''ಇಷ್ಟು ದಿನ ಹೀರೋ ಆಗಿದ್ದೆ, ಇನ್ನು ಮುಂದೆ ವಿಲನ್'' ಎಂದ ಶಿವಣ್ಣ

By Naveen

Recommended Video

ಶಿವಣ್ಣ ಹಾಗು ಪುನೀತ್ ರಾಜ್ ಕುಮಾರ್ ಜೊತೆಯಾಗಿ ಫೇಸ್ ಬುಕ್ ಲೈವ್ ನಲ್ಲಿ | Filmibeat Kannada

ನಟ ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದಲ್ಲಿ ಶಿವಣ್ಣ ಭೈರತಿ ರಣಗಲ್ಲು ಪಾತ್ರವನ್ನು ಮಾಡಿದ್ದು ಎಲ್ಲರೂ ಆ ಪಾತ್ರಕ್ಕೆ ಫಿಧಾ ಆಗಿದ್ದರು. ಈಗ ನಟ ಪುನೀತ್ ರಾಜ್ ಕುಮಾರ್ ಕೂಡ 'ಮಫ್ತಿ' ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ ಕೂಡ ಆ ಪಾತ್ರದಿಂದ ಉತ್ಸುಕರಾಗಿದ್ದಾರೆ.

ಅಂದಹಾಗೆ, ಕಳೆದ ಶನಿವಾರ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಲೈವ್ ಬಂದಿದ್ದರು. ಮೊದಲ ಬಾರಿ ಅಣ್ಣವ್ರ ಮಕ್ಕಳು ಒಟ್ಟಿಗೆ ಫೇಸ್ ಬುಕ್ ಲೈವ್ ಬಂದಿದ್ದು ವಿಶೇಷವಾಗಿತ್ತು. ಶಿವಣ್ಣ ಮತ್ತು ಪುನೀತ್ 'ಅಂಜನಿಪುತ್ರ' ಮತ್ತು 'ಟಗರು' ಚಿತ್ರದ ಬಗ್ಗೆ ಮಾತನಾಡಲು ಪಿ.ಆರ್.ಕೆ ಆಡಿಯೋ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅನೇಕ ವಿಷಯಗಳನ್ನು ಶಿವಣ್ಣ ಮತ್ತು ಪುನೀತ್ ಹಂಚಿಕೊಂಡಿದ್ದಾರೆ. ಅದರ ಕೆಲವು ಮುಖ್ಯ ವಿಚಾರಗಳು ಮುಂದಿದೆ ಓದಿ...

'ಮಫ್ತಿ' ಬಗ್ಗೆ ಅಪ್ಪು ಮೆಚ್ಚುಗೆ

'ಮಫ್ತಿ' ಬಗ್ಗೆ ಅಪ್ಪು ಮೆಚ್ಚುಗೆ

'ಮಫ್ತಿ' ಸಿನಿಮಾ ನೋಡಿದ ಪುನೀತ್ ಫೇಸ್ ಬುಕ್ ಲೈವ್ ನಲ್ಲಿ ಚಿತ್ರದ ಬಗ್ಗೆ ಮಾತನಾಡಿದರು. ''ಮಫ್ತಿ ನೋಡಿದೆ. ತುಂಬ ಖುಷಿ ಆಯಿತು. ಶಿವಣ್ಣ ಅವರ ಅಭಿನಯ ಅದ್ಬುತ. ಶ್ರೀ ಮುರಳಿ ಕೂಡ ಚೆನ್ನಾಗಿ ಮಾಡಿದ್ದಾರೆ. ನರ್ತನ್ ಸುಂದರವಾಗಿ ಸಿನಿಮಾ ತೆಗೆದಿದ್ದಾರೆ. ಸಂಗೀತ ಕೂಡ ತುಂಬ ಚೆನ್ನಾಗಿದೆ.'' ಎಂದು 'ಮಫ್ತಿ' ಬಗ್ಗೆ ಪುನೀತ್ ಮೆಚ್ಚುಗೆ ಸೂಚಿಸಿದ್ದಾರೆ.

'ಟಗರು' ಚಿತ್ರದಲ್ಲಿದೆ 8 ಹಾಡುಗಳು

'ಟಗರು' ಚಿತ್ರದಲ್ಲಿದೆ 8 ಹಾಡುಗಳು

'ಟಗರು' ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ ''ಈ ಚಿತ್ರದಲ್ಲಿ 8 ಹಾಡುಗಳಿವೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರದ ಆಡಿಯೋ ಹೊಸಪೇಟೆಯಲ್ಲಿ ಡಿಸೆಂಬರ್ 23ರಂದು ನಡೆಯಲಿದೆ.'' ಎಂದು ಹೇಳಿದರು.

