'ಟಗರು' 100 ಡೇಸ್ : ಸಂತೋಷ್ ಚಿತ್ರಮಂದಿರದಲ್ಲಿ ಫ್ಯಾನ್ಸ್ ಜೊತೆ ಶಿವಣ್ಣ ಹಬ್ಬ
Recommended Video

ನಟ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಇಂದಿಗೆ ಸರಿಯಾಗಿ ನೂರು ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಬೆಂಗಳೂರಿನ ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ.
ಇಂದು ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇನಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿ ಸಂಘದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ನೂರರೂ ಸಂಖ್ಯೆಯ ಅಭಿಮಾನಿಗಳು ಸೇರಿದ್ದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಶಿವಣ್ಣನ ಜೊತೆಗೆ ನಟ ಧನಂಜಯ್, ನಟಿ ಮಾನ್ವಿತಾ ಹರೀಶ್, ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸಹ ಭಾಗಿಯಾಗಿದ್ದರು. ಇದರ ಜೊತೆಗೆ ಇಂದೇ 4 ಗಂಟೆಗೆ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಶಿವಣ್ಣನಿಗೆ ಸನ್ಮಾನ ಮಾಡಿ ಜನರಿಗೆ ಸಿಹಿ ಹಂಚಲಾಗುತ್ತದೆ. ಸಂಜೆ 6 ಗಂಟೆಗೆ ಜಿಟಿ ಮಾಲ್ ನಲ್ಲಿಯೂ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮೈಸೂರಿನ ಶಾಂತಲ ಚಿತ್ರಮಂದಿರದಲ್ಲಿ ಅಲ್ಲಿರುವ ಅಭಿಮಾನಿಗಳು ಪಟಾಕಿ ಸಿಡಿಸಿ, ಶಿವಣ್ಣನ ಕಟ್ ಔಟ್ ಗೆ ಹಾರ ಹಾಕಿ ಸಂಭ್ರಮಿಸಲಿದ್ದಾರೆ.

ಅಂದಹಾಗೆ, 'ಟಗರು' ಈ ವರ್ಷ ನೂರು ದಿನ ಪೂರೈಸಿದ ಕನ್ನಡದ ಮೊದಲ ಸಿನಿಮಾವಾಗಿದೆ.ಸೂರಿ ತಮ್ಮ ವಿಭಿನ್ನ ಸ್ಕ್ರೀನ್ ಪ್ಲೇ ಮೂಲಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಶ್ರೀ ಕಾಂತ್ ಬಂಡವಾಳ ಹಾಕಿದ್ದರು. ಧನಂಜಯ್, ಭಾವನ, ಮಾನ್ವಿತಾ ಹರೀಶ್, ವಸಿಷ್ಟ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











