For Quick Alerts
  ALLOW NOTIFICATIONS  
  For Daily Alerts

  'ಟಗರು' ನೋಡಲು ದುಬೈನಿಂದ ಬರ್ತಿದ್ದಾರೆ 'ಶಿವ' ಭಕ್ತರು.!

  By Harshitha
  |

  ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅಂದ್ರೇನೇ ಒಂಥರಾ ಖದರ್. ಮನ ಮೆಚ್ಚಿದ ಹುಡುಗನಾಗಿ ಶಿವಣ್ಣ ಕೈಯಲ್ಲಿ ರೋಸ್ ಹಿಡಿಯೋಕೂ ಸೈ.. ತಂಟೆಗೆ ಬಂದೋರ ತಲೆ ತೆಗಿಯೋಕೆ ಕೈಯಲ್ಲಿ ಲಾಂಗ್ ಹಿಡಿಯೋಕೂ ಸೈ. ಕೈಯಲ್ಲಿ ಲಾಂಗ್ ಹಿಡಿದು, ಶಿವಣ್ಣ ನಡೆದು ಬರ್ತಿದ್ರೆ ಎದುರಿಗಿದ್ದೋರು ಖಲ್ಲಾಸ್.!

  ಇಂತಹ 'ಮಾಸ್ ಅಪೀಲ್' ಇರುವ ಶಿವಣ್ಣಗೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ನಾಟ್ಯ ಸಾರ್ವಭೌಮ, ಕರುನಾಡ ಚಕ್ರವರ್ತಿ ಅಂತೆಲ್ಲ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ.

  ಶಿವಣ್ಣನ ಸಿನಿಮಾ ಯಾವಾಗ ತೆರೆಗೆ ಬರುತ್ತೋ ಅಂತ ಕಾಯುವ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ವಿದೇಶಗಳಲ್ಲೂ ಶಿವಣ್ಣನ ಸಿನಿಮಾಗಳಿಗೆ ಬಕಪಕ್ಷಿಗಳಂತೆ ಕಾಯುವ 'ಭಕ್ತ'ರಿದ್ದಾರೆ. ಈಗ ಅದೇ ಶಿವ'ಭಕ್ತ'ರು 'ಟಗರು' ಚಿತ್ರವನ್ನ ಕಣ್ತುಂಬಿಕೊಳ್ಳಲು ದುಬೈನಿಂದ ಬೆಂಗಳೂರಿಗೆ ಬರ್ತಿದ್ದಾರೆ. ಮುಂದೆ ಓದಿರಿ....

  'ಟಗರು' ನೋಡಲು ಬರ್ತಿದ್ದಾರೆ ಶಿವಣ್ಣನ ದುಬೈ ಫ್ಯಾನ್ಸ್

  'ಟಗರು' ನೋಡಲು ಬರ್ತಿದ್ದಾರೆ ಶಿವಣ್ಣನ ದುಬೈ ಫ್ಯಾನ್ಸ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಫೆಬ್ರವರಿ 23 ರಂದು ಬಿಡುಗಡೆ ಆಗಲಿದೆ. 'ಟಗರು' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಅಂತಲೇ ದುಬೈನಿಂದ ಬೆಂಗಳೂರಿಗೆ ಬರ್ತಿದ್ದಾರೆ ಶಿವಣ್ಣನ ಅಭಿಮಾನಿಗಳು.

  'ಟಗರು' ಜೊತೆ ಕುಣಿಯಲಿದ್ದಾರೆ ಶಾನ್ವಿ, ಪಾರೂಲ್, ಮಾನ್ವಿತಾ'ಟಗರು' ಜೊತೆ ಕುಣಿಯಲಿದ್ದಾರೆ ಶಾನ್ವಿ, ಪಾರೂಲ್, ಮಾನ್ವಿತಾ

  ಎಷ್ಟು ಜನ ಬರ್ತಿದ್ದಾರೆ.?

  ಎಷ್ಟು ಜನ ಬರ್ತಿದ್ದಾರೆ.?

  ಸುಮಾರು 25-30 ಮಂದಿ (ಶಿವಣ್ಣನ ಅಭಿಮಾನಿಗಳು) ದುಬೈನಿಂದ ಆಗಮಿಸುತ್ತಿದ್ದಾರೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ 'ಟಗರು' ವೀಕ್ಷಿಸಲಿದ್ದಾರೆ.

  ವಿಶೇಷ ಬಸ್ ವ್ಯವಸ್ಥೆ ಇದೆ

  ವಿಶೇಷ ಬಸ್ ವ್ಯವಸ್ಥೆ ಇದೆ

  ದುಬೈನಿಂದ ಅಭಿಮಾನಿಗಳು ಬರುತ್ತಿರುವ ಸುದ್ದಿಯನ್ನು ಕೇಳಿದ 'ಟಗರು' ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹರ್ಷ ವ್ಯಕ್ತಪಡಿಸಿದ್ದು, ದುಬೈ ಅಭಿಮಾನಿಗಳಿಗೆ ಸಹಕಾರಿ ಆಗಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸಂತೋಷ್ ಚಿತ್ರಮಂದಿರದವರೆಗೆ ಬಸ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.

  'ಟಗರು' ಚಿತ್ರದ ಕುರಿತು...

  'ಟಗರು' ಚಿತ್ರದ ಕುರಿತು...

  'ಟಗರು' ಮೈಯೆಲ್ಲ ಪೊಗರು... ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಆಗಿ ಕಾಣಿಸಿಕೊಂಡಿದ್ದರೆ, ವಿಲನ್ ಪಾತ್ರಗಳಲ್ಲಿ ಧನಂಜಯ್, ವಸಿಷ್ಟ ಸಿಂಹ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Kannada Actor Shiva Rajkumar's Dubai Fans coming down to Bengaluru to watch 'Tagaru' first day first show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X