For Quick Alerts
  ALLOW NOTIFICATIONS  
  For Daily Alerts

  ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?

  |
  Shivarajkumar and Darshan are all set to appear together in a movie | FILMIBEAT kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ವರ್ಷಗಳಿಂದ ಕೇಳಿ ಬರುತ್ತಿದೆ. ಆಗಾಗ ಈ ಬಗ್ಗೆ ಸುದ್ದಿಯಾಗುತ್ತಿರುತ್ತದೆ. ಚಿತ್ರಾಭಿಮಾನಿಗಳು ಸಹ ಇಬ್ಬರನ್ನು ಒಟ್ಟಿಗೆ ನೋಡಲು ಕಾತರರಾಗಿದ್ದಾರೆ. ಆದರೆ ಆ ಸಮಯ ಇನ್ನು ಬಂದಿಲ್ಲ.

  'ರಾಬರ್ಟ್' ಚಿತ್ರದ ಒಂದು ಗೀತೆಯಲ್ಲಿ 20 ಗಾಯಕರ ಸಮಾಗಮ'ರಾಬರ್ಟ್' ಚಿತ್ರದ ಒಂದು ಗೀತೆಯಲ್ಲಿ 20 ಗಾಯಕರ ಸಮಾಗಮ

  ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ಸ್ಟಾರ್ ನಟರನ್ನು ಒಟ್ಟಿಗೆ ಒಂದೆ ವೇದಿಕೆಯಲ್ಲಿ ನೋಡುವುದೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಇಂದು ಬೆಳಗ್ಗೆ ಶಿವಣ್ಣ ಮತ್ತು ದರ್ಶನ್ ಇಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಇಬ್ಬರ ಸಮಾಗಮಕ್ಕೆ ಸಾಕ್ಷಿಯಾಗಿದ್ದು ಹೊಸಬರ ಸಿನಿಮಾ ಮುಹೂರ್ತ ಕಾರ್ಯಕ್ರಮ. ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೆ ಸಿನಿಮಾ ಮಾಡುತ್ತಾರೆ ಅಂತ ಹೇಳುತ್ತಿದ್ದಾರಲ್ಲಾ ಅಂತ ಅಂದುಕೊಳ್ಳಬೇಡಿ. ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ದರ್ಶನ್ ಮತ್ತು ಶಿವಣ್ಣ ಇಬ್ಬರು ಮಾತನಾಡಿದ್ದಾರೆ.

  ಸಿನಿಮಾ ಮುಹೂರ್ತದಲ್ಲಿ ಭಾಗಿ

  ಸಿನಿಮಾ ಮುಹೂರ್ತದಲ್ಲಿ ಭಾಗಿ

  ಕಂಠೀರವ ಸ್ಟುಡಿಯೊದಲ್ಲಿ ನಡೆದ ಹೊಸಬರ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಗೆಸ್ಟ್ ಆಗಿ ಆಗಮಿಸಿದ್ದರು. ಈ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಇಬ್ಬರು ಸ್ಟಾರ್ ಒಟ್ಟಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆದರೆ ಇಬ್ಬರಿಗೂ ಹೊಂದಿಕೆಯಾಗುವಂತ ಕಥೆ ಇರಬೇಕು ಎಂದು ಹೇಳಿದ್ದಾರೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ 'ಟಗರು ಪಾರ್ಟ್-2'ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ 'ಟಗರು ಪಾರ್ಟ್-2'

