For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ರುಸ್ತುಂ ನೋಡಲಿದ್ದಾರೆ ಶಿವರಾಜ್ ಕುಮಾರ್

  |
  Rustum Movie: ರುಸ್ತುಂ ಸಿನೆಮಾ ಅಭಿಮಾನಿಗಳೊಂದಿಗೆ ನೋಡ್ತಾರೆ ಶಿವಣ್ಣ | FILMIBEAT KANNADA

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಎಲ್ಲೆಡೆಯೂ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಇದು ಪಕ್ಕಾ ಬ್ಲಾಕ್ ಬಸ್ಟರ್ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಸಾಮಾನ್ಯವಾಗಿ ಸಿನಿಮಾ ರಿಲೀಸ್ ದಿನ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಗಳಿಗೆ ಸ್ಟಾರ್ ನಟರು ಭೇಟಿ ನೀಡುತ್ತಾರೆ. ಸಿನಿಮಾ ಸಕ್ಸಸ್ ಆದ ಮೇಲೆ ವಿಜಯಯಾತ್ರೆ ಎಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಇತರೆ ಜಿಲ್ಲೆಗಳ ಚಿತ್ರಮಂದಿರಗಳಿಗೆ ಹೋಗ್ತಾರೆ.

  Rustum Review: ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ Rustum Review: ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ

  ಆದರೆ, ಶಿವಣ್ಣ ರುಸ್ತುಂ ಚಿತ್ರವನ್ನ ರಿಲೀಸ್ ಆದ ಎರಡನೇ ದಿನವೇ ಮೈಸೂರಿನಲ್ಲಿ ನೋಡಲಿದ್ದಾರೆ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ರುಸ್ತುಂ ಪ್ರದರ್ಶನವಾಗುತ್ತಿದ್ದು, ಇಂದು ಸಂಜೆ 4 ಗಂಟೆ ಶೋ ವೀಕ್ಷಿಸಲಿದ್ದಾರೆ ಹ್ಯಾಟ್ರಿಕ್ ಹೀರೋ.

  ಸಾಹಸ ನಿರ್ದೇಶಕ ರವಿವರ್ಮ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ಜಯಣ್ಣ ನಿರ್ಮಿಸಿದ್ದಾರೆ. ಆದರೆ, ಬಿಡುಗಡೆಗೂ ಮುಂಚೆ ರುಸ್ತುಂ ಚಿತ್ರದ ಬಗ್ಗೆ ಹೆಚ್ಚು ಪ್ರಚಾರ ಮಾಡಿಲ್ಲ ಎನ್ನುವು ಮಾತು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

  'ರುಸ್ತುಂ' ಮೊದಲಾರ್ಧ ಅಷ್ಟಕ್ಕಷ್ಟೆ, ಎರಡನೇ ಭಾಗ ಸೂಪರ್ 'ರುಸ್ತುಂ' ಮೊದಲಾರ್ಧ ಅಷ್ಟಕ್ಕಷ್ಟೆ, ಎರಡನೇ ಭಾಗ ಸೂಪರ್

  ಇದೀಗ, ಬಿಡುಗಡೆಯಾದ ನಂತರದ ದಿನದಲ್ಲೇ ಥಿಯೇಟರ್ ವಿಸಿಟ್ ಕೊಡುತ್ತಿರುವುದು ಪ್ರೇಕ್ಷಕರಿಗೆ ಇನ್ನಷ್ಟು ಜೋಶ್ ತುಂಬಲಿದೆ. ಇನ್ನುಳಿದಂತೆ ಶಿವಣ್ಣ ಜೊತೆಯಲ್ಲಿ, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ಮಹೇಂದ್ರನ್, ಶಿವರಾಜ್ ಕೆ ಆರ್ ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  English summary
  Kannada Actor Shiva rajkumar will be watching RUSTUM movie in Mysore District Shanthala Theatre. Movie starts at 4pm and ends by 6.30pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X