ಶಿವರಾಜ್ ಕುಮಾರ್ ಅಭಿನಯದ 'ದ್ರೋಣ' ಸಿನಿಮಾಗೆ ಸಿಕ್ತು ಪವರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ದ್ರೋಣ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ದ್ರೋಣ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದ್ರೋಣ ಒಂದು ಸಾಮಾಜಿಕ ಕಾಳಜಿ ಇರುವ ಸಿನಿಮಾ. ಶಿಕ್ಷಣ ಅವ್ಯವಸ್ಥೆ ವಿರುದ್ಧ ಸೆಟೆದು ನಿಲ್ಲುವ ಕಥೆ ಇದಾಗಿದೆ. ಚಿತ್ರದಲ್ಲಿ ಶಿವಣ್ಣ ಶಿಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ ಜೊತೆಗೀಗ ಚಿತ್ರಕ್ಕೆ ಮತ್ತಷ್ಟು ಪವರ್ ಸಿಕ್ಕಿದೆ.
ಹೌದು, ಶಿವಣ್ಣ ಅಭಿನಯದ ದ್ರೋಣ ಚಿತ್ರದ ಟ್ರೈಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡುತ್ತಿದ್ದಾರೆ. ಅಣ್ಣನ ಸಿನಿಮಾಗೆ ತಮ್ಮನ ಸಾಥ್ ಸಿಕ್ಕಿದ್ದು ಚಿತ್ರಕ್ಕೆ ಮತ್ತಷ್ಟು ಪವರ್ ಬಂದಂತೆ ಆಗಿದೆ. ಅಂದ್ಹಾಗೆ ಚಿತ್ರದ ಬಹುನಿರೀಕ್ಷೆಯ ಟ್ರೈಲರ್ ಇದೆ ತಿಂಗಳು ರಿಲೀಸ್ಆಗುತ್ತಿದೆ.

ಫ್ರೆಬ್ರವರಿ 23 ಭಾನುವಾರದಂದು ಚಿತ್ರದ ಟ್ರೈಲರ್ ಅನ್ನು ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡುತ್ತಿದ್ದಾರೆ. ದ್ರೋಣ ಚಿತ್ರದಲ್ಲಿ ಶಿವಣ್ಣ ಕ್ಲಾಸ್ ಮತ್ತು ಮಾಸ್ ಎರಡು ಅವತಾರದಲ್ಲಿ ಕಾಣಿಸಿಕಂಡಿದ್ದಾರೆ. ಶಿವಣ್ಣ ಜೊತಗೆ ನಾಯಕಿಯಾಗಿ ಇನಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ರಾಮ್ ಕ್ರಿಷ್ ಸಂಗೀತ ಸಂಯೋಜನೆ ಮಾಡಿದ್ದಾರೆ.


Click it and Unblock the Notifications