  ಶಿವಣ್ಣ ಸೀನಿಯರ್ ಅವರೆ ಲಾಂಗ್ ಹಿಡಿತಾರೆ

  ಶಿವಣ್ಣ ಸೀನಿಯರ್ ಅವರೆ ಲಾಂಗ್ ಹಿಡಿತಾರೆ

  "ಇಬ್ಬರು ಒಟ್ಟಿಗೆ ನಟಿಸುವ ಸಮಯ ಬರುತ್ತೆ ಹೇಳಳಿಕ್ಕೆ ಆಗಲ್ಲ" ಎಂದು ಶಿವಣ್ಣ ಮಾತು ಪ್ರಾರಂಭಿಸುತ್ತಿದ್ದಂತೆ ದರ್ಶನ್, "ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ದೇಶಕರಿಲ್ಲ. ಅಂತಹ ಕಥೆ ಮಾಡಿಕೊಂಡು ಬರಲಿ ಖಂಡಿತಾ ಇಬ್ಬರು ಮಾಡುತ್ತೀವಿ" ಎಂದು ಖಡಕ್ ಆಗಿ ಹೇಳಿದರು. "ಲಾಂಗ್ ಹಿಡಿಯುವ ಸನ್ನಿವೇಶ ಬಂದರೆ ಶಿವಣ್ಣ ಸೀನಿಯರ್ ಅವರೇ ಹಿಡಿಯುತ್ತಾರೆ ನಾನು ಪಕ್ಕದಲ್ಲಿ ಇರ್ತೀನಿ" ಎಂದು ದರ್ಶನ್ ಹೇಳಿದ್ದಾರೆ.

  ಒಳ್ಳೆಯ ಕಥೆ ಇರಬೇಕು

  ಒಳ್ಳೆಯ ಕಥೆ ಇರಬೇಕು

  ಇನ್ನು ಶಿವಣ್ಣ ಮಾತನಾಡಿ "ಒಳ್ಳೆಯ ಸಬ್ಜೆಕ್ಟ್ ಬಂದರೆ ಖಂಡಿತಾ ಮಾಡುತ್ತೇನೆ, ಅದರಲ್ಲಿ ಏನಿದೆ. ನಾವು ಮಾಡುತ್ತೇವೆ ಅಂತ ಹೋಗಬಾರದು. ಅದಾಗೆ ಬರಬೇಕು. ಬಂದಾಗನೆ ಚೆನ್ನಾಗಿ ಇರುತ್ತೆ. ದರ್ಶನ್ ಮತ್ತು ನಾನು ಮಾತನಾಡುವಾಗ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕಥೆ ಚೆನ್ನಾಗಿದ್ದರೆ ಖಂಡಿತ ಮಾಡುತ್ತೇವೆ" ಎಂದು ಹೇಳಿದ್ದಾರೆ.

  ದರ್ಶನ್ ಜೊತೆ ನಟಿಸಿದ್ದ ಈ ನಟಿ ಯಾರು? ಸುಳಿವು ಇಲ್ಲಿದೆ ಊಹಿಸಿ?ದರ್ಶನ್ ಜೊತೆ ನಟಿಸಿದ್ದ ಈ ನಟಿ ಯಾರು? ಸುಳಿವು ಇಲ್ಲಿದೆ ಊಹಿಸಿ?

  ಸುದೀಪ್ ಜೊತೆ ಸಿನಿಮಾ ಮಾಡಿರುವ ಶಿವಣ್ಣ

  ಸುದೀಪ್ ಜೊತೆ ಸಿನಿಮಾ ಮಾಡಿರುವ ಶಿವಣ್ಣ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರು ಒಟ್ಟಿಗೆ ಒಂದೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 'ದಿ ವಿಲನ್' ಸಿನಿಮಾ ಮೂಲಕ ನಿರ್ದೇಶಕ ಪ್ರೇಮ್ ಇಬ್ಬರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿ ಸಕ್ಸಸ್ ಆಗಿದ್ದರು. ಈಗ ಶಿವಣ್ಣ ಮತ್ತು ದರ್ಶನ್ ಅವರನ್ನು ಒಂದೆ ಸಿನಿಮಾ ಮೂಲಕ ಕರೆತರುವ ಪ್ರಯತ್ನ ಯಾರು ಮಾಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

  English summary
  Kannada star actors Shivarajkumar and Darshan will be appear together in same movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X