For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅಂದ್ರೆ ದೇವರು, ಧೈರ್ಯ, ಧಮ್ ಎಂದು ಗುಣಗಾನ ಮಾಡಿದ ನಟ ಯಾರು ಗೊತ್ತಾ.?

  |

  ''ದರ್ಶನ್ ಅಂದ್ರೆ ದೇವರು, ದಾನ, ಧರ್ಮ, ಧೈರ್ಯ, ಧಮ್.. ಎಲ್ಲಾ ಅವರೇ. ಹೀಗಾಗಿನೇ ಡಿ-ಬಾಸ್'' - ಹೀಗಂತ ಹೇಳಿರುವವರು ಬೇರೆ ಯಾರೂ ಅಲ್ಲ. ಕಾಮಿಡಿ ಕಿಲಾಡಿ ಶಿವರಾಜ್.ಕೆ.ಆರ್.ಪೇಟೆ.

  Darshan is my God says this Kannada actor | Darshan | Robert | Sandalwood | Filmibeat Kannada

  ಕಾಮಿಡಿ ಮಾಡಿ ರಿಯಾಲಿಟಿ ಶೋನಲ್ಲಿ ಗೆದ್ದು ಬೀಗಿದ ಶಿವರಾಜ್.ಕೆ.ಆರ್.ಪೇಟೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ಹಾಸ್ಯ ನಟನಾಗಿದ್ದಾರೆ. 'ಅಯೋಗ್ಯ', 'ಅಂಬಿ ನಿಂಗ್ ವಯಸ್ಸಾಯ್ತೋ', 'ಬ್ರಹ್ಮಾಚಾರಿ' ಮುಂತಾದ ಚಿತ್ರಗಳಲ್ಲಿ ಶಿವರಾಜ್.ಕೆ.ಆರ್.ಪೇಟೆ ಕಾಮಿಡಿ ಕಚಗುಳಿ ಇಟ್ಟಿದ್ದಾರೆ.

  ಇಂತಿಪ್ಪ ಶಿವರಾಜ್.ಕೆ.ಆರ್.ಪೇಟೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ರಾಬರ್ಟ್' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ದರ್ಶನ್ ಜೊತೆಗೆ ನಟಿಸಿದ ಅನುಭವವನ್ನು ಶಿವರಾಜ್.ಕೆ.ಆರ್.ಪೇಟೆ ಸಂದರ್ಶನವೊಂದರಲ್ಲಿ ಖುಷಿಯಿಂದ ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ಶಿವರಾಜ್.ಕೆ.ಆರ್.ಪೇಟೆ ಆಡಿರುವ ಮಾತುಗಳು ಇವು..

  ದೊಡ್ಡ ವ್ಯಕ್ತಿ ನಾನಲ್ಲ

  ದೊಡ್ಡ ವ್ಯಕ್ತಿ ನಾನಲ್ಲ

  ''ಡಿ-ಬಾಸ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. 'ರಾಬರ್ಟ್' ಚಿತ್ರದಲ್ಲಿ ದರ್ಶನ್ ಸರ್ ಜೊತೆಗೆ ಕೆಲಸ ಮಾಡುವ ಅವಕಾಶವನ್ನ ನನಗೆ ನೀಡಿದ ತರುಣ್ ಸುಧೀರ್ ಅಣ್ಣನಿಗೆ ಥ್ಯಾಂಕ್ಸ್'' - ಶಿವರಾಜ್.ಕೆ.ಆರ್.ಪೇಟೆ

  ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?

  ದರ್ಶನ್ ನ ನೋಡುವ ಆಸೆ ಇತ್ತು

  ದರ್ಶನ್ ನ ನೋಡುವ ಆಸೆ ಇತ್ತು

  ''ದರ್ಶನ್ ಸರ್ ನ ನೋಡಬೇಕು ಎಂಬ ಆಸೆ ಇತ್ತು. ಆದ್ರೆ, ಅವರೊಂದಿಗೆ ಆಕ್ಟ್ ಮಾಡುವ ಚಾನ್ಸ್ ಸಿಗುತ್ತೆ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. 'ರಾಬರ್ಟ್' ಚಿತ್ರಕ್ಕಾಗಿ ವಾರಣಾಸಿಗೆ ಹೋಗುವಾಗಲೂ, ''ದೇವರ (ದರ್ಶನ್) ಜೊತೆ ದೇವರ ಸನ್ನಿಧಿಯಲ್ಲಿ ಆಕ್ಟ್ ಮಾಡ್ತಿದ್ದೀನಿ'' ಅಂತ ಅಂದುಕೊಂಡಿದ್ದೆ'' - ಶಿವರಾಜ್.ಕೆ.ಆರ್.ಪೇಟೆ

  ''ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು''- ವಸಿಷ್ಟ ಸಿಂಹ''ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು''- ವಸಿಷ್ಟ ಸಿಂಹ

  ದರ್ಶನ್ ಆಶೀರ್ವಾದ ಬೇಕು

  ದರ್ಶನ್ ಆಶೀರ್ವಾದ ಬೇಕು

  ''ನನಗೆ ಅವರ ಮೇಲೆ ತುಂಬಾ ಪ್ರೀತಿ. ಅವರಿಗೂ ಅಷ್ಟೇ ಪ್ರೀತಿ ನನ್ನ ಮೇಲೆ ಇದೆ. ಆ ಖುಷಿ ನನಗಿದೆ. ನಾನು ಇಲ್ಲಿಯವರೆಗೂ ಮಾಡದ ಪಾತ್ರವನ್ನು ತರುಣ್ ನನ್ನ ಕೈಯಲ್ಲಿ ಮಾಡಿಸಿದ್ದಾರೆ. ದರ್ಶನ್ ಸರ್ ಆಶೀರ್ವಾದ ನಮ್ಮ ಮೇಲೆ ಯಾವಾಗಲೂ ಇರಬೇಕು'' - ಶಿವರಾಜ್.ಕೆ.ಆರ್.ಪೇಟೆ

  ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!

  ದರ್ಶನ್ ಅಂದ್ರೆ ದೇವರು

  ದರ್ಶನ್ ಅಂದ್ರೆ ದೇವರು

  ''ದರ್ಶನ್ ಅಂದ್ರೆ ದೇವರು, ದಾನ, ಧರ್ಮ, ಧೈರ್ಯ, ಧಮ್.. ಎಲ್ಲಾ ಅವರೇ. ಹೀಗಾಗಿನೇ ಡಿ-ಬಾಸ್'' ಎಂದು ಸಂದರ್ಶನದಲ್ಲಿ ದರ್ಶನ್ ಬಗ್ಗೆ ಶಿವರಾಜ್.ಕೆ.ಆರ್.ಪೇಟೆ ಗುಣಗಾನ ಮಾಡಿದ್ದಾರೆ.

  English summary
  Shivaraj KR Pete lauds Challenging Star Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X