'ಎಷ್ಟು ದಿನ ಅಂತ ಒಳ್ಳೆಯವನಾಗಿ ಇರಲಿ, ಕೆಟ್ಟವನಾಗಿ ನೋಡೋಣ' ಶಿವಣ್ಣ ಹೀಗೆ ಹೇಳಿದ್ದೇಕೆ?

Recommended Video

Shivaraj kumar will playing villain role in his next film | Oneindia Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ 'ಆಯುಷ್ಮಾನ್ ಭವ' ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದೆ ತಿಂಗಳು 15ರಂದು ಬಹು ನಿರೀಕ್ಷೆಯ 'ಆಯುಷ್ಮಾನ್ ಭವ' ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೆ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇತ್ತೀಚಿಗೆ ಮಾಧ್ಯಮದ ಮುಂದೆ ಹಾಜರಾಗಿದ್ದರು.

'ಆಯುಷ್ಮಾನ್ ಭವ' ಸಿನಿಮಾ ಬಗ್ಗೆ ಮಾತನಾಡುತ್ತ ಶಿವಣ್ಣ "ಎಷ್ಟು ದಿನ ಅಂತ ಒಳ್ಳೆಯವನಾಗಿ ಇರಲಿ, ಕೆಟ್ಟವನಾಗಿ ನೋಡೋಣ" ಎನ್ನುವ ಮಾತನ್ನು ಹೇಳಿ ಅಚ್ಚರಿ ಮೂಡಿಸಿದ್ರು. ಅಂದ್ಹಾಗೆ ಶಿವಣ್ಣ ದಿಢೀರನೆ ಈ ಮಾತನ್ನು ಹೇಳಲು ಕಾರಣವೇನು ಅಂತ್ಕೋತ್ತಿದ್ದೀರಾ. ಸೆಂಚುರಿ ಸ್ಟಾರ್ ಮುಂದಿನ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಬಂಗಾರ S/O ಬಂಗಾರದ ಮನುಷ್ಯ' ಸಿನಿಮಾ ನಿರ್ದೇಶನ ಮಾಡಿದ್ದ ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಶಿವಣ್ಣ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈಗಾಗಲೆ ಯೋಗಿ ಚಿತ್ರಕಥೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರಂತೆ. ಚಿತ್ರದಲ್ಲಿ ಶಿವಣ್ಣ ಸಂಪೂರ್ಣವಾಗಿ ಖಳ ನಟನಾಗಿ ಕಾಣಿಸಿಕೊಳ್ಳಲಿದ್ದಾರಂತೆ.

Kannada Actor Shivaraj Kumar Will Playing Villain Role In His Next Film

'ಓಂ' ಸಿನಿಮಾದಿಂದ ಸ್ಫೂರ್ತಿ ಪಡೆದು ಯೋಗಿ ಕಥೆ ಮಾಡಿದ್ದಾರಂತೆ. ಈ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, "ವಿಭಿನ್ನವಾದ ಪಾತ್ರ, ನೆಗೆಟಿವ್ ಶೇಡ್ ಇದೆ. ಓಂ ಸಿನಿಮಾದಿಂದ ಸ್ಫೂರ್ತಿ ಪಡೆದು ಕಥೆ ಮಾಡಿದ್ದಾರೆ. ವಿಲನ್ ಪಾತ್ರ ಮಾಡುವುದು ಒಂದು ಚಾಲೆಂಜಿಂಗ್, ಬದಲಾವಣೆ ಇರಲಿದೆ ಎನ್ನುವ ಕಾರಣಕ್ಕೆ ವಿಲನ್ ಆಗಿ ಮಾಡುತ್ತಿದ್ದೇನೆ. ಎಷ್ಟು ದಿನ ಅಂತ ಒಳ್ಳೆಯವನಾಗಿರಲಿ, ಕೆಟ್ಟವನಾಗಿ ನೋಡೊಣ" ಎಂದು ವಿಲನ್ ಆಗಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಲಾವಿದರು ಒಂದೆ ರೀತಿಯ ಪಾತ್ರಕ್ಕೆ ಸೀಮಿತರಾಗಿರದೆ, ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೀರೋಯಿಸಂ, ಬಿಲ್ಡಪ್ ಡೈಲಾಗ್, ಫೈಟಿಂಗ್, ಸಾಂಗ್ಸ್ ಮಾತ್ರವಲ್ಲದೆ ಹೊಸತನ, ವಿನೂತನ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸ್ಟಾರ್ ನಟರು ಸಹ ಈ ಹೊಸ ಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ.

ಸದ್ಯ ವಿಲನ್ ಪಾತ್ರಕ್ಕೆ ಬಣ್ಣಹಚ್ಚುತ್ತಿರುವ ಶಿವಣ್ಣನನ್ನು ನೋಡಲು ಚಿತ್ರಾಭಿಮಾನಿಗಳು ಕಾತುರರಾಗಿದ್ದಾರೆ. ಮೊದಲ ಬಾರಿಗೆ ಸಂಪೂರ್ಣ ವಿಲನ್ ಪಾತ್ರ ಮಾಡಲು ಶಿವಣ್ಣ ಕೂಡ ಎಕ್ಸಾಯಿಟ್ ಆಗಿದ್ದಾರೆ. ಶಿವಣ್ಣ ಸದ್ಯ 'ಭಜರಂಗಿ-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 'ದ್ರೋಣ' ಸಿನಿಮಾ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಆ ನಂತರ ಶಿವಣ್ಣ ಮತ್ತು ಯೋಗಿ ಜಿ ರಾಜ್ ಸಿನಿಮಾ ಸಿನಿಮಾ ಸೆಟ್ಟೇರಲಿದೆ.

More from Filmibeat

English summary
Kannada actor Shivaraj kumar will playing villain role in his next film. This film is directed by Yogi G Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X