For Quick Alerts
  ALLOW NOTIFICATIONS  
  For Daily Alerts

  ನಾನು ಮತ್ತು ಗುಂಡ: ಈ ಮುಗ್ದ ಗುಂಡನಿಗೆ ಮನ ಸೋಲದವರಿಲ್ಲ

  |

  'ನಾನು ಮತ್ತು ಗುಂಡ' ಚಿತ್ರದ ಟೀಸರ್ ಆಗಿದ್ದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕ್ಯೂಟ್ ನಾಯಿ ಫೀಲಿಂಗ್ಸ್ ಚಿತ್ರಾಭಿಮಾನಿಗಳ ಮನ ಮುಟ್ಟುವಂತ್ತಿದೆ. ಶಂಕ್ರ ಮತ್ತು ಮುಗ್ದ ಗುಂಡನ ಬಾಂಧವ್ಯ ನೋಡುತ್ತಿದ್ದರೆ ಈ ಟೀಸರ್ ಅನ್ನು ಮತ್ತೆ ಮತ್ತೆ ನೋಡಬೇಕು ಎಂದು ಅನಿಸದೆ ಇರಲ್ಲ. ಈ ಪುಟ್ಟ ಟೀಸರ್ ಅಷ್ಟರ ಮಟ್ಟಿಗೆ ಎಲ್ಲರ ಮನ ಗೆದ್ದಿದೆ.

  ಶಂಕ್ರನಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಮಿಂಚಿರುವ ಶಿವರಾಜ್ ಕೆ ಆರ್ ಪೇಟೆ ಈ ಪುಟ್ಟ ಟೀಸರ್ ನಲ್ಲಿಯೇ ಚಿತ್ರಾಭಿಮಾನಿಗಳ ಮನ ಗೆದ್ದಿದ್ದಾರೆ. ಈ ಚಿತ್ರದ ಹೈಲೆಟ್ಸ್ ಅಂದ್ರೆ ಈ ಮುಗ್ದ ನಾಯಿ.

  ಶಂಕ್ರನ ಬೆನ್ನತ್ತುವ ಕ್ಯೂಟ್ ಗುಂಡನನ್ನು ಎಲ್ಲಿ ಬಿಟ್ಟು ಹೋದರು ಅದೂ ಶಂಕ್ರನ ಹಿಂದೆ ಹಿಂದೆಯೇ ಸುತ್ತಾಡುತ್ತೆ. ನಂತರ ಈ ಮುಗ್ದ ನಾಯಿಯನ್ನು ಜೊತೆಯಲ್ಲೇ ಇಟ್ಟುಕೊಂಡು ಸಾಕುವ ಶಂಕ್ರನಿಗೆ ಗುಂಡನ ಜೊತೆ ಉತ್ತಮ ಬಾಂಧವ್ಯ ಬೆಳೆಯುತ್ತೆ. ಇಬ್ಬರ ಭಾವನಾತ್ಮಕ ಕಥೆಯೇ ನಾನು ಮತ್ತು ಗುಂಡ ಸಿನಿಮಾ.

  ಕಣ್ಣಿಗೆ,ಮನಸ್ಸಿಗೆ ಮುದನೀಡುವ ಈ ಟೀಸರ್ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಗಿಟ್ಟಿಸಿಕೊಂಡಿದೆ. ಅಂದ್ಹಾಗೆ ಈ ಚಿತ್ರಕ್ಕೆ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಕಾರ್ತಿಕ್ ಶರ್ಮ ಸಂಗೀತಾ ಸಂಯೋಜನೆ ಈ ಚಿತ್ರಕ್ಕಿದೆ.

  Read more about: shivraj kr pete kannada cinema
  English summary
  Comedy actor shivaraj kr pete starrer naanu mattu gunda kannada movie teaser release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X