For Quick Alerts
  ALLOW NOTIFICATIONS  
  For Daily Alerts

  ನಾಗವಾರದ ಜನತೆಗೆ 'ಆಸರೆ'ಯಾದ ಹ್ಯಾಟ್ರಿಕ್ ಹೀರೋ 'ಶಿವಣ್ಣ 'ಬಾಯ್ಸ್

  |

  ಕೊರೊನಾ ವೈರಸ್‌ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಚಿತ್ರರಂಗದಿಂದ ಹಲವರು ಸಹಾಯ ಮಾಡ್ತಿದ್ದಾರೆ. ತಮ್ಮದೇ ಫೌಂಡೇಶನ್, ತಂಡ ಕಟ್ಟಿಕೊಂಡು ಹಸಿದವರಿಗೆ ಊಟ, ದಿನಸಿ ಕಿಟ್, ಆಕ್ಸಿಜನ್, ಆಂಬುಲೆನ್ಸ್ ವ್ಯವಸ್ಥೆ ಹೀಗೆ ಒಂದಲ್ಲ ಒಂದು ರೀತಿ ನೆರವು ಕೊಡ್ತಿದ್ದಾರೆ.

  ಅಭಿಮಾನಿಗಳ ಜೊತೆ ಕೈ ಜೋಡಿಸಿ ಬಡವರಿಗೆ ಆಸರೆಯಾದ ಶಿವರಾಜ್ ಕುಮಾರ್ | Filmibeat Kannada

  ಇದೀಗ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಕಷ್ಟದಲ್ಲಿರುವ ಜನರ ಸಹಾಯಕ್ಕೆ ಧಾವಿಸಿದ್ದಾರೆ. ನಾಗವಾರದ ಸುತ್ತಮುತ್ತ ಪ್ರದೇಶದಲ್ಲಿ ಸಂಕಷ್ಟದಲ್ಲಿರುವ ಜನರಿಗೆ 'ಆಸರೆ' ಎಂಬ ಹೆಸರಿನಲ್ಲಿ ಸಹಾಯ ಮಾಡ್ತಿದ್ದಾರೆ..

  ಕೊರೊನಾ ಸಂಕಷ್ಟ: ಸ್ಟಾರ್ ನಟರ ಅಭಿಮಾನಿಗಳಿಂದ ಮಹತ್ವದ ಕೆಲಸಕೊರೊನಾ ಸಂಕಷ್ಟ: ಸ್ಟಾರ್ ನಟರ ಅಭಿಮಾನಿಗಳಿಂದ ಮಹತ್ವದ ಕೆಲಸ

  ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ಸೇರಿಕೊಂಡು ನಾಗವಾರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ, ಹಾಗೂ ಟೀ ವ್ಯವಸ್ಥೆಯನ್ನ ಮಾಡಿದ್ದಾರೆ‌. ಈ ಕೆಲಸಕ್ಕಾಗಿ ಶಿವಣ್ಣ ಬೊಲೆರೊ ಕ್ಯಾಂಟ್ರೋನ ಆರೇಂಜ್ ಮಾಡಿದ್ದು, ಈ ವಾಹನದಲ್ಲೇ ಊಟ ತಿಂಡಿ‌ ಸರಬರಾಜು ಆಗುತ್ತಿದೆ.

  "ಆಸರೆ" ಹಸಿದ ಹೊಟ್ಟೆಗೆ ಕೈ ತುತ್ತು ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ, ಸದ್ಯ 10 ದಿನದವರೆಗೂ ಮುಂದುವರೆಯಲಿದೆ. ಲಾಕ್ ಡೌನ್ ಹೀಗೆ ಮುಂದುವರೆದಲ್ಲಿ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡುವುದಕ್ಕೆ ಶಿವಣ್ಣ, ಗೀತಾ ಶಿವಣ್ಣ ಹಾಗೂ ಶಿವಣ್ಣ ಬಾಯ್ಸ್ ಯೋಜನೆ ರೂಪಿಸಿಕೊಂಡಿದ್ದಾರೆ.

  ಇನ್ನು ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ವತಿಯಿಂದ ಕಿಚ್ಚನ ಕೈ ತುತ್ತು ಎಂಬ ಯೋಜನೆ ಚಾಲ್ತಿಯಲ್ಲಿದೆ. ಉಪೇಂದ್ರ ಅವರು ಖುದ್ದು ದೇಣಿಗೆ ಸಂಗ್ರಹಿಸಿ ಜನರಿಗೆ ಅಗತ್ಯ ದಿನಸಿ ಹಂಚುತ್ತಿದ್ದಾರೆ. ಭುವನ್ ಪೊನ್ನಣ್ಣ, ಹರ್ಷಿಕಾ ಉಚಿತ ಆಕ್ಸಿಜನ್ ಹಾಗೂ ಆಟೋ ವ್ಯವಸ್ಥೆ ಮಾಡಿದ್ದಾರೆ.

  ನಟಿ ಶುಭ ಪೂಂಜಾ ಅವರು ಜನರಿಗೆ ದಿನಸಿ ಕಿಟ್ ವಿತರಿಸುತ್ತಿದ್ದಾರೆ. ರಾಗಿಣಿ ದ್ವಿವೇದಿ ಆಹಾರದ ಪೊಟ್ಟಣಗಳನ್ನು ಹಂಚಿದ್ದಾರೆ. ಕಿರಣ್ ರಾಜ್ ಸಹ ಊಟದ ವ್ಯವಸ್ಥೆ ಮಾಡಿದ್ದಾರೆ.

  English summary
  Coronavirus Lockdown Crisis: Dr Shiva rajkumar Fans 'Shivanna Boys' Distributing Food For People Around Nagavara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X