»   » ತಂಗಿ ಬಗ್ಗೆ ಅಳಲು ತೋಡಿಕೊಂಡ ಲಕ್ಷ್ಮೀ ನಾಯಕ್ ಸಹೋದರ

ತಂಗಿ ಬಗ್ಗೆ ಅಳಲು ತೋಡಿಕೊಂಡ ಲಕ್ಷ್ಮೀ ನಾಯಕ್ ಸಹೋದರ

Posted By:
Subscribe to Filmibeat Kannada

ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ನಿರ್ಮಾಪಕ ಸುಂದರ್ ಗೌಡ ಜೊತೆ ಮದುವೆಯಾದ ಲಕ್ಷ್ಮೀ ನಾಯಕ್ ಬಗ್ಗೆ ಸಹೋದರ ಸೂರಜ್ ನಾಯಕ್ ಅಳಲು ತೋಡಿಕೊಂಡಿದ್ದಾರೆ. "ಲಕ್ಷ್ಮೀ ಹೀಗೆ ಮಾಡುತ್ತಾಳೆ ಎನ್ನುವ ಸೂಚನೆಯೇ ನಮಗೆ ಇರಲಿಲ್ಲ. ನಮ್ಮ ಮನೆಯ ಲಕ್ಷ್ಮೀಯನ್ನು ಕಳೆದುಕೊಂಡಿದ್ದೇವೆ' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

"ಸುಂದರ್ ಗೌಡ ಹಾಗೂ ಲಕ್ಷ್ಮೀ ತುಂಬಾ ದಿನಗಳಿಂದ ಪರಿಚಯ ಇರಲಿಲ್ಲ. ನಮಗೆ ತಿಳಿದಂತೆ ಮೂರು ತಿಂಗಳ ಹಿಂದೆಯಷ್ಟೇ ಪರಿಚಯ ಆಗಿರಬಹುದು. ನಾವು ಸುಂದರ್ ಎನ್ನುವ ವ್ಯಕ್ತಿಯನ್ನ ನೋಡುತ್ತಿರುವುದು ಇದೇ ಮೊದಲು. ಅವರು ಹೇಳುತ್ತಿರುವಂತೆ ಮದುವೆ ಬಗ್ಗೆ ಎಂದಿಗೂ ಆಕೆ ಚರ್ಚೆಯೇ ಮಾಡಿರಲಿಲ್ಲ" ಎಂದು ತಿಳಿಸಿದ್ದಾರೆ.

Shivamurthy Nayak son Suraj Nayak spoken about Lakshmi Nayak,

ವಿಜಿ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಲಕ್ಷ್ಮೀ- ಸುಂದರ್

"ಲಕ್ಷ್ಮೀ ವರ್ತನೆ ನೋಡುತ್ತಿದ್ದರೆ ಇವಳು ನಮ್ಮ ಮನೆ ಮಗಳು ಲಕ್ಷ್ಮೀನಾ ಎಂದು ಆಶ್ಚರ್ಯ ಆಗುತ್ತಿದೆ. ವಯಸ್ಸಿನಲ್ಲಿ ದುಡುಕುವುದು ಸಹಜ. ಆದರೆ ಅವಳ ಮುಗ್ದತೆಯನ್ನ ಇಲ್ಲಿ ಬಳಸಿಕೊಳ್ಳಲಾಗಿದೆ. ಸುಂದರ್ ಅವರಿಗೆ 38 ವರ್ಷ ವಯಸ್ಸು ಲಕ್ಷ್ಮೀ 22 ವಯಸ್ಸಿನವಳು, ನಮ್ಮ ಸಂಸಾರದಲ್ಲಿ ಮೂರನೇಯವರು ಬಂದು ಮಜಾ ತೆಗೆದುಕೊಳ್ಳುತ್ತಿದ್ದಾರೆ" ಎಂದು ದುಖಃ ತೋಡಿಕೊಂಡಿದ್ದಾರೆ.

Shivamurthy Nayak son Suraj Nayak spoken about Lakshmi Nayak,

ಮತ್ತೊಂದು ಕಡೆಯಲ್ಲಿ ಲಕ್ಷ್ಮೀ ನಾಯಕ್ ಅವರನ್ನ ಸಾಕಿ ಬೆಳೆಸಿದ್ದ ಅಜ್ಜಿ ಪೊಲೀಸ್ ಠಾಣೆಯ ಮುಂದೆಯೇ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು

English summary
MLA Shivamurthy Nayak son Suraj Nayak has spoken about Lakshmi Nayak, Suraj has been bothered about the marriage of Lakshmi and Sundar Gowda. Sundar Gowda Lakshmi Nayak Both were secretly married yesterday in Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada