For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಬರುವ ಮೊದಲೇ ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ್ದ ಶಿವಣ್ಣ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೂರುವರೆ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 1986ರಲ್ಲಿ ತೆರೆಕಂಡ 'ಆನಂದ್' ಸಿನಿಮಾದ ಮೂಲಕ ಆರಂಭವಾದ ಸಿನಿ ಪಯಣ 'ಭಜರಂಗಿ'ಯೊಂದಿಗೆ ಸಾಗುತ್ತಿದೆ.

  ಇದೀಗ, ಕಾಲೇಜು ದಿನಗಳಲ್ಲಿ ಶಿವರಾಜ್ ಕುಮಾರ್ ನಟಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಣ್ಣಾವ್ರು ಅವತ್ತೇ 'ಕುಮಾರರಾಮ' ಸಿನಿಮಾ ಮಾಡಬೇಕಿತ್ತು, ಆದ್ರೆ ಆಗಿಲ್ಲ ಏಕೆ?ಅಣ್ಣಾವ್ರು ಅವತ್ತೇ 'ಕುಮಾರರಾಮ' ಸಿನಿಮಾ ಮಾಡಬೇಕಿತ್ತು, ಆದ್ರೆ ಆಗಿಲ್ಲ ಏಕೆ?

  ಶಿವಣ್ಣ ನಟಿಸಿರುವ ಹಳೆ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲು ಅಣ್ಣಾವ್ರ ಸೂಪರ್ ಹಿಟ್ ಗೀತೆಗೆ ಅಭಿನಯಿಸಿರುವುದು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

  ಶಿವರಾಜ್ ಕುಮಾರ್ ತಮಿಳುನಾಡಿನ ಅದ್ಯಾರ್ ಯೂನಿವರ್ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ತಮ್ಮ ಸ್ನೇಹಿತೆ ಸ್ಮಿತಾ ಅವರೊಂದಿಗೆ ಅಣ್ಣಾವ್ರ ಹಾಲುಜೇನು ಹಾಡಿನ ಕವರ್ ಸಾಂಗ್‌ಗೆ ಅಭಿನಯಿಸಿದರು. ಬಹಳ ವರ್ಷದ ನಂತರ ಈ ವಿಡಿಯೋ ತುಣುಕು ಸದ್ದು ಮಾಡ್ತಿದೆ.

  ಹಾಡನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  https://fb.watch/5ROd082vK-/

  ಎಲ್ಲರಿಗೂ ತಿಳಿದಿರುವಂತೆ ಶಿವಣ್ಣ ಹುಟ್ಟಿದ್ದು ಮದ್ರಾಸ್‌ನಲ್ಲಿ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಸಹ ಚೆನ್ನೈನಲ್ಲಿ ಮಾಡಿದ್ದರು. ಡ್ಯಾನ್ಸ್‌ನಲ್ಲಿ ತರಬೇತಿ ಪಡೆದ ಬಳಿಕ ಚಿತ್ರರಂಗ ಪ್ರವೇಶಿಸಿದರು.

  1974ರಲ್ಲಿ ಅಣ್ಣಾವ್ರು ನಟಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಶಿವರಾಜ್ ಕುಮಾರ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. 'ಆನಂದ್' ಚಿತ್ರದ ಮೂಲಕ ನಾಯಕನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ರಾಜ್ ಪುತ್ರ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಚಿತ್ರದ ಯಶಸ್ಸಿನೊಂದಿಗೆ ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು.

  ಸಿನಿ ಪಯಣದಲ್ಲಿ ಹೆಸರು ಮಾಡಿ ರಾಜಕೀಯ ಮಾಡಲು ಬಂದ ಸಿನಿತಾರೆಯರು | Filmibeat Kannada

  ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕರುನಾಡು ಚಕ್ರವರ್ತಿ ಈಗ ಸೆಂಚುರಿ ಸ್ಟಾರ್. ಸದ್ಯ, ಹರ್ಷ ನಿರ್ದೇಶನದಲ್ಲಿ ತಯಾರಾಗಿರುವ ಭಜರಂಗಿ 2 ಸಿನಿಮಾ ಬಿಡುಗಡೆಯಾಗಬೇಕಿದೆ.

  English summary
  Kannada Actor shivarajkumar's college days video viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X