'ಟಗರು' ಡ್ಯಾನ್ಸ್ ಮಾಡಿದ ಬೆಂಗಳೂರಿನ ಮಹಿಳೆಯರು
Recommended Video

ಶಿವರಾಜ್ ಕುಮಾರ್ ಅಭಿನಯದ ಎಲ್ಲ ಸಿನಿಮಾಗಳಿಗೆ ಕ್ರೇಜ್ ಇದ್ದೆ ಇರುತ್ತದೆ. ಆದರೆ 'ಟಗರು' ಸಿನಿಮಾಗೆ ಇರುವ ಕ್ರೇಜ್ ಮಾತ್ರ ಸಿಕ್ಕಾಪಟ್ಟೆ ಜೋರಾಗಿದೆ. 'ಟಗರು' ಡಿ.ಜೆ ನೈಟ್ ಕಾರ್ಯಕ್ರಮದ ನಂತರ ಈಗ ಮತ್ತೆ 'ಟಗರು' ಸೌಂಡ್ ಮಾಡುತ್ತಿದೆ.
'ಟಗರು' ಚಿತ್ರದ ಟೈಟಲ್ ಟ್ರ್ಯಾಕ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಇದೇ ಹಾಡಿಗೆ ಈಗ ಬೆಂಗಳೂರಿನ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಬಸವೇಶ್ವರ ನಗರದ ಆಪಲ್ ಫಿಟ್ನೆಸ್ ಸೆಂಟರ್ ನಲ್ಲಿ ಸರಿಸುಮಾರು 40 ಜನ ಡ್ಯಾನ್ಸರ್ಸ್ 'ಟಗರು' ಚಿತ್ರದ 'ಟಗರು ಒಂತು ಟಗರು..' ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅದರಲ್ಲಿಯೂ ಅನೇಕ ಸಂಖ್ಯೆಯ ಮಹಿಳೆಯರು ಇದರಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.
ಇನ್ನೂ 'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದಲ್ಲಿದೆ. 'ಟಗರು' ಸಿನಿಮಾ ಇದೇ ತಿಂಗಳು 23ಕ್ಕೆ ರಿಲೀಸ್ ಆಗುತ್ತಿದೆ. ಇಷ್ಟು ದಿನ ಸಿನಿಮಾಗಾಗಿ ಕಾಯುತ್ತಿದ್ದ ಶಿವಣ್ಣನ ಅಭಿಮಾನಿಗಳು ಇನ್ನೂ ಕೆಲವೇ ದಿನದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲಿದ್ದಾರೆ.


Click it and Unblock the Notifications











