ಡಿಂಪಲ್ ಕ್ವೀನ್ ರಚಿತಾ ರಾಮ್‌ಗೂ ಬಿಕ್ಲು ಶಿವ ಹತ್ಯೆ ಆರೋಪಿ ಜಗ್ಗನಿಗೂ ಏನು ಸಂಬಂಧ? ನೆಕ್ಲೆಸ್ ಗಿಫ್ಟ್ ಮಾಡಿದ್ದು ನಿಜವೇ?
ಸಿನಿಮಾ ಮಂದಿಗೆ ಅಭಿಮಾನಿಗಳು ಎಲ್ಲಾ ಫೀಲ್ಡ್‌ನಲ್ಲೂ ಸಿಗ್ತಾರೆ. ಸಾಮಾನ್ಯ ಜನರಿಂದ ಹಿಡಿದು ಭೂಗತಲೋಕದವರೆಗೂ ನಟಿಯರನ್ನು ಇಷ್ಟ ಪಡುವ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ನಟಿಯರೊಂದಿಗೆ ನಿಂತು ಫೋಟೊ ತೆಗಿಸಿಕೊಳ್ಳುವುದಕ್ಕೆ ಬಯಸುತ್ತಾರೆ. ಸೆಲ್ಫಿ ಬೇಕು ಅಂತ ಒದ್ದಾಡುತ್ತಾರೆ. ಅಭಿಮಾನಕ್ಕೆ ಮಣಿದು ಅವರೊಂದಿಗೆ ಸೆಲ್ಫಿ ಕೊಟ್ಟೇ ಬಿಡುತ್ತಾರೆ. ಇಂತಹದ್ದೊಂದು ಇಕ್ಕಟ್ಟಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಕ್ಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಭಾರತಿನಗರ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಚಲನ ಸೃಷ್ಟಿಸುತ್ತಿದೆ. ಪೊಲೀಸರು ತನಿಖೆ ವೇಳೆ ಒಂದೊಂದೇ ಹೆಸರುಗಳು ಹೊರಬರುತ್ತಿದೆ. ಬಿಕ್ಲು ಶಿವ ಹತ್ಯೆ ಪ್ರಕರಣದ ಆರೋಪಿ ಜಗದೀಶ್‌ಗೂ ಸಿನಿಮಾ ಮಂದಿಗೂ ನಂಟಿ ಇದೆ ಎಂಬ ವಿಷಯ ಕೂಡ ಹೊರ ಬಿದ್ದಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಈ ಆರೋಪಿ ದುಬಾರಿ ಗಿಫ್ಟ್ ಕೊಟ್ಟಿರುವ ಬಗ್ಗೆ ವರದಿಯಾಗಿವೆ.

ಬೆಂಗಳೂರಿನಲ್ಲಿ ಭಾರತಿನಗರ ರೌಡಿ ಶಿವಪ್ರಕಾಶ್ ಉರ್ಫ್ ಬಿಕ್ಲು ಶಿವ ಹತ್ಯೆ ನಡೆದಿತ್ತು. ಆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಹೆಸರುಗಳು ಹೊರ ಬಿದ್ದಿವೆ. ಈ ಮಧ್ಯೆ ಜಗ್ಗನಿಗೂ ಸಿನಿಮಾ ಮಂದಿಗೂ ನಂಟಿದೆ ಎಂಬ ಸಂಗತಿ ಕೂಡ ರಿವೀಲ್ ಆಗಿದೆ. ಹಾಗೇ ನಟಿ ರಚಿತಾ ರಾಮ್‌ಗೆ ಸಿನಿಮಾ ಸೆಟ್ಟಿಗೆ ಹೋಗಿ ದುಬಾರಿ ಬೆಲೆಯ ಆಭರಣಗಳನ್ನು ಉಡುಗೊರೆಯಾಗಿ ಕೊಟ್ಟಿದ್ದನೆಂಬ ಸುದ್ದಿಯ ಜೊತೆಗೆ ಫೋಟೊಗಳು ಕೂಡ ವೈರಲ್ ಆಗುತ್ತಿವೆ.
ಮುಂದೆ ಓದಿ
ಬಿಕ್ಲು ಶಿವ ಕೊಲೆ ಆರೋಪಿ ಜಗದೀಶ್‌ಗೆ ಸಿನಿಮಾ ನಂಟು ಹೇಗೆ?
ರಚಿತಾ ರಾಮ್‌ಗೆ ದುಬಾರಿ ಬೆಲೆ ನೆಕ್ಲೆಸ್ ಕೊಟ್ಟಿದ್ದು ನಿಜವೇ?
ವೈರಲ್ ಆಗುತ್ತಿರುವ ಫೋಟೊ ಹೊರ ಬಂದಿದ್ದು ಹೇಗೆ?
