'ರುಸ್ತುಂ' ಶಿವಣ್ಣನ ಮುಂದೆ ವಿಲನ್ ಆದ ಶಿವಮಣಿ
Recommended Video

ಶಿವಮಣಿ ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ. ನಿರ್ದೇಶನದ ಜೊತೆ ಜೊತೆಗೆ ಅಭಿನಯದಲ್ಲೂ ನೆಲೆ ಹುಡಿಕೊಳ್ಳೋಣ ಎಂದು ನಿರ್ಧಾರ ಮಾಡಿ ಸ್ನೇಹಿತರ ಸಲಹೆಯಂತೆ ಆಯ್ದ ಚಿತ್ರಗಳಲ್ಲಿ ಶಿವಮಣಿ ಅಭಿನಯ ಮಾಡುತ್ತಿದ್ದಾರೆ.
'ಟೈಗರ್ ಗಲ್ಲಿ' ಚಿತ್ರದಲ್ಲಿ ಖಡಕ್ ಲುಕ್ ವಿಲನ್ ಆಗಿ ಎಂಟ್ರಿಕೊಟ್ಟಿದ್ದ ಶಿವಮಣಿ ಸದ್ಯ ಚಿತ್ರರಂಗದಲ್ಲಿ ಖಳನಾಯಕನಾಗಿಯೇ ಉಳಿದುಕೊಳ್ಳುವ ಎಲ್ಲಾ ರೀತಿಯ ಸಾಧ್ಯತೆಗಳು ಹೆಚ್ಚಾಗಿವೆ. 'ಟೈಗರ್ ಗಲ್ಲಿ'ಯ ನಂತರ ಶಿವಮಣಿ ಶಿವಣ್ಣನ ಎದುರು ವಿಲನ್ ಆಗಿ 'ರುಸ್ತುಂ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಾಹಸ ನಿರ್ದೇಶಕ ರವಿಮರ್ವ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಶ್ರದ್ಧಾ ಶ್ರೀನಾಥ್ ಹಾಗೂ ಮಯೂರಿ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ. ಕೆಲವು ದಿನಗಳ ಚಿತ್ರೀಕರಣ ಮುಗಿಸಿರುವ ಶಿವಮಣಿ ಮಿಕ್ಕ ಚಿತ್ರೀಕರಣಕ್ಕಾಗಿ ಬಿಹಾರ್, ಪೂನಾ, ಮುಂಬೈ ನಲ್ಲಿ ನಡೆಯಲಿದೆ.

'ರುಸ್ತುಂ' ಚಿತ್ರದಲ್ಲಿ ಮಾತ್ರವಲ್ಲದೆ ಶಿವಮಣಿ ಜಯತೀರ್ಥ ಡೈರೆಕ್ಟ್ ಮಾಡುತ್ತಿರುವ 'ಬೆಲ್ ಬಾಟಂ' ಸಿನಿಮಾದಲ್ಲಿಯೂ ಖಳನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ. 'ರುಸ್ತುಂ' ಚಿತ್ರದಲ್ಲಿ ಬೇರೆಯದ್ದೇ ಲುಕ್ ಇರಲಿದ್ದು, ಚಿತ್ರತಂಡ ಇನ್ನು ಅದನ್ನು ರಿವಿಲ್ ಮಾಡಿಲ್ಲ.


Click it and Unblock the Notifications











