'ಪೊಲೀಸ್ ಬೇಬಿ' ಹಾಡಿನ ವಿರುದ್ಧ ಸಿಡಿದೆದ್ದ ಶಿವಣ್ಣ ಫ್ಯಾನ್ಸ್

'ಕವಚ' ನಂತರ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ರುಸ್ತುಂ ಚಿತ್ರದ ಮೊದಲ ಹಾಡು 'ಯೂ ಆರ್ ಮೈ ಪೊಲೀಸ್ ಬೇಬಿ' ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ.

ರವಿವರ್ಮ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಎಪಿ ಅರ್ಜುನ್ ಸಾಹಿತ್ಯ ಬರೆದಿದ್ದು, ರಘು ದೀಕ್ಷಿತ್ ಮತ್ತು ಅಪೂರ್ವ ಶ್ರೀಧರ್ ಹಾಡಿದ್ದಾರೆ.

ಅಂದ್ಹಾಗೆ ಈ ಹಾಡು ಎರಡು ರೀತಿಯಲ್ಲಿ ಸದ್ದು ಮಾಡ್ತಿದೆ. ಹಾಡು ಹೇಗೆ ಇದ್ರೂ ಅಭಿಮಾನ ಬಿಟ್ಟು ಕೊಡದ ಕೆಲವರು ಸಾಂಗ್ ಸೂಪರ್ ಎನ್ನುತ್ತಿದ್ದಾರೆ. ಆದ್ರೆ, ಅಭಿಮಾನಕ್ಕೆ ಮನಸೋತಿರುವ ಮತ್ತೆ ಕೆಲವರು ಎಂತಹ ಕೆಟ್ಟ ಹಾಡು ಮಾಡಿದ್ದೀರಾ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ನೆಗಿಟೀವ್ ಕಾಮೆಂಟ್ ಬಂದಿದೆ. ಕೆಲವು ಕಾಮೆಂಟ್ ಗಳು ಮುಂದಿದೆ ಓದಿ....

ಶಿವಣ್ಣನಿಗೆ ಈ ಹಾಡು ಬೇಕಾಗಿರಲಿಲ್ಲ

ಶಿವಣ್ಣನಿಗೆ ಈ ಹಾಡು ಬೇಕಾಗಿರಲಿಲ್ಲ

ಶಿವರಾಜ್ ಕುಮಾರ್ ಅವರ ಎನರ್ಜಿ, ಡ್ಯಾನ್ಸ್ ಬಗ್ಗೆ ಯಾರೂ ಕೆಮ್ಮಂಗಿಲ್ಲ. 55 ದಾಟಿದರೂ 20ರ ಯುವಕನಂತೆ ಹೆಜ್ಜೆ ಹಾಕುವ ಶಿವಣ್ಣ ಈಗಲೂ ಡ್ಯಾನ್ಸ್ ನಲ್ಲಿ ಕಿಂಗ್. ಆದ್ರೆ, 'ಯೂ ಆರ್ ಮೈ ಪೊಲೀಸ್ ಬೇಬಿ' ಹಾಡಿನ ಸಾಹಿತ್ಯ ಮತ್ತು ಸಂಗೀತ ಬಗ್ಗೆ ಈಗ ಅಪಸ್ವರ ಎದ್ದಿದೆ. ಈ ಹಾಡು ಕೇಳಿದ ಜನರು ಬಾಯಿಗೆ ಬಂದ ಹಾಗೆ ಉಗಿಯುತ್ತಿದ್ದಾರೆ.

