ಚಿತ್ರರಂಗಕ್ಕೆ ಬರುವ ಮೊದಲೇ ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ್ದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೂರುವರೆ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 1986ರಲ್ಲಿ ತೆರೆಕಂಡ 'ಆನಂದ್' ಸಿನಿಮಾದ ಮೂಲಕ ಆರಂಭವಾದ ಸಿನಿ ಪಯಣ 'ಭಜರಂಗಿ'ಯೊಂದಿಗೆ ಸಾಗುತ್ತಿದೆ.

ಇದೀಗ, ಕಾಲೇಜು ದಿನಗಳಲ್ಲಿ ಶಿವರಾಜ್ ಕುಮಾರ್ ನಟಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿವಣ್ಣ ನಟಿಸಿರುವ ಹಳೆ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲು ಅಣ್ಣಾವ್ರ ಸೂಪರ್ ಹಿಟ್ ಗೀತೆಗೆ ಅಭಿನಯಿಸಿರುವುದು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

Shiva Rajkumars College Days Video Viral

ಶಿವರಾಜ್ ಕುಮಾರ್ ತಮಿಳುನಾಡಿನ ಅದ್ಯಾರ್ ಯೂನಿವರ್ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ತಮ್ಮ ಸ್ನೇಹಿತೆ ಸ್ಮಿತಾ ಅವರೊಂದಿಗೆ ಅಣ್ಣಾವ್ರ ಹಾಲುಜೇನು ಹಾಡಿನ ಕವರ್ ಸಾಂಗ್‌ಗೆ ಅಭಿನಯಿಸಿದರು. ಬಹಳ ವರ್ಷದ ನಂತರ ಈ ವಿಡಿಯೋ ತುಣುಕು ಸದ್ದು ಮಾಡ್ತಿದೆ.

ಹಾಡನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ

https://fb.watch/5ROd082vK-/

ಎಲ್ಲರಿಗೂ ತಿಳಿದಿರುವಂತೆ ಶಿವಣ್ಣ ಹುಟ್ಟಿದ್ದು ಮದ್ರಾಸ್‌ನಲ್ಲಿ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಸಹ ಚೆನ್ನೈನಲ್ಲಿ ಮಾಡಿದ್ದರು. ಡ್ಯಾನ್ಸ್‌ನಲ್ಲಿ ತರಬೇತಿ ಪಡೆದ ಬಳಿಕ ಚಿತ್ರರಂಗ ಪ್ರವೇಶಿಸಿದರು.

Shiva Rajkumars College Days Video Viral

1974ರಲ್ಲಿ ಅಣ್ಣಾವ್ರು ನಟಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಶಿವರಾಜ್ ಕುಮಾರ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. 'ಆನಂದ್' ಚಿತ್ರದ ಮೂಲಕ ನಾಯಕನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ರಾಜ್ ಪುತ್ರ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಚಿತ್ರದ ಯಶಸ್ಸಿನೊಂದಿಗೆ ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು.

ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕರುನಾಡು ಚಕ್ರವರ್ತಿ ಈಗ ಸೆಂಚುರಿ ಸ್ಟಾರ್. ಸದ್ಯ, ಹರ್ಷ ನಿರ್ದೇಶನದಲ್ಲಿ ತಯಾರಾಗಿರುವ ಭಜರಂಗಿ 2 ಸಿನಿಮಾ ಬಿಡುಗಡೆಯಾಗಬೇಕಿದೆ.

More from Filmibeat

English summary
Kannada Actor shivarajkumar's college days video viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X