For Quick Alerts
  ALLOW NOTIFICATIONS  
  For Daily Alerts

  'ಭರತ ಚಕ್ರವರ್ತಿ'ಯಾದ ಕರುನಾಡ ಚಕ್ರವರ್ತಿ ಶಿವಣ್ಣ

  By Pavithra
  |

  'ಕರುನಾಡ ಚಕ್ರವರ್ತಿ', 'ಹ್ಯಾಟ್ರಿಕ್ ಹೀರೋ', 'ನಾಟ್ಯ ಸಾರ್ವಭೌಮ', 'ಗಾಜನೂರು ಗಂಡುಗಲಿ' ಹೀಗೆ ಸಾಕಷ್ಟು ಬಿರುದುಗಳಿಂದ ಕರೆಸಿಕೊಳ್ಳುವ ನಟ ಶಿವರಾಜ್ ಕುಮಾರ್ ಅವರ ಮುಡಿಗೆ ಮತ್ತೊಂದು ಬಿರುದು ನೀಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

  'ಟಗರು' ಸಿನಿಮಾ ಯಶಸ್ವಿ ನೂರು ದಿನಗಳು ಪೂರೈಸಿದೆ. ಮುಂದಿನ ವಾರ 23 ತಾರೀಖಿಗೆ 125 ದಿನಗಳು ಪೂರೈಸುತ್ತಿದೆ. ಇದೇ ಹಿನ್ನಲೆಯಲ್ಲಿ ಚಿತ್ರತಂಡ ಹಾಗೂ ಅಭಿಮಾನಿಗಳು ಅದ್ಧೂರಿ ಸಮಾರಂಭವನ್ನ ಆಯೋಜಿಸಲಾಗಿದೆ.

  ಬದಲಾಯಿತು ಗಾಂಧಿನಗರದಲ್ಲಿ 'ಟಗರು' ಚಿತ್ರಮಂದಿರಬದಲಾಯಿತು ಗಾಂಧಿನಗರದಲ್ಲಿ 'ಟಗರು' ಚಿತ್ರಮಂದಿರ

  ಇದೇ ಸಂದರ್ಭದಲ್ಲಿ ಸುಮಾರು ಸುಮಾರು 25ಕ್ಕೂ ಹೆಚ್ಚು ಸಂಘಟನೆಗಳಿಂದ ಶಿವರಾಜ್ ಕುಮಾರ್ ಅವರಿಗೆ ಹೊಸ ಬಿರುದು ನೀಡಿ ಸನ್ಮಾನಿಸಲಾಗುತ್ತಿದೆ. ಇನ್ನು ಮುಂದೆ ಶಿವಣ್ಣನ ಹೆಸರಿನ ಮುಂದೆ 'ಭರತ ಚಕ್ರವರ್ತಿ' ಎಂದು ಸೇರಿಕೊಳ್ಳಲಿದೆ.

  ಕನ್ನಡ ಸಿನಿಮಾರಂಗದಲ್ಲಿ ಸತತ 32 ವರ್ಷಗಳು ಕಲಾ ದೇವಿಯ ಸೇವೆ ಮಾಡಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಅಭಿಮಾನಿಗಳನ್ನು ಸ್ನೇಹಿತರ ಹಾಗೆ ಭಾವಿಸುವ ಸ್ನೇಹಜೀವಿ, ಬಡವರ ಕಂಬನಿಗೆ ಸದಾ ಮಿಡಿಯುವ ಕನ್ನಡದ ಮಹಾನ್ ಕಲಾವಿದ ಎಂದು ಶಿವರಾಜ್ ಕುಮಾರ್ ಅವರನ್ನು ಅಭಿನಂದಿಸಲು ಮುಂದಾಗಿದ್ದಾರೆ ಅಭಿಮಾನಿಗಳು.

  English summary
  Kannada actor Shivraj Kumar will be honored with the 'Bharatha Chakravarti' award. This title will be honored at the 125th day of the Tagaru movie program .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X