ಇದರ ಬದಲು ಡಬ್ಬಿಂಗ್ ಮಾಡಬಹುದಿತ್ತು

ಇದರ ಬದಲು ಡಬ್ಬಿಂಗ್ ಮಾಡಬಹುದಿತ್ತು

ಈ ಹಾಡು ತಮಿಳಿನ ರೌಡಿ ಬೇಬಿ ಹಾಡಿನ ಕಾಪಿ ಆಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಹಾಡಿನ ಆರಂಭವೇ ಅದೇ ರೀತಿ ಇದೆ. ಆದ್ರೆ, ಆ ಹಾಡಿನ ರೀತಿಯೂ ಬಂದಿಲ್ಲ ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಇಂತಹ ಹಾಡು ಕೇಳುವ ಬದಲು ಡಬ್ಬಿಂಗ್ ಹಾಡೇ ಮಾಡಬಹುದಿತ್ತು ಎನ್ನುತ್ತಿದ್ದಾರೆ.

ಶಿವಣ್ಣ ಹೆಸರಿಗೆ ಧಕ್ಕೆ ಇದು

ಶಿವಣ್ಣ ಹೆಸರಿಗೆ ಧಕ್ಕೆ ಇದು

ಶಿವಣ್ಣ ಅವರ ಎನರ್ಜಿ, ಅವರ ಡ್ಯಾನ್ಸ್ ಗೆ ಒಂದು ಗತ್ತು ಇದೆ. ಅವರಿಗೊಂದು ಹೆಸರಿದೆ. ಇಂತಹ ಹಾಡುಗಳನ್ನ ಆಯ್ಕೆ ಮಾಡಿಕೊಂಡು, ಇಂತಹ ಸಾಹಿತ್ಯ ಸಂಗೀತಕ್ಕೆ ಕುಣಿದು ಹೆಸರು ಹಾಳು ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

ಕದ್ದು ಯಾಕೆ ಮಾಡಬೇಕು

ಕದ್ದು ಯಾಕೆ ಮಾಡಬೇಕು

ಇದು ರೌಡಿ ಬೇಬಿ ಹಾಡಿನ ಕಾಪಿ. ಇದನ್ನ ಕದ್ದು ಯಾಕೆ ಮಾಡಬೇಕು. ನೀಟ್ ಆಗಿ ಆದ್ರೂ ಮಾಡಿದ್ರಾ. ಆ ಸಾಹಿತ್ಯ, ಅದಕ್ಕೆ ಹಾಡಿರುವ ಗಾಯನವೂ ಚೆನ್ನಾಗಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಈ ಹಾಡಿನ ಮೂಲಕ ರುಸ್ತುಂ ಚಿತ್ರದ ಬಗ್ಗೆ ಇದ್ದ ನಿರೀಕ್ಷೆಯೂ ಹುಸಿಯಾಗಿದೆ ಎಂದು ಬೇಸರವಾಗಿದ್ದಾರೆ.

ಜನರೇಟರ್ ಸೌಂಡೇ ಚೆನ್ನಾಗಿರುತ್ತೆ

ಜನರೇಟರ್ ಸೌಂಡೇ ಚೆನ್ನಾಗಿರುತ್ತೆ

ಈ ಹಾಡಿಗಿಂತ ಜನರೇಟರ್ ಸೌಂಡೇ ಎಷ್ಟೋ ಚೆನ್ನಾಗಿರುತ್ತೆ ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾನೆ. ಶಿವಣ್ಣನ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಆದ್ರೆ, ಸಾಹಿತ್ಯ, ಅದಕ್ಕೆ ನೀಡಿರುವ ಸಂಗೀತ, ಗಾಯಕ ಹಾಗೂ ನಾಯಕಿಯ ಬಗ್ಗೆ ಬಹುತೇಕ ಅಭಿಮಾನಿಗಳಿಗೆ ಅಸಮಾಧಾನವಿದೆ. ಇದನ್ನ ಮುಂದಿನ ಹಾಡುಗಳಲ್ಲಿ ಅದ್ಯಾಗೇ ಕಂಟ್ರೋಲ್ ಮಾಡ್ತಾರೋ ಕಾದುನೋಡಬೇಕಿದೆ.

More from Filmibeat

English summary
Kannada actor Shiva rajkumar fans expressed displeasure against You Are My Police Baby song. its worst song and worst music and lyrics says fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X