ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಸಾಥ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನಾವರಣವಾಗಲಿದೆ.

ಗುರುದತ್ ಗಾಣಿಗ ನಿರ್ದೇಶನದಲ್ಲಿ ನಟಿಸುತ್ತಿರುವ PD35 ಚಿತ್ರದ ಟೈಟಲ್ ಜುಲೈ 4 ರಂದು ಬೆಳಗ್ಗೆ 10.10 ಗಂಟೆಗೆ ಪ್ರಕಟವಾಗಲಿದೆ. ವಿಶೇಷ ಅಂದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ. ಅಂದ್ಹಾಗೆ, ಈ ಸಿನಿಮಾದ ತಮಿಳಿನಲ್ಲೂ ಬಿಡುಗಡೆಯಾಗಲಿದ್ದು, ತಮಿಳು ಭಾಷೆ ಪೋಸ್ಟರ್‌ನ್ನು ನಟ ಆರ್ಯ ರಿಲೀಸ್ ಮಾಡಲಿದ್ದಾರೆ.

ಇದೊಂದು ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ನಟಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಗುರುದತ್ ಗಾಣಿಗ ಈ ಚಿತ್ರ ನಿರ್ದೇಶಿಸಲಿದ್ದಾರೆ.

shiva-rajkumar-will-release-title-and-first-look-poster-of-prajwal-devaraj-new-movie

ಇನ್ನು ಕುಮಾರ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಒಳಗೊಂಡಿದೆ. ಖ್ಯಾತ ಸಂಭಾಷಣೆಕಾರ ಮಾಸ್ತಿ ಡೈಲಾಗ್ ಬರೆಯಲಿದ್ದಾರೆ.

ಸದ್ಯಕ್ಕೆ, ಚಿತ್ರದ ನಾಯಕಿಯ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಕನ್ನಡದ ನಟಿಯರಾದ ಅಧಿತಿ ಪ್ರಭುದೇವ ಅಥವಾ ಆಶಿಕಾ ರಂಗನಾಥ್ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ.

Recommended Video

ಘಟನೆ ಬಗ್ಗೆ ಸ್ಪಷ್ಟ ಪಡಿಸಿದ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ | Jaggesh | Yathiraj | Filmibeat Kannada

ಪ್ರಜ್ವಲ್ ದೇವರಾಜ್ ಸಿನಿಮಾಗಳು
'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದ ಬಳಿಕ ಪ್ರಜ್ವಲ್ ನಟನೆಯ ಯಾವ ಸಿನಿಮಾನೂ ತೆರೆಗೆ ಬಂದಿಲ್ಲ. ದಿವಂಗತ ನಿರ್ಮಾಪಕ ರಾಮು ಬ್ಯಾನರ್‌ನಲ್ಲಿ ತಯಾರಾಗಿರುವ 'ಅರ್ಜುನ್ ಗೌಡ' ಬಿಡುಗಡೆಗೆ ಸಜ್ಜಾಗಿದೆ. ಇದರ ಜೊತೆಗೆ 'ವೀರಂ' ಸಿನಿಮಾನೂ ಸಿದ್ದವಾಗುತ್ತಿದೆ.

More from Filmibeat

English summary
Prajwal Devaraj's 35th movie, Prajwal Devaraj and Gurudatha Ganiga, Gurudatha Ganiga next film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X