ಉಪೇಂದ್ರ - ಶಿವಣ್ಣ ಸಿನಿಮಾ

ಉಪೇಂದ್ರ - ಶಿವಣ್ಣ ಸಿನಿಮಾ

''ಮತ್ತೆ ಯಾವಾಗ ಉಪೇಂದ್ರ ಜೊತೆ ಸಿನಿಮಾ ಮಾಡುತ್ತೀರಾ?'' ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ''ನಾನು ಕಾಯುತ್ತಾ ಇದ್ದೇನೆ. ನಾವು ಸಿನಿಮಾ ಮಾಡಿ 22 ವರ್ಷ ಆಗಿದೆ. ನೋಡೋಣ.. ಉಪೇಂದ್ರ ಈಗ ರಾಜಕೀಯದಲ್ಲಿ ಬಿಜಿ ಆಗಿದ್ದಾರೆ. ನಾನು ಅವರ ಸ್ನೇಹಿತನಾಗಿ ಅವರ ಪ್ರಜಾಕೀಯ ಪಕ್ಷಕ್ಕೆ ಶುಭ ಹಾರೈಸುತ್ತೇನೆ.''

ಶಿವಣ್ಣ ಅಪ್ಪು ಸಿನಿಮಾ

ಶಿವಣ್ಣ ಅಪ್ಪು ಸಿನಿಮಾ

ಶಿವಣ್ಣ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುತ್ತ ಪುನೀತ್ ಜೊತೆ ಸಿನಿಮಾ ಮಾಡುವ ವಿಷಯವನ್ನು ಹಂಚಿಕೊಂಡರು. ''ಇಬ್ಬರು ಆದಷ್ಟು ಬೇಗ ಒಟ್ಟಿಗೆ ಸಿನಿಮಾ ಮಾಡುತ್ತೇವೆ. ಈಗಾಗಲೇ ಒಂದು ಕಥೆ ಸಿಕ್ಕಿದೆ. ಆದರೆ ಇನ್ನೂ ಅದನ್ನು ಅಪ್ಪುಗೆ ಹೇಳಿಲ್ಲ. ತುಂಬ ಒಳ್ಳೆಯ ಕಥೆ ಇದೆ. ಅಪ್ಪುಗೆ ಕೂಡ ಅದು ಇಷ್ಟ ಆಗಬಹುದು. ಅಪ್ಪುಗೆ ಇಷ್ಟ ಆದರೆ ಬೇಗ ಸಿನಿಮಾ ಮಾಡುತ್ತೇವೆ.'' ಎಂದು ತಿಳಿಸಿದ್ದಾರೆ.

ಎಷ್ಟು ದಿನ ಹೀರೋ ಆಗಿದೆ ಇನ್ನು ಮುಂದೆ ವಿಲನ್

ಎಷ್ಟು ದಿನ ಹೀರೋ ಆಗಿದೆ ಇನ್ನು ಮುಂದೆ ವಿಲನ್

''ವಿಲನ್ ಪಾತ್ರಗಳಿಗೆ ಈಗ ಒಂದು ಹೆಜ್ಜೆ ಇಟ್ಟಿದ್ದೀನಿ. ಎಷ್ಟು ದಿನ ನಾನು ಹೀರೋ ಪಾತ್ರಗಳನ್ನೇ ಮಾಡಲಿ. ಇನ್ನು ಮುಂದೆ ವಿಲನ್ ಆಗಿ ಸಹ ಪ್ರಯತ್ನ ಮಾಡುತ್ತೇನೆ.'' ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಬಿಟ್ಟರೇ ಪುನೀತ್ ರಾಜ್ ಕುಮಾರ್

ಅಕ್ಷಯ್ ಕುಮಾರ್ ಬಿಟ್ಟರೇ ಪುನೀತ್ ರಾಜ್ ಕುಮಾರ್

''ನನ್ನ ತಮ್ಮ ಅಂತ ಹೇಳುವುದಿಲ್ಲ. ಅಪ್ಪುಗೆ ಸಣ್ಣ ವಯಸ್ಸಿನಲ್ಲಿಯೇ ಒಳ್ಳೆಯ ಟ್ಯಾಲೆಂಟ್ ಇದೆ. ಇಡೀ ಇಂಡಿಯಾದಲ್ಲಿಯೇ ಟೆರಿಫಿಕ್ ಆಕ್ಷನ್ ಅಂದರೆ ಒಂದು ಅಕ್ಷಯ್ ಕುಮಾರ್, ಅದು ಬಿಟ್ಟರೆ ಪುನೀತ್ ರಾಜ್ ಕುಮಾರ್. ಅಪ್ಪು ಅದ್ಬುತವಾಗಿ ಆಕ್ಷನ್ ಮಾಡುತ್ತಾರೆ.'' ಎಂದು ಶಿವಣ್ಣ ಪುನೀತ್ ಆಕ್ಷನ್ ಅನ್ನು ಕೊಂಡಾಡಿದ್ದಾರೆ.

More from Filmibeat

English summary
Kannada actors Shiva Rajkumar and Puneeth Rajkumar's came facebook live together on 'PRK Audio' Facebook page. And they shared many things about their future movies plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X