ರಚಿತಾ ರಾಮ್ ಭೇಟಿ ಮಾಡಿದ್ದು ಯಾವ ಸಿನಿಮಾ ಸೆಟ್‌ನಲ್ಲಿ?
ಹೌದು, ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೊಗಳು ವೈರಲ್ ಆಗುತ್ತಿವೆ. ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಚಿತಾ ರಾಮ್ ಹಾಗೂ ಬಿಕ್ಲು ಶಿವ ಕೊಲೆಯ ಆರೋಪಿ ಜಗದೀಶ್ ಇದ್ದಾರೆ. ಹಾಗೇ ಈ ಫೋಟೊದಲ್ಲಿ ರಚಿತಾ ರಾಮ್ ದುಬಾರಿ ಬೆಲೆಯ ನೆಕ್ಲೆಸ್ ಹಿಡಿದು ಖುಷಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಚರ್ಚೆಯಾಗುತ್ತಿದೆ. ರಚಿತಾ ರಾಮ್‌ಗೂ ಆರೋಪಿ ಜಗದೀಶ್ ಹೇಗೆ ಪರಿಚಯ? ದುಬಾರಿ ಬೆಲೆಯ ನೆಕ್ಲೆಸ್ ಕೊಟ್ಟು ಕ್ಯಾಮರಾ ಪೋಸ್ ಕೊಟ್ಟರೇ? ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಅಂದ್ಹಾಗೆ, ರವಿಚಂದ್ರನ್ ಹಾಗೂ ರಚಿತಾ ರಾಮ್ ನಟನೆಯ 'ರವಿ ಬೋಪಣ್ಣ' ಸಿನಿಮಾದ ನೆಟ್ಟಿನಲ್ಲಿ ಆರೋಪಿ ಜಗದೀಶ್ ಭೇಟಿ ಕೊಟ್ಟಿದ್ದ. ಆ ವೇಳೆ ರಚಿತಾ ರಾಮ್‌ಗೆ ದುಬಾರಿ ಬೆಲೆ ನೆಕ್ಲೆಸ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದ ಎಂದು ವರದಿಯಾಗಿದೆ. ಆದರೆ, ಈ ನೆಕ್ಲೆಸ್ ಅನ್ನು ಜಗದೀಶ್ ಕೊಟ್ಟಿದ್ದಾ? ಇಲ್ಲ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿ ಕೊಟ್ಟಿದ್ದಾ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಫೋಟೊ ಹೊರ ಬೀಳುತ್ತಿದ್ದಂತೆ ಪೊಲೀಸರು ಸಿನಿಮಾದವರೊಂದಿಗಿನ ನಂಟಿರುವ ಆಯಾಮದಲ್ಲಿಯೂ ತನಿಖೆ ಮಾಡುತ್ತಿದ್ದಾರೆಂದು ವರದಿಯಾಗಿದೆ.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಅವರನ್ನು ಪೊಲೀಸರು ವಿಚಾರಣೆ ಮಾಡಿ ತನಿಖೆಯ ವೇಳೆ ಕರೆದಾಗ ಮತ್ತೆ ಬರುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಈಗ ಸಿನಿಮಾದವರೊಂದಿಗಿನ ನಂಟು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಆಂಗಲ್‌ನಲ್ಲೂ ತನಿಖೆ ಮಾಡುವ ಸಾಧ್ಯತೆಯಿದೆ. ಆಗ ರಚಿತಾ ರಾಮ್ ಅವರಿಂದಲೂ ಹೇಳಿಕೆ ಪಡೆಯುವ ಸಾಧ್ಯತೆಯಿದೆ.
ಸದ್ಯ ರಚಿತಾ ರಾಮ್ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇನ್ನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಶಿವಪ್ರಕಾಶ್ ಉರ್ಫ್ ಬಿಕ್ಲು ಶಿವನನ್ನು ಜುಲೈ 15ರಂದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಈಗಾಗಲೇ ಕೆಲವು ಆರೋಪಿಗಳ ಮೇಲೆ ಎಫ್‌ಐಆರ್ ಹಾಕಲಾಗಿದೆ. ಇದರಲ್ಲಿ ಮೊದಲನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಆಗಿದ್ದು, ನವೀನ್, ಅನಿಲ್ ಮತ್ತು ಅರುಣ್ ಈ ಮೂವರನ್ನು ಭಾರತಿನಗರ ಠಾಣೆ ಪೊಲೀಸರು ಆರೋಪಿಗಳ ಪಟ್ಟಿಗೆ ಸೇರಿದ್ದಾರೆ. ಈ ಪ್ರಕರಣ ಇನ್ಯಾವ ಮಟ್ಟಕ್ಕೆ ಹೋಗುತ್ತೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.


Click it and Unblock the Notifications











