50 ದಿನ ಪೂರೈಸಿದ್ದಕ್ಕೆ ಧನ್ಯವಾದ ತಿಳಿಸಿದ ಶಿವಾಜಿ ಸುರತ್ಕಲ್ 2 ಚಿತ್ರತಂಡ; ಎಲ್ಲೆಲ್ಲಿ ಪ್ರದರ್ಶನ?

2020ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಸಾಧಿಸಿದ್ದ ಶಿವಾಜಿ ಸುರತ್ಕಲ್ ಚಿತ್ರದ ಸೀಕ್ವೆಲ್ ಶಿವಾಜಿ ಸುರತ್ಕಲ್ 2 ಇದೇ ವರ್ಷದ ಏಪ್ರಿಲ್ 14ರಂದು ಬಿಡುಗಡೆಗೊಂಡಿತು. ಮೊದಲ ಭಾಗವನ್ನು ನಿರ್ದೇಶಿಸಿದ್ದ ಆಕಾಶ್ ಶ್ರೀವತ್ಸ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.
ಮೊದಲ ಭಾಗದಲ್ಲಿ ರಣಗಿರಿ ರಹಸ್ಯವನ್ನು ಕಂಡುಹಿಡಿದಿದ್ದ ಶಿವಾಜಿ ಸುರತ್ಕಲ್ ಈ ಬಾರಿ ಮಾಯಾವಿಯ ಕೇಸ್ ಕೈಗೆತ್ತಿಕೊಂಡಿದ್ದರು. ಇನ್ನು ಈ ಚಿತ್ರವನ್ನು ಸಾಮಾನ್ಯ ಕನ್ನಡ ಸಿನಿ ರಸಿಕರು ಇಷ್ಟಪಟ್ಟಿದ್ದು, ಒಮ್ಮೆ ನೋಡಬಹುದು ಎಂಬ ರಿಪೋರ್ಟ್‌ಗಳನ್ನು ಚಿತ್ರ ಪಡೆದುಕೊಂಡಿತ್ತು.
ಈ ರೀತಿಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದ ಶಿವಾಜಿ ಸುರತ್ಕಲ್ 2 ನಿನ್ನೆ ( ಮೇ 2 ) ಐವತ್ತು ದಿನಗಳ ಓಟವನ್ನು ಚಿತ್ರಮಂದಿರಗಳಲ್ಲಿ ಪೂರೈಸಿದೆ. ಓಟಿಟಿ ಯುಗದಲ್ಲಿ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿದ ಮತ್ತೊಂದು ಚಿತ್ರ ಎನಿಸಿಕೊಂಡಿತು.
ಇನ್ನು ಚಿತ್ರ ಐವತ್ತು ದಿನಗಳನ್ನು ಪೂರೈಸಿದ್ದರ ಬಗ್ಗೆ ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ "ಶಿವಾಜಿ ಸುರತ್ಕಲ್ 2 ಚಿತ್ರವು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿದೆ. ಇದಕ್ಕೆ ಸಹಕರಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು" ಬರೆದುಕೊಂಡಿದ್ದಾರೆ.
ಈ ಟ್ವೀಟ್ ಅನ್ನು ಶೇರ್ ಮಾಡಿರುವ ನಟ ರಮೇಶ್ ಅರವಿಂದ್ ಗ್ರೇಟ್ ಟೀಮ್ ವರ್ಕ್ ಪೀಪಲ್ ಎಂದು ಬರೆದುಕೊಂಡು ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರ ಯಶವಂತಪುರದ ವೈಷ್ಣವಿ ಸಫೈರ್ ಮಾಲ್‌ನ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಹಾಗೂ ರಾಜ್‌ಕುಮಾರ್ ರಸ್ತೆಯ ಒರಾಯನ್ ಮಾಲ್‌ನ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಐವತ್ತು ದಿನಗಳನ್ನು ಪೂರೈಸಿದೆ.
ವೈಷ್ಣವಿ ಸಫೈರ್ ಮಾಲ್‌ನ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಎರಡು ಪ್ರದರ್ಶನಗಳು ಹಾಗೂ ಒರಾಯನ್ ಮಾಲ್‌ನ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ. ಈ ಚಿತ್ರಮಂದಿರಗಳನ್ನು ಹೊರತುಪಡಿಸಿ ಬೇರೆಲ್ಲೂ ಸಹ ಚಿತ್ರ ಪ್ರದರ್ಶನವನ್ನು ಕಾಣುತ್ತಿಲ್ಲ.
ಇನ್ನು ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವರು ಶಿವಾಜಿ ಸುರತ್ಕಲ್ 2 ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದರು ಹಾಗೂ ಚಿತ್ರ 25 ದಿನಗಳನ್ನು ಪೂರೈಸಿದ್ದಾಗ ಶುಭ ಕೋರಿದ್ದರು.


Click it and Unblock the Notifications











