'ವೆನಿಲ್ಲಾ' ಟ್ರೇಲರ್ ಸೂಪರ್ ಎಂದರು ಶಿವರಾಜ್ ಕುಮಾರ್

By Naveen

'ವೆನಿಲ್ಲಾ' ಸಿನಿಮಾ ಜೂನ್ 1 ರಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಟ್ರೇಲರ್ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈಗ ನಟ ಶಿವರಾಜ್ ಕುಮಾರ್ ಸಹ ಸಿನಿಮಾದ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ 'ವೆನಿಲ್ಲಾ' ಟೀಂ ಗೆ ಶಿವಣ್ಣ ಶುಭ ಹಾರೈಸಿದ್ದಾರೆ. ಸೆಂಚುರಿ ಸ್ಟಾರ್ ಮಾತುಗಳು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

'ವೆನಿಲ್ಲಾ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಇದು ಜಯತೀರ್ಥ ನಿರ್ದೇಶನದ ಐದನೇ ಸಿನಿಮಾವಾಗಿದೆ. 'ವೆನಿಲ್ಲಾ' ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

shiva rajkumar wishes to Vanilla kannada movie team

'Capnophobia' ಎಂಬ ಒಂದು ಕಾಯಿಲೆ 'ವೆನಿಲ್ಲಾ' ಸಿನಿಮಾದ ಒಂದು ಭಾಗ ಆಗಿದೆ. ಈ ಚಿತ್ರದ ಕಥಾನಾಯಕಿಗೆ ಈ ಕಾಯಿಲೆ ಇರುತ್ತದೆ. 'Capnophobia' ಇರುವವರು ಹೊಗೆಯನ್ನು ನೋಡಿದರೆ ಭಯ ಪಡುತ್ತಾರೆ. ಇದೊಂದು ವಿಚಿತ್ರ ಕಾಯಿಲೆ ಆಗಿದ್ದು, ವಾಹನದ ಹೊಗೆ ಕರ್ಪೂರದ ಹೊಗೆ ಹೀಗೆ ಯಾವುದೇ ಹೊಗೆ ಕಂಡರು ಕಾಯಿಲೆ ಇರುವವರು ಭಯ ಪಡುತ್ತಾರೆ. ವಿಶೇಷ ಅಂದರೆ ಇದುವರೆಗೆ ಜಗತ್ತಿನ ಯಾವುದೇ ಸಿನಿಮಾದ ಕಥೆ ಕೂಡ ಈ ಒಂದು ವಿಷಯದ ಮೇಲೆ ಹೆಣೆದಿಲ್ಲ.

shiva rajkumar wishes to Vanilla kannada movie team

ಉಳಿದಂತೆ, ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದಾರೆ. ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ಅವರು ನಿರ್ಮಿಸಿರುವ 'ವೆನಿಲ್ಲಾ' ಚಿತ್ರವನ್ನ ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

More from Filmibeat

English summary
Kannada actor Shiva Rajkumar wishes to Vanilla kannada movie team. 'Beautiful Manasugalu' movie fame director Jayatheertha's 'Vanilla' kannada movie will releasing on june 1st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X