ಭಜರಂಗಿ ಟ್ರೇಲರ್ ಭರ್ಜರಿ ರಿಲೀಸ್ : ಹರ್ಷ
ಹಲವು ಹೊಸತನಗಳನ್ನು ಮೈಗೂಡಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಶಿವರಾಜ ಕುಮಾರ್ ಅಭಿನಯದ ಭಜರಂಗಿ ಚಿತ್ರ ಮತ್ತೊಂದು ಹೆಜ್ಜೆ ಇಟ್ಟಿದೆ. ಪ್ರೇಕ್ಷಕರನ್ನು ತಲುಪಲು ಅಭಿಮಾನಿಗಳನ್ನು ಆಕರ್ಷಿಸಲು ವಿನೂತನ ತಂತ್ರಗಳ ಮೂಲಕ ಚಿತ್ರಕ್ಕೆ ಪ್ರಚಾರ ನೀಡುವುದನ್ನು ಕೇಳಿರುತ್ತೀರಾ, ಕಂಡಿರುತ್ತೀರಾ ಈಗ ಭಜರಂಗಿ ಟ್ರೇಲರ್ ಕೂಡಾ ಅದೇ ರೀತಿ ವಿಶಿಷ್ಟವಾಗಿ ಅನಾವರಣಗೊಳ್ಳಲಿದೆ.
ಸಾಮಾಜಿಕ ಜಾಲ ತಾಣಗಳಾದ ಯೂಟ್ಯೂಬ್, ಟ್ವಿಟ್ಟರ್, ಫೇಸ್ ಬುಕ್ ಮೂಲಕ ಚಿತ್ರದ ಫಸ್ಟ್ ಲುಕ್, ಟೀಸರ್, ಟ್ರೇಲರ್ ಬಿಡುಗಡೆಗೊಳಿಸುವುದು ಮಾಮೂಲಿ. ಶಿವರಾಜ್ ಅವರ ಚಿತ್ರದ ಟ್ರೇಲರ್ ಗುರುವಾರ(ಸೆ.25) ಬೆಳಗ್ಗೆ ಸುಮಾರು 9.45ರ ವೇಳೆಗೆ ತ್ರಿವೇಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಅರ್ಪಣೆಯಾಗಲಿದೆ ಎಂದು ನಿರ್ದೇಶಕ ಎ. ಹರ್ಷ ಹೇಳಿದ್ದಾರೆ.
ಚಿತ್ರಮಂದಿರದಲ್ಲಿ ಟ್ರೇಲರ್ ಮೊದಲಿಗೆ ರಿಲೀಸ್ ಮಾಡುವ ಪದ್ಧತಿ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಕ್ಲಿಕ್ ಆಗಿದೆ. ಆದರೆ, ಭಜರಂಗಿ ಟ್ರೇಲರ್ ವಿಶಿಷ್ಟವಾಗಿದ್ದು, ಶಿವಣ್ಣ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಲಿದೆ. ಚಿತ್ರದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಲಿದ್ದು, ಜನರ ಮನಸ್ಸಿನಲ್ಲಿ ಹೆಚ್ಚು ಪ್ರಶ್ನೆಗಳು ಏಳುವಂತೆ ಮಾಡುತ್ತದೆ. ಚಿತ್ರದಲ್ಲಿ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಎಂದರೆ ಹಾಗೆ ಸದಾ ಹೊಸತನ ಇರುವ ಪಾತ್ರಗಳನ್ನೇ ಆರಿಸಿಕೊಳ್ಳುತ್ತಾರೆ. ಶಿವಣ್ಣನ ಚಿತ್ರ ಎಂದರೆ ನಿರ್ಮಾಪಕರೂ ಸೇಫ್ ಎಂಬ ಮಾತು ಗಾಂಧಿನಗರದಲ್ಲಿದೆ.. ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ? ಏನಿರ ಬಹುದು ಟ್ರೇಲರ್ ನಲ್ಲಿ ಮುಂದೆ ಓದಿ...

ಟ್ರೇಲರ್ ರಿಲೀಸ್ ಪೋಗ್ರಾಂ
ಶಿವರಾಜ್ ಕುಮಾರ್ ಅವರ ಮೊದಲ ಚಿತ್ರ ಈ ರೀತಿ ಚಿತ್ರಮಂದಿರದಲ್ಲಿ ಟ್ರೇಲರ್ ಬಿಡುಗಡೆ ಕಾಣುತ್ತಿದೆ. 2 ನಿಮಿಷಗಳ ಟ್ರೇಲರ್ ಅಭಿಮಾನಿಗಳಿಗೆ ಅರ್ಪಿಸಲು ರಿಯಲ್ ಸ್ಟಾರ್ ಉಪೇಂದ್ರ, ಯಶ್, ರಾಗಿಣಿ, ಸಾವಿರಾರು ಶಿವಣ್ಣನ ಅಭಿಮಾನಿಗಳು ಬರಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರಿಗೆ ಕರುನಾಡ ಚಕ್ರವರ್ತಿ ಬಿರುದು ನೀಡಿ ಗೌರವಿಸಲಾಗುತ್ತದೆ

