For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಶಿವಣ್ಣ ಬಗ್ಗೆ ಪ್ರಿಯಾ ವಾರಿಯರ್ ಏನಂದ್ರು?

  |

  ಶಿವರಾಜ್ ಕುಮಾರ್ ಅವರ ಅತ್ತೆ ಮಗ ಸೂರಜ್ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಧ್ರುವನ್ ಆಗಿ ಹೆಸರು ಬದಲಿಸಿಕೊಂಡಿರುವ ಸೂರಜ್ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಸಾಥ್ ನೀಡಿದ್ದಾರೆ.

  ರಘು ಕೋವಿ ನಿರ್ದೇಶನ ಮಾಡುತ್ತಿರುವ ಚಿತ್ರವನ್ನ ಬಿಎಸ್ ಸುಧೀಂದ್ರ ನಿರ್ಮಿಸುತ್ತಿದ್ದಾರೆ. ವಿಶೇಷ ಅಂದ್ರೆ ಧ್ರುವನ್ ಅವರ ಚೊಚ್ಚಲ ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಇತ್ತೀಚಿಗಷ್ಟೆ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಮತ್ತು ಶಿವರಾಜ್ ಕುಮಾರ್ ಆಗಮಿಸಿದ್ದರು. ಚಿತ್ರದ ಮೊದಲ ದೃಶ್ಯಕ್ಕೆ ಶಿವಣ್ಣ ಕ್ಲಾಪ್ ಮಾಡಿದ್ರೆ, ಕ್ಯಾಮರಾಗೆ ಚಾಲೆಂಜಿಂಗ್ ಸ್ಟಾರ್ ಚಾಲನೆ ನೀಡಿದರು.

  ಸಿನಿಮಾಟೋಗ್ರಫರ್ ಜೊತೆ ಪ್ರಿಯಾ ವಾರಿಯರ್ 'ಮುತ್ತಿನ ಆಟ'ಸಿನಿಮಾಟೋಗ್ರಫರ್ ಜೊತೆ ಪ್ರಿಯಾ ವಾರಿಯರ್ 'ಮುತ್ತಿನ ಆಟ'

  ಬಳಿಕ ಮಾಧ್ಯಮದವರು ಜೊತೆ ಸಂತಸ ಹಂಚಿಕೊಂಡ ನಟಿ ಪ್ರಿಯಾ ವಾರಿಯರ್, 'ಕನ್ನಡದಲ್ಲಿ ಎರಡನೇ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ' ಎಂದರು. ''ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರು ಬಂದಿದ್ದು ಬಹಳ ಸಂತಸ ತಂದಿದೆ. ಅವರಿಬ್ಬರು ಲೆಜೆಂಡ್. ಅವರ ಬಗ್ಗೆ ತುಂಬಾ ಕೇಳಿದ್ದೇನೆ'' ಎಂದರು.

  ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?

  ಅಂದ್ಹಾಗೆ, ಪ್ರಿಯಾ ಪ್ರಕಾಶ್ ವಾರಿಯರ್ ಕೆ ಮಂಜು ಮಗ ನಟಿಸುತ್ತಿರುವ ವಿಷ್ಣುಪ್ರಿಯ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೂಡ ಬಹುತೇಕ ಮುಗಿದಿದೆಯಂತೆ. ಮೊದಲ ಸಿನಿಮಾ ರಿಲೀಸ್ ಗೂ ಮೊದಲೇ ಎರಡನೇ ಚಿತ್ರ ಸೆಟ್ಟೇರಿರುವುದು ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  English summary
  Kannada actor Shiva Rajkumar and Darshan both are legends said Priya prakash varrier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X