»   » ಜುಲೈ 12 ರಂದು ಶಿವರಾಜ್‌ ಹುಟ್ಟುಹಬ್ಬ.

ಜುಲೈ 12 ರಂದು ಶಿವರಾಜ್‌ ಹುಟ್ಟುಹಬ್ಬ.

Posted By: Staff
Subscribe to Filmibeat Kannada

ಮೊನ್ನೆಯಷ್ಟೇ ಅಭಿಮಾನಿಗಳಿಂದ 'ನಾಟ್ಯ ಸಾರ್ವಭೌಮ" ಬಿರುದನ್ನು ಧರಿಸಿಕೊಂಡು ಬೀಗುತ್ತಿರುವ 'ಯುವರಾಜ" ಶಿವರಾಜ್‌ ಕುಮಾರ್‌ ಮತ್ತೊಮ್ಮೆ ಅಭಿಮಾನಿಗಳ ಪ್ರೀತಿಯ ಮಳೆಯಲ್ಲಿ ತೊಯ್ಯಲು ಸಿದ್ಧವಾಗುತ್ತಿದ್ದಾರೆ. ವಿಷಯ ಇಷ್ಟೇ, ಜುಲೈ 12 ರಂದು ಶಿವರಾಜ್‌ ಹುಟ್ಟುಹಬ್ಬ .

ಶಿವರಾಜ್‌ರ 40 ನೇ ಹುಟ್ಟುಹಬ್ಬ ಆಚರಿಸುವ ಹೊಣೆಯನ್ನು 'ಅಖಿಲ ಕರ್ನಾಟಕ ಶಿವರಾಜ್‌ ಕುಮಾರ್‌ ಸೇನಾ ಸಮಿತಿ" ಹೊತ್ತುಕೊಂಡಿದೆ. ಪ್ರತಿವರ್ಷ ನೆಚ್ಚಿನ ನಾಯಕನ ಹುಟ್ಟುಹಬ್ಬದ ಆಚರಣೆಯ ನೆನಪಿಗಾಗಿ ದೀನ ದಲಿತರಿಗೆ ಉಪಯೋಗವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ಸೇನಾ ಸಮಿತಿ ಸಂಪ್ರದಾಯದಂತೆ ಪಾಲಿಸಿಕೊಂಡು ಬರುತ್ತಿದೆ. ಈ ವರ್ಷದ ಫಲಾನುಭವಿಗಳು ಅಂಗವಿಕಲರು.

ಮಹಾಲಕ್ಷ್ಮಿಪುರದ ಭೋವಿಪಾಳ್ಯದಲ್ಲಿರುವ ಶ್ರೀ ಸರ್‌. ಎಂ. ವಿಶ್ವೇಶ್ವರಯ್ಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದಲ್ಲಿರುವ ಐವರು ಅಂಗವಿಕಲರಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ಜುಲೈ 12 ರಂದು ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವತಃ ಶಿವರಾಜ್‌ ಕುಮಾರ್‌ ಅವರೇ ವಿತರಿಸುತ್ತಾರಂತೆ. ನಲವತ್ತಾಯಿತಲ್ಲ , ಜನಮುಖಿಯಾಗುತ್ತಿದ್ದಾರೆ ಅನ್ನೋಣವಾ?

English summary
Fans get ready for Shivarajkumar birthday celebration

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada