For Quick Alerts
  ALLOW NOTIFICATIONS  
  For Daily Alerts

  ಡಾಲಿಯ ಜೊತೆ ಟಗರು ಶಿವನ ವಿಜಯಯಾತ್ರೆ

  By Pavithra
  |
  ಡಾಲಿಯ ಜೊತೆ ಟಗರು ಶಿವನ ವಿಜಯಯಾತ್ರೆ | Filmibeat Kannada

  ಟಗರು ಸಿನಿಮಾ ಈ ವರ್ಷದ ಹಿಟ್ ಲಿಸ್ಟ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರೇಕ್ಷಕರು ಸಿನಿಮಾವನ್ನ ಮತ್ತೆ ಮತ್ತೆ ನೋಡುವುದಕ್ಕೆ ಶುರು ಮಾಡಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಶಿವಣ್ಣ ಅಭಿನಯದ ಟಗರು ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ.

  ಸಿನಿಮಾವನ್ನ ನೋಡಿ ಮೆಚ್ಚುಗೆ ಸೂಚಿಸಿ ಪ್ರೀತಿಯಿಂದ ಅಪ್ಪಿಕೊಂಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಚಿತ್ರತಂಡ ರಾಜ್ಯಾದಂತ್ಯ ಪ್ರವಾಸವನ್ನು ಶುರು ಮಾಡಿದೆ. ಇತ್ತೀಚಿಗಷ್ಟೆ ಶಿವಮೊಗ್ಗದ ಚಿತ್ರಮಂದಿರಗಳಿಗೆ ಟಗರು ಶಿವ ಹಾಗೂ ಡಾಲಿ ಭೇಟಿ ಕೊಟ್ಟಿದ್ದು ಸಾಗರದ ಅಳಿಯನನ್ನ ಜನತೆ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.

  'ಡ್ರಾಮಾ' ಸಿನಿಮಾದಲ್ಲಿ ಯೋಗಿ ಅಭಿನಯಿಸಬೇಕಿತ್ತು! ಆದ್ರೆ, ಅದಾಗಲಿಲ್ಲ! 'ಡ್ರಾಮಾ' ಸಿನಿಮಾದಲ್ಲಿ ಯೋಗಿ ಅಭಿನಯಿಸಬೇಕಿತ್ತು! ಆದ್ರೆ, ಅದಾಗಲಿಲ್ಲ!

  ಚಿತ್ರತಂಡಕ್ಕೂ ಹೆಚ್ಚಾಗಿ ಪ್ರತಿ ಜಿಲ್ಲೆಯ ಅಭಿಮಾನಿಗಳು ಸಿನಿಮಾತಂಡವನ್ನ ಸ್ವಾಗತ ಮಾಡಿ ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಶಿವಣ್ಣನ ಜೊತೆ ಇದೇ ಮೊದಲ ಬಾರಿಗೆ ಧನಂಜಯ ಸ್ಕ್ರೀನ್ ಶೇರ್ ಮಾಡಿದ್ದು ಡಾಲಿಯ ಖಡಕ್ ಅಭಿನಯಕ್ಕೆ ಫಿದಾ ಆಗಿದ್ದಾರೆ.

  ಇತ್ತ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಟಗರು ಸಿನಿಮಾ 'ಯು ಎಸ್ ಎ' ನಲ್ಲಿ ಅಮೋಘವಾಗಿ ಎರಡನೇ ವಾರ ಪ್ರದರ್ಶನವಾಗುತ್ತಿದೆ. ಹೊರ ದೇಶದ ಕನ್ನಡಿಗರು ಸಿನಿಮಾ ನೋಡಿ ಬಂದು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಏರ್ಪಿಲ್ ಮೊದಲ ವಾರದಲ್ಲಿ ಚಿತ್ರತಂಡ ವಿದೇಶ ಪ್ರವಾಸ ಆರಂಭ ಮಾಡಲಿದ್ದು ಹೊರ ದೇಶದ ಕನ್ನಡಿಗರಿಗೆ ಮತ್ತು ಅಲ್ಲಿಯ ಸಿನಿಮಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದೆ.

  ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಈ ಗುಣಗಳನ್ನ ಬದಲಿಸಿಕೊಳ್ಳಬೇಕಂತೆ.!ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಈ ಗುಣಗಳನ್ನ ಬದಲಿಸಿಕೊಳ್ಳಬೇಕಂತೆ.!

  English summary
  Kannada Tagaru Cinema has started with Vijayayatre .Actor Shivaraj Kumar and Dhananjaya visited the theaters in Shimoga and thanked the fans. Tagaru film is produced by KP Srikanth, directed by Duniya Suri

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X