ಕೊನೆಗೂ 'ಟಗರು' ಬರೋ ದಿನ ಮತ್ತು ಟೈಂ ನಿಗದಿಯಾಯ್ತು

By Bharath Kumar

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ನೋಡೋಕೆ ಅಭಿಮಾನಿ ಬಳಗ ಕಾದು ಕುಂತಿದೆ. ಆದ್ರೆ, ಸಿನಿಮಾ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಲೇ ಇತ್ತು. ಆದ್ರೀಗ, ಅಂತಿಮವಾಗಿ ಶಿವಣ್ಣನ 'ಟಗರು' ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಈ ಮೊದಲೇ ಹೇಳಿದಂತೆ ಫೆಬ್ರವರಿ ತಿಂಗಳಲ್ಲೇ 'ಟಗರು' ಗುಮ್ಮೋಕೆ ಬರ್ತಿದ್ದು, ಫೆಬ್ರವರಿ 23 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಅಬ್ಬರಿಸಿ ಬೊಬ್ಬಿರಿಯುತ್ತಿರುವ 'ಟಗರು' ದಕ್ಷಿಣ ಭಾರತದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ನಿರ್ದೇಶನ ಸೂರಿ ಅವರ ಮೇಕಿಂಗ್ ಸ್ಟೈಲ್, ರಾ ಆಕ್ಷನ್, ಜಬರ್ ದಸ್ತ್ ಹಾಡುಗಳು, ಶಿವಣ್ಣನ ಗೆಟಪ್, ವಸಿಷ್ಠ ಮತ್ತು ಧನಂಜಯ್ ಅವರ ರಗಡ್ ಲುಕ್...ಎಲ್ಲವೂ ಚಿತ್ರದ ಬಗ್ಗೆ ದೊಡ್ಡ ಭರವಸೆ ಮೂಡಿಸಿದೆ.

shiva rajkumars tagaru will release on febrauary 23rd

ವಿಶೇಷ ಅಂದ್ರೆ, 'ಟಗರು' ಚಿತ್ರವನ್ನ ನೋಡಲು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಗಮಿಸಲಿದ್ದಾರೆ. ದುನಿಯಾ ಸೂರಿ ನಿರ್ದೇಶನ ಮಾಡಿರುವ ಮಾನ್ವಿತ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರು. ಧನಂಜಯ್, ವಸಿಷ್ಠ ಸಿಂಹ ಖಳನಾಯಕರಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actor, hatric hero shivarajkumar starrer tagaru movies will releasing on febrauary 23rd. the movie directed by duniya suri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X