ಪಿ.ಆರ್.ಕೆ ಸಂಸ್ಥೆಯಲ್ಲಿ ಮೆಗಾ ಸಿನಿಮಾ: ಶಿವಣ್ಣ, ರಾಘಣ್ಣ, ಪುನೀತ್ ಒಟ್ಟಿಗೆ ನಟನೆ

Recommended Video

PRK ಸಂಸ್ಥೆಯಿಂದ ಮೆಗಾ ಸಿನೆಮಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟ ರಾಘವೇಂದ್ರ ರಾಜ್ ಕುಮಾರ್ ಮೂರು ಜನ ಒಂದೇ ಸಿನಿಮಾ ನಟಿಸಬೇಕು ಎಂಬ ಆಸೆ, ಒತ್ತಾಯ ಅಭಿಮಾನಿಗಳದ್ದು.

ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ ಒಟ್ಟಿಗೆ ನಟಿಸಿದ್ದಾರೆ. ಆದ್ರೆ, ಅಣ್ಣಾವ್ರ ಮಕ್ಕಳು ಮೂರು ಜನ ತೆರೆಮೇಲೆ ಕಾಣಿಸಿಕೊಂಡಿಲ್ಲ. ಆದ್ರೀಗ, ಅಂತಹ ಮೆಗಾ ಸಿನಿಮಾವೊಂದು ಸದ್ದಿಲ್ಲದೇ ತಯಾರಿ ನಡೆಯುತ್ತಿದೆ.

ಕಳೆದ ಎರಡು ವರ್ಷದಿಂದ ಇಂತಹದೊಂದು ಬೇಡಿಕೆ ಅಭಿಮಾನಿಗಳಲ್ಲಿ ಹೆಚ್ಚಿರುವ ಕಾರಣ, ಮೂರು ಜನ ಸೇರಿ ಒಟ್ಟಿಗೆ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಅದಕ್ಕಾಗಿ ಪುನೀತ್ ಒಡೆತನದ ಪಿ.ಆರ್.ಕೆ ಸಂಸ್ಥೆ ಸಿದ್ಧತೆ ನಡೆಸುತ್ತಿದೆ. ಹಾಗಿದ್ರೆ, ಈ ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ? ಮುಂದೆ ಓದಿ....

ಸಿನಿಮಾ ಮಾಡೋದು ಪಕ್ಕಾ

ಸಿನಿಮಾ ಮಾಡೋದು ಪಕ್ಕಾ

ರಾಜ್ ಮಕ್ಕಳು ಮೂವರು ಒಂದೇ ಸಿನಿಮಾದಲ್ಲಿ ನಟಿಸುವುದು ಕಷ್ಟ. ಸುಮ್ಮನೇ ಮಾತಿಗೆ ಹೌದು ಅಂತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರ್ತಿದ್ವು. ಆದ್ರೆ, ಅಭಿಮಾನಿಗಳ ಆಸೆಯನ್ನ ನಿಜಾ ಮಾಡಲು ಹೊರಟಿದ್ದಾರೆ ಅಣ್ಣಾವ್ರ ಮಕ್ಕಳು. ಪುನೀತ್, ರಾಘಣ್ಣ, ಶಿವಣ್ಣ ಮೂವರು ಈ ಸಿನಿಮಾ ಮಾಡುವುದಾಗಿ ಒಪ್ಪಿಗೆ ಸೂಚಿಸಿದ್ದಾರಂತೆ. ಪುನೀತ್ ಮಾಲಿಕತ್ವದ ಪಿ.ಆರ್.ಕೆ ಸಂಸ್ಥೆಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆಯಂತೆ.

ಮೊದಲು ಕಥೆ, ಆಮೇಲೆ ನಿರ್ದೇಶಕ

ಮೊದಲು ಕಥೆ, ಆಮೇಲೆ ನಿರ್ದೇಶಕ

ಅಂದ್ಹಾಗೆ, ಮೂವರು ನಟರು ಒಟ್ಟಿಗೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಕಥೆ ಬೇಕಾಗಿದೆ. ಕಥೆಗಾಗಿ ನಟರು ಹುಡುಕುತ್ತಿದ್ದಾರೆ. ಮೂವರಿಗೆ ಇಷ್ಟವಾಗುವಂತಹ ಕಥೆ ಸಿಕ್ಕ ಕೂಡಲೇ ಅನೌನ್ಸ್ ಮಾಡಲಿದ್ದಾರಂತೆ. ಮೊದಲು ಕಥೆ ಸಿಗಲಿ ಆ ನಂತರ ಈ ಚಿತ್ರಕ್ಕೆ ಯಾರು ನಿರ್ದೇಶನ ಮಾಡಬಹುದು ಎಂದು ನಿರ್ಧರಿಸಬಹುದು ಎಂದು ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.

ರಾಜ್ ಮೊಮ್ಮಕ್ಕಳು ಅಭಿನಯ

ರಾಜ್ ಮೊಮ್ಮಕ್ಕಳು ಅಭಿನಯ

ಅಂದ್ಹಾಗೆ, ಈ ಚಿತ್ರದಲ್ಲಿ ಬರಿ ರಾಜ್ ಕುಮಾರ್ ಮಕ್ಕಳು ಮಾತ್ರವಲ್ಲ, ಮೊಮ್ಮಕ್ಕಳು ಅಭಿನಯಿಸುವ ಸಾಧ್ಯತೆ ಇದೆಯಂತೆ. ವಿನಯ್ ರಾಜ್ ಕುಮಾರ್, ಯುವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯನ್ನ ರಾಘಣ್ಣ ವ್ಯಕ್ತಪಡಿಸಿದ್ದಾರೆ.

ಈ ವರ್ಷದಲ್ಲಿ ಸೆಟ್ಟೇರಲಿ.!

ಈ ವರ್ಷದಲ್ಲಿ ಸೆಟ್ಟೇರಲಿ.!

ರಾಜ್ ಪುತ್ರರನ್ನ ಒಂದೇ ಚಿತ್ರದಲ್ಲಿ ನೋಡುವ ಆಸೆ ಸ್ಯಾಂಡಲ್ ವುಡ್ ಅಭಿಮಾನಿಗಳಿಗಿದೆ. ಈಗಾಗಲೇ ಈ ಸಿನಿಮಾಗೆ ತಯಾರಿ ಕೂಡ ನಡೆಯುತ್ತಿದೆ. ಆದಷ್ಟೂ ಬೇಗ ಈ ಸಿನಿಮಾ ಶುರುವಾಗಲಿ ಎಂಬ ಆಸೆ ಪ್ರತಿಯೊಬ್ಬ ರಾಜ್ ಅಭಿಮಾನಿಯ ಆಸೆಯೂ ಆಗಿದೆ.

More from Filmibeat

English summary
Kannada Actor Shiva rajkumar, Puneeth rajkumar, Raghavendra rajkumar movie will come under PRK banner. actors are already searching for good story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X