟಿಸಿದ್ದಾರೆ. ಸುಧಾಕರ್ ಎಂಬ ನಟರೂ ಸಿನಿಮಾದಲ್ಲಿದ್ದಾರೆ ಆದರೆ ಅವರು ಇಂದು ನಮ್ಮೊಂದಿಗೆ ಇಲ್ಲ ಅವರೂ ಸಹ ಬಹಳ ಚೆನ್ನಾಗಿ ನಟಿಸಿದ್ದಾರೆ'' ಎಂದು ನಟರ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದರು ಶಿವರಾಜ್ ಕುಮಾರ್.

  ''ಕ್ಯಾಮೆರಾ ಕೆಲಸ ಅದ್ಭುತವಾಗಿದೆ. ಸಂಗೀತ ನೀಡಿರುವ ಚರಣ್ ರಾಜ್ ಬಗ್ಗೆ ಹೇಳುವಂತೆಯೇ ಇಲ್ಲ. ಬಹಳ ಚೆನ್ನಾಗಿ ಸಂಗೀತ ಕೊಟ್ಟಿದ್ದಾರೆ. ಒಟ್ಟಾರೆ ಪ್ಯಾಕೇಜ್ ಬಹಳ ಚೆನ್ನಾಗಿದೆ. ಸಂಭಾಷಣೆ ಅಂತೂ ಅತ್ಯದ್ಭುತವಾಗಿದೆ. ಮಾಸ್ತಿ ಬಗ್ಗೆ ಹೇಳಂಗೇ ಇಲ್ಲ. 'ಟಗರು'ನಲ್ಲಿ ಏನು ಬರೆದಿದ್ದರೊ ಅದಕ್ಕೆ ಭಿನ್ನವಾಗಿ ಇದರಲ್ಲಿ ಬರೆದಿದ್ದಾರೆ. ಅದು ಯಶಸ್ವಿಯೂ ಆಗಿದೆ. ಇಡೀ ಸಿನಿಮಾವೇ ಎಂಗೇಜಿಂಗ್ ಆಗಿದೆ. ಒಂದೊಂದು ಅಂಶವನ್ನು ಬೊಟ್ಟು ಮಾಡಿ ತೋರಿಸಲಾಗುವುದಿಲ್ಲ. ಒಟ್ಟಾರೆ ಸಿನಿಮಾವೇ ಚೆನ್ನಾಗಿದೆ'' ಎಂದಿದ್ದಾರೆ ಶಿವರಾಜ್ ಕುಮಾರ್.

  'ಸಲಗ' ಸಿನಿಮಾದಲ್ಲಿ 'ಓಂ' ಸಿನಿಮಾದ ದೃಶ್ಯ ಬಳಸಿಕೊಂಡಿರುವ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ''ಬೇರೆ ಹಿಟ್ ಸಿನಿಮಾಗಳ ರೆಫರೆನ್ಸ್‌ಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳುವುದು ತಪ್ಪು ಎನ್ನಲಾಗದು. 'ಓಂ' ಸಿನಿಮಾವನ್ನು ಉಪೇಂದ್ರ ಹಾಗೆ ಮಾಡಿಬಿಟ್ಟಿದ್ದಾರೆ. ಆ ಸಿನಿಮಾ ಒಂದು ರೀತಿ ಓಂಕಾರದಂತೆ ಆಗಿದೆ. ಹಾಗಾಗಿ ಆ ಸಿನಿಮಾದ ರೆಫರೆನ್ಸ್ ಬಳಸಿಕೊಳ್ಳುತ್ತಾರೆ. ಯಾವುದೇ ನಟರ ಹಿಟ್ ಸಿನಿಮಾದ ರೆಫರೆನ್ಸ್ ಬಳಸಿಕೊಳ್ಳುವುದು ತಪ್ಪೆಂದೇನು ಅಲ್ಲ. ಸ್ವತಃ ದುನಿಯಾ ವಿಜಯ್‌ರ 'ದುನಿಯಾ' ಸಿನಿಮಾವೇ ಸೂಪರ್ ಹಿಟ್ ಸಿನಿಮಾ ಇದೆ. ಅದರ ರೆಫರೆನ್ಸ್ ಸಹ ಕೆಲವು ಸಿನಿಮಾಗಳಲ್ಲಿ ಇವೆ'' ಎಂದರು ಶಿವರಾಜ್ ಕುಮಾರ್.

  English summary
  Shiva Rajkumar watched Salaga movie and gave his opinion about the movie. He said Duniya Vijay did very good job as director and actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X