ಅಮಿತಾಭ್ ಬಚ್ಚನ್ ಗೆ ಶುಭ ಕೋರಿದ ಹ್ಯಾಟ್ರಿಕ್ ಹೀರೋ ಶಿವಣ್ಣ
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಕೇಂದ್ರ ಸರ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿ ಗೌರವಿಸಿದೆ. ಬಿಗ್-ಬಿ ಅವರಿಗೆ ಈ ಪ್ರಶಸ್ತಿ ಸಿಕ್ಕಿದ ಹಿನ್ನಲೆ ಚಿತ್ರರಂಗದಿಂದ ಅನೇಕರು ಶುಭಕೋರಿದ್ದಾರೆ.
ಈ ಕಡೆ ಸ್ಯಾಂಡಲ್ ವುಡ್ ಇಂಡಸ್ಟ್ರಿಯಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಫೇಸ್ ಬುಕ್ ಮೂಲಕ ಅಮಿತಾಭ್ ಗೆ ಶುಭಾಶಯ ತಿಳಿಸಿದ್ದಾರೆ.
ಈ ವೇಳೆ ಡಾ ರಾಜ್ ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ, ಮನೆಯವರೆಲ್ಲ ಹೇಗೆ ಸಂಭ್ರಮಿಸಿದ್ದರು ಎಂದು ಶಿವಣ್ಣ ನೆನಪಿಸಿಕೊಂಡಿದ್ದಾರೆ.

''ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ನನ್ನ favourite @amitabhbachchan ರವರಿಗೆ ಶುಭಾಶಯಗಳು. ಅಭಿಮಾನಿಗಳಿಗೆ ಹಾಗು ಕುಟುಂಬದವರಿಗೆ ಇದು ಎಷ್ಟು ಸಂತಸದ ವಿಷಯ ಊಹಿಸಬಲ್ಲೆ ಯಾಕೆಂದ್ರೆ ಅಪ್ಪಾಜಿಯವರಿಗೆ ಈ ಪ್ರಶಸ್ತಿ ಬಂದಾಗ ನಾವೆಲ್ಲಾ ಅಷ್ಟೇ ಸಂಭ್ರಮಿಸಿದ್ದೆವು'' ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ, ಡಾ ರಾಜ್ ಕುಮಾರ್ ಅವರಿಗೆ 1995ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತ್ತು. ಕನ್ನಡದಲ್ಲಿ ಈ ಪ್ರಶಸ್ತಿ ಪಡೆದ ಏಕೈಕ ನಟ ಡಾ ರಾಜ್.


Click it and Unblock the Notifications