ಇದೇ ಮೊದಲಾ?
ಹಾಗೇನಿಲ್ಲ. ಈ ಮುಂಚೆ ಸುದೀಪ್ ಅಭಿನಯದ ಬಚ್ಚನ್, ಪಿಸಿ ಶೇಖರ್ ಅವರ ಗಣೇಶ್ ಅಭಿನಯದ ರೋಮಿಯೋ ಹಾಗೂ ತೀರಾ ಇತ್ತೀಚೆಗೆ ಸಾಧು ಕೋಕಿಲ, ರಂಗಾಯಣ ರಘು ಇನ್ನಿತರ ಕಲಾವಿದರುಗಳ ಚಡ್ಡಿ ದೋಸ್ತ್ ಚಿತ್ರದ ಟ್ರೇಲರ್ ಕೂಡಾ ಚಿತ್ರಮಂದಿರದಲ್ಲೆ ಮೊದಲಿಗೆ ರಿಲೀಸ್ ಮಾಡಲಾಗಿತ್ತು. ಆದರೆ, ಶಿವರಾಜ್ ಅವರ ಚಿತ್ರದ ಟ್ರೇಲರ್ ಇದೇ ಮೊದಲು ಈ ರೀತಿ ರಿಲೀಸ್ ಆಗುತ್ತಿದೆ.

ಶಿವಣ್ಣ ಸಿಕ್ಸ್ ಪ್ಯಾಕ್
ಶಿವಣ್ಣ ತಮ್ಮ ವೃತ್ತಿಜೀವನದಲ್ಲಿ ಸಿಕ್ಸ್ ಪ್ಯಾಕ್ ದೇಹಕ್ಕಾಗಿ ಎಂದೂ ಕಸರತ್ತು ಮಾಡಿರಲಿಲ್ಲ. ಅವರ ದೇಹ ನೈಜವಾಗಿ ಹದಿಹರೆಯದ ಯುವಕರಂತೆ ಕಾಣುತ್ತಿತ್ತು. ಈಗ ಅವರಿಗೆ 50ರ ಪ್ರಾಯ. ಆದರೂ ಅವರಲ್ಲಿ ಇನ್ನೂ ಚಿಗುರು ಮೀಸೆ ಹುಡುಗನ ಉತ್ಸಾಹ ತಾಂಡವವಾಡುತ್ತಿದೆ. ಪಾತ್ರಕ್ಕೆ ಅಗತ್ಯವಿರುವುದರಿಂದ ಸಿಕ್ಸ್ ಪ್ಯಾಕ್ ಗಾಗಿ ಸಿದ್ಧ ಮಾಡಿಕೊಳ್ಳುತ್ತಿದ್ದೇನೆ ಅಷ್ಟೆ ಎಂದು ಶಿವಣ್ಣ ಹೇಳಿದ್ದಾರೆ.

ರುದ್ರ ತಾಂಡವ' ನೃತ್ಯ
ಚಿತ್ರದಲ್ಲಿ 'ರುದ್ರ ತಾಂಡವ' ನೃತ್ಯವೂ ಇರುತ್ತದೆ. ಮೊಳಕಾಲಿನಲ್ಲೇ ಶಿವಣ್ಣ ನೃತ್ಯ ಮಾಡಲಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದಾಗಲಿದೆ ಎನ್ನುತ್ತಾರೆ ಹರ್ಷಾ.
"ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿದೆ" ಎಂದು ಚಿತ್ರತಂಡ ಹೇಳಿದೆ.

ಐಂದ್ರಿತಾ ರೇ ನಾಯಕಿ
ಡ್ಡಿ ಪುಡಿಯಲ್ಲಿ ಶಿವರಾಜ್ ಕುಮಾರ್ ಜೊತೆ ಸಣ್ಣ ಪಾತ್ರ ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಐಂದ್ರಿತಾ ರೇ ಮತ್ತೊಮ್ಮೆ ಶಿವಣ್ಣನ ಜೊತೆ ನಟಿಸುತ್ತಿರುವುದಕ್ಕ್ ಥ್ರಿಲ್ ಆಗಿದ್ದಾರೆ. ನೆರೆ ಮನೆ ಹುಡುಗಿ ರೀತಿ ಪಾತ್ರ ಸಿಕ್ಕಿದೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಶಿವಣ್ಣನ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಅವರಿಂದ ನಟನೆ ಕಲಿಯುವುದು ಬಹಳಷ್ಟಿದೆ ಎಂದು ಐಂದ್ರಿತಾ ಕಣ್ಣು ಮಿಟುಕಿಸುತ್ತಾರೆ.

ಚಿತ್ರತಂಡ
ತಾಂತ್ರಿಕವರ್ಗದಲ್ಲಿ ಪ್ರಮುಖವಾಗಿ ಸಂಗೀತ ಅರ್ಜುನ್ ಜನ್ಯಾ, ಚಿತ್ರಕಥೆ ವಿಕ್ಟರಿ ಚಿತ್ರ ಖ್ಯಾತಿಯ ನಂದಕಿಶೋರ್, ನಿರ್ದೇಶನ ಎ. ಹರ್ಷ
ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶ್ರುತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.

Click it and Unblock the Notifications











