ಹುಟ್ಟುಹಬ್ಬದ ಸಂಭ್ರಮದಲ್ಲಿ ರಮೇಶ್ ಅರವಿಂದ್; ಶಿವಾಜಿ ಸುರತ್ಕಲ್ 2 ಟೀಸರ್ ಔಟ್

ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಇಂದು ( ಸೆಪ್ಟೆಂಬರ್‌ 10 ) 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ಅವರಿಗೆ ಶಿವಾಜಿ ಸುರತ್ಕಲ್ 2 ಚಿತ್ರತಂಡ ಟೀಸರ್ ಅನ್ನು ಗಿಫ್ಟ್ ಆಗಿ ನೀಡಿದೆ.

ಹೌದು, ಇಂದು ರಮೇಶ್ ಅರವಿಂದ್ ಹುಟ್ಟುಹಬ್ಬದ ಪ್ರಯುಕ್ತ ಶಿವಾಜಿ ಸೂರತ್ಕಲ್ 2 ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ ಯಶಸ್ಸು ಸಾಧಿಸಿದ ನಂತರ ಇದೀಗ ಈ ಚಿತ್ರದ ಸೀಕ್ವೆಲ್ ಆಗಿ ಶಿವಾಜಿ ಸೂರತ್ಕಲ್ 2 ಚಿತ್ರವನ್ನು ನಿರ್ಮಾಣ ಮಾಡಲಾಗ್ತಿದೆ. ಈ ಚಿತ್ರದ ಟ್ಯಾಗ್ ಲೈನ್ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಎಂದಿದ್ದು, ಕುತೂಹಲವನ್ನು ಹೆಚ್ಚಿಸಿದೆ.

ಮೊದಲನೇ ಭಾಗದ ರೀತಿ ಎರಡನೇ ಭಾಗವೂ ಸಹ ಮಿಸ್ಟರಿ ಥ್ರಿಲ್ಲರ್ ಕಥೆ ಎಂಬುದು ಟೀಸರ್ ನೋಡಿದ ಕೂಡಲೇ ತಿಳಿದುಬಿಡುತ್ತದೆ. ಹೀಗಾಗಿಯೇ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವ ಸಿನಿಪ್ರೇಕ್ಷಕರಿಗೆ ಈ ಚಿತ್ರದ ಟೀಸರ್ ಕಿಕ್ ಕೊಡ್ತಿದೆ. ಚಿತ್ರದ ಟೀಸರ್ ರಮೇಶ್ ಅರವಿಂದ್ ಅವರ ಧ್ವನಿಯಲ್ಲಿರುವ 'ನಾವು ಬದುಕ್ತಾ ಇರೋದು ನರಕದಲ್ಲಿ, ರಾಕ್ಷಸರು ನಮ್ಮ ಸುತ್ತ ಇದ್ದಾರೆ, ರಾಕ್ಷಸರು ನಮ್ಮ ಜೊತೆಗೂ ಇದ್ದಾರೆ, ರಾಕ್ಷಸರು ನಮ್ಮ ಒಳಗೂ ಇದ್ದಾರೆ' ಎಂಬ ಡೈಲಾಗ್ ಮೂಲಕ ಆರಂಭಗೊಳ್ಳುತ್ತದೆ. ಈ ಸಂಭಾಷಣೆಯ ವೇಳೆ ಮರ್ಡರ್ ಜರುಗಿರುವ ದೃಶ್ಯಗಳು ಮತ್ತು ರಮೇಶ್ ಅದರ ಬೆನ್ನತ್ತಿರುವ ದೃಶ್ಯಗಳನ್ನು ತೋರಿಸಲಾಗಿದೆ.

Shivaji Surathkal 2 teaser has been released on the occasion of Ramesh Aravind birthday

ಚಿತ್ರದಲ್ಲಿ ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ರಾಧಿಕಾ ನಾರಾಯಣ್ ಅಭಿನಯಿಸಿದ್ದರೆ, ಮೇಘನಾ ಗಾಂವ್ಕರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ನಸರ್ ಕೂಡ ಟೀಸರ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ಶಿವಾಜಿ ಪಾತ್ರದ ರಮೇಶ್ ಅರವಿಂದ್ ಕೇಸ್ ನಂ 131 ಹಿಂದೆ ಬೀಳುವುದಾಗಿ ಟೀಸರ್ ನಲ್ಲಿ ತಿಳಿಸಲಾಗಿದ್ದು, ಈ ಕೇಸ್ ತನ್ನ ಕೆರಿಯರ್ ಅನ್ನು ಬಹುತೇಕ ಮುಗಿಸಿತ್ತು ಎಂಬ ಡೈಲಾಗ್ ಇದೆ ಹಾಗೂ ರಾಕ್ಷಸರ ವಿರುದ್ಧ ನಾನು ಕೊನೆಯ ಉಸಿರಿರುವವರೆಗೂ ಹೋರಾಡುವೆ ಎಂದು ರಮೇಶ್ ಹೇಳ್ತಾರೆ. ಇನ್ನು ಟೀಸರ್ ಕಟ್ ಚೆನ್ನಾಗಿದ್ದು, ಮರ್ಡರ್ ಮಿಸ್ಟರಿಗೆ ಅಗತ್ಯವಾದ ಸಂಗೀತವಿದೆ ಹಾಗೂ ಕಳೆದ ಬಾರಿಯ ರೀತಿ ಈ ಬಾರಿಯೂ ಸಹ ನಿರ್ದೇಶಕ ಆಕಾಶ್ ಶ್ರೀವತ್ಸ ಪ್ರೇಕ್ಷಕರ ಮನ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇನ್ನು ಟೀಸರ್ ಕೊನೆಯಲ್ಲಿ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ ಎಂಬ ಸ್ಪಷ್ಟನೆಯನ್ನೂ ಚಿತ್ರತಂಡ ನೀಡಿದೆ.

More from Filmibeat

English summary
Ramesh Aravind starrer Shivaji Surathkal 2 teaser has been released on his birthday. Take a look,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X