ಮಾರುಕಟ್ಟೆಗೆ ಶಿವಣ್ಣ ಸಿಕ್ಸ್ ಪ್ಯಾಕ್ ಡಿವಿಡಿ ಬಿಡುಗಡೆ

By Rajendra

ಕನ್ನಡ ಚಿತ್ರೋದ್ಯಮದ ಮಟ್ಟಿಗೆ ಇದೊಂದು ಹೊಸ ಪ್ರಯೋಗ. ಈಗ ಬಹುತೇಕ ನಟರು ಸಿಕ್ಸ್ ಪ್ಯಾಕ್ ಗಾಗಿ ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಆದರೆ ಅದರಲ್ಲಿ ಯಶಸ್ವಿಯಾದವರು ಮಾತ್ರ ಬೆರಳೆಣಿಕೆಯಷ್ಟು ಮಂದಿ. ಆದರೆ ಹ್ಯಾಟ್ರಿಕ್ ಹೀರೋ ಶಿವಣ್ಣ ತರಹ 52ರ ಹರೆಯದಲ್ಲಿ ಸಿಕ್ಸ್ ಪ್ಯಾಕ್ ಕಸರತ್ತು ಮಾಡಿದವರು ವಿರಳ.

ಭಜರಂಗಿ ಚಿತ್ರಕ್ಕಾಗಿ ಶಿವಣ್ಣ ಕಸರತ್ತು ಮಾಡಿರುವ ಡಿವಿಡಿಯನ್ನು ಸತ್ವ ಮೀಡಿಯಾ ಹೊರತಂದಿದೆ. ಈ ಡಿವಿಡಿಯನ್ನು ಬುಧವಾರ (ಡಿ.11) ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಇಷ್ಟು ದಿನ ಬಾಲಿವುಡ್ ನಲ್ಲಿ ಮಾತ್ರ ಇದ್ದಂತಹ ಟ್ರೆಂಡ್ ಇದು. ಈಗ ಕನ್ನಡ ಚಿತ್ರರಂಗಕ್ಕೂ ಶಿವಣ್ಣನ ಸಿಕ್ಸ್ ಪ್ಯಾಕ್ ಮೂಲಕ ಪರಿಚಯವಾಗುತ್ತಿದೆ. [ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ]

ಸಿಕ್ಸ್ ಪ್ಯಾಕ್ ಗಾಗಿ ಶಿವಣ್ಣ ಎಂಟು ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಪ್ರತಿನಿತ್ಯ ಆರು ಗಂಟೆಗೆ ಎದ್ದು ಬೆವರಿಳಿಸುತ್ತಿದ್ದರು. ಅವರ ಉತ್ಸಾಹ ನೋಡಿದರೆ ಚಿಗುರುಮೀಸೆ ಹುಡುಗರು ನಾಚುತ್ತಾರೆ. ಸಿಕ್ಸ್ ಪ್ಯಾಕ್ ಗಾಗಿ ಅವರು ಏನೆಲ್ಲಾ ಕರಸತ್ತು ಮಾಡಿದರು ಎಂಬುದನ್ನು ಡಿವಿಡಿಯಲ್ಲಿ ನೋಡಬಹುದು.

ಬೆಂಗಳೂರಿನ ಗರುಡಾ ಮಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ "ಶಿವಣ್ಣ ಫಿಟ್@ 52" ಡಿವಿಡಿಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಚಿತ್ರನಟಿ ಹರ್ಷಿಕಾ ಪೂಣಚ್ಚ, ಶ್ವಾಸ ಗುರು ವಚನಾನಂದ ಸ್ವಾಮೀಜಿ ಸೇರಿದಂತೆ ಹಲವರು ಗಣ್ಯರು ಮುಖ್ಯ ಅತಿಥಿಯಾಗಿ ಆರಂಭಿಸಿದ್ದರು. (ಏಜೆನ್ಸೀಸ್)

More from Filmibeat

English summary
Hat trick hero Shivarajkumar fitness DVD "Shivanna Fitness secret - Fit52" launched on 11th December at at Garuda Mall, Magrath Road. Shivarajkumar's six-pack has been such a success that a fitness DVD documenting his workout, which has been filmed by Sommanna and Shankar. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X