For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಚಿತ್ರಕ್ಕೆ ಹೀರೋ ಆದ 'ಕಾಮಿಡಿ ಕಿಲಾಡಿ' ಶಿವರಾಜ್

  |
  ಮತ್ತೊಂದು ಚಿತ್ರಕ್ಕೆ ಹೀರೋ ಆದ 'ಕಾಮಿಡಿ ಕಿಲಾಡಿ' ಶಿವರಾಜ್ | FILMIBEAT KANNADA

  ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ವಿಜೇತರಾಗಿದ್ದ ಶಿವರಾಜ್ ಕೆ ಆರ್ ಪೇಟೆ ದೊಡ್ಡ ಜನಪ್ರಿಯತೆ ಗಳಿಸಿದರು. ಈ ಜನಪ್ರಿಯತೆ ಅವರಿಗೆ ಸಿನಿಮಾ ಅವಕಾಶ ನೀಡಿತು.

  ಇತ್ತೀಚಿಗಷ್ಟೆ ಸುದೀಪ್ ಜೊತೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಹಾಗೂ ಸತೀಶ್ ನೀನಾಸಂ ಜೊತೆಗೆ 'ಅಯೋಗ್ಯ' ಸಿನಿಮಾದಲ್ಲಿ ನಟಿಸಿದ್ದ ಶಿವರಾಜ್ ಒಳ್ಳೆಯ ಹೆಸರು ಮಾಡಿದರು. ಇದರ ಜೊತೆ ಜೊತೆಗೆ ಈಗಾಗಲೇ 'ನಾನು ಮತ್ತು ಗುಂಡ' ಸಿನಿಮಾಗೆ ನಾಯಕ ಸಹ ಆಗಿದ್ದಾರೆ.

  ಶಿವರಾಜ್.ಕೆ.ಆರ್.ಪೇಟೆಗೆ ಅದೃಷ್ಟ ಖುಲಾಯಿಸಿದೆ: ಅವಕಾಶ ಒದ್ಗೊಂಡು ಬರ್ತಿದೆ.! ಶಿವರಾಜ್.ಕೆ.ಆರ್.ಪೇಟೆಗೆ ಅದೃಷ್ಟ ಖುಲಾಯಿಸಿದೆ: ಅವಕಾಶ ಒದ್ಗೊಂಡು ಬರ್ತಿದೆ.!

  ಹೀರೋ ಆಗಿರುವ ಮೊದಲ ಸಿನಿಮಾದ ಬಿಡುಗಡೆ ಆಗುವುದಕ್ಕೆ ಮೊದಲೇ ಈಗ ಶಿವು ಅವರ ಎರಡನೇ ಸಿನಿಮಾ ಸಹ ಶುರು ಆಗಿದೆ. ಇತ್ತೀಚಿಗೆ ಈ ಸಿನಿಮಾದ ಮುಹೂರ್ತ ನೆರವೇರಿದೆ. ಮುಂದೆ ಓದಿ...

  'ಪುರ್ ಸೊತ್ತ್ ರಾಮ' ಚಿತ್ರ

  'ಪುರ್ ಸೊತ್ತ್ ರಾಮ' ಚಿತ್ರ

  'ಪುರ್ ಸೊತ್ತ್ ರಾಮ' ಎಂಬ ವಿಭಿನ್ನ ಶೀರ್ಷಿಕೆ ಸಿನಿಮಾದ ಇತ್ತೀಚಿಗೆ ಲಾಂಚ್ ಆಗಿದೆ. ಈ ಸಿನಿಮಾದಲ್ಲಿ ಮೂರು ನಾಯಕರಿದ್ದು, ಒಂದು ಪಾತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಹಾಸ್ಯಮಯ ಸಿನಿಮಾವಾಗಿದ್ದು, ಚಿತ್ರಕ್ಕೆ ಶಿವು ಬೆಸ್ಟ್ ಆಯ್ಕೆ ಎಂದು ಹೇಳಬಹುದು.

  ಮೂರು ನಾಯಕರು

  ಮೂರು ನಾಯಕರು

  ಶಿವರಾಜ್ ಕೆ ಆರ್ ಪೇಟೆ ಜೊತೆಗೆ ರವಿಶಂಕರ್ ಗೌಡ ಹಾಗೂ ರಿತಿಕ್ ಸರು ಸಿನಿಮಾದ ನಾಯಕರಾಗಿದ್ದಾರೆ. ರಿತಿಕ್ ಗೆ ಇದು ಮೊದಲ ಸಿನಿಮಾವಾಗಿದೆ. ಇವರಿಗೆ ರಕ್ಷಾ, ಅನುಷಾ ಪಕಾಲಿ ಹಾಗೂ ಮನಸಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  ದಿನಕರ್ ತೂಗುದೀಪ್ ಶಿಷ್ಯ

  ದಿನಕರ್ ತೂಗುದೀಪ್ ಶಿಷ್ಯ

  ನಿರ್ದೇಶಕ ದಿನಕರ್ ತೂಗುದೀಪ್ ಅವರ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರಸನ್ನ ಈಗ ತಾವೇ ಒಂದು ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಮೊದಲ ಸಿನಿಮಾಗೆ ಕಾಮಿಡಿ ಜಾನರ್ ನಲ್ಲಿ ಮಾಡುವ ನಿರ್ಧಾರ ಮಾಡಿದ್ದು, ಇಂದಿನ ದಿನಕ್ಕೆ ಚಿತ್ರದ ವಿಷಯ ಹತ್ತಿರ ಆಗಲಿದೆಯಂತೆ.

  45 ದಿನಗಳ ಚಿತ್ರೀಕರಣ

  45 ದಿನಗಳ ಚಿತ್ರೀಕರಣ

  ಸಿನಿಮಾದ ಶೂಟಿಂಗ್ 45 ದಿನಗಳ ನಡೆಯಲಿದೆಯಂತೆ. ಬೆಂಗಳೂರಿನಲ್ಲಿ ದೃಶ್ಯಗಳ ಹಾಗೂ ಹಾಡಿನ ಚಿತ್ರೀಕರಣ ವಿದೇಶದಲ್ಲಿ ಮಾಡುವ ಪ್ಲಾನ್ ಇದೆಯಂತೆ. ಸಿನಿಮಾದಲ್ಲಿ ನಾಲ್ಕು ಹಾಡುಗಳು ಇದ್ದು, ಪ್ರಭು ಸಾಹಿತ್ಯ ಹಾಗೂ ಸದ್ದು ರಾಯ್ ಸಂಗೀತ ನೀಡುತ್ತಿದ್ದಾರೆ. ಮಾನಸ ಚಿತ್ರಕ್ಕೆ ಬಂಡವಾಳ ಹಾಕುವುದರ ಜೊತೆಗೆ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Zee Kannada 'Comedy Khiladigalu' winner Shivaraj K R Pete playing lead role in 'Pur soth Rama' kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X