For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ನಲ್ಲಿ ಮೈಸೂರಿನ ಫ್ಯಾಮಿಲಿ ಜೊತೆ ಶಿವರಾಜ್ ಕುಮಾರ್

  By Pavithra
  |

  ನಟ ಶಿವರಾಜ್ ಕುಮಾರ್ ಈ ವೀಕೆಂಡ್ ಅನ್ನ ಮೈಸೂರಿನ ತಮ್ಮ ಫ್ಯಾಮಿಲಿ ಜೊತೆಯಲ್ಲಿ ಕಳೆದಿದ್ದಾರೆ. ಶಿವಣ್ಣನ ಜೊತೆ ಗೀತಾ ಶಿವರಾಜ್ ಕುಮಾರ್ ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದ್ದು ವಿಶೇಷವಾಗಿದೆ. ಅದು ಸರಿ ಅಣ್ಣಾವ್ರ ಕಂಪ್ಲೀಟ್ ಫ್ಯಾಮಿಲಿ ಬೆಂಗಳೂರಿನಲ್ಲಿದೆ. ಅದನ್ನ ಬಿಟ್ಟರೆ ಗಾಜನೂರಿನಲ್ಲಿದೆ ಮೈಸೂರಿನಲ್ಲಿ ಯಾರಿದ್ದಾರೆ ಎಂದು ಆಶ್ವರ್ಯ ಪಡಬೇಡಿ.

  ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಇಬ್ಬರು ಇತ್ತೀಚಿಗಷ್ಟೇ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಶಕ್ತಿಧಾಮದಲ್ಲಿರುವ ಮಕ್ಕಳ ಜೊತೆ ಶಿವರಾಜ್ ಕುಮಾರ್ ಸಾಕಷ್ಟು ಸಮಯ ಕಳೆದಿದ್ದಾರೆ.

  ಶುರುವಾಯ್ತು ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗಶುರುವಾಯ್ತು ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗ

  ಪಾರ್ವತಮ್ಮ ರಾಜ್ ಕುಮಾರ್ ಪ್ರಾರಂಭ ಮಾಡಿದ ಶಕ್ತಿಧಾಮ ಸಂಸ್ಥೆಯನ್ನ ಈಗ ಪುನೀತ್ ರಾಜ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ನಿರಾಶ್ರಿತ ಹೆಂಗಸರು ಹಾಗೂ ಮಕ್ಕಳಿಗೆ ಶಕ್ತಿಧಾಮದಲ್ಲಿ ಆಸರೆ ನೀಡಲಾಗುತ್ತಿದೆ.

  Shivaraj Kumar and his wife Geeta Shivaraj Kumar have visited Mysore's 'Shakthi Dhama'

  ಶಕ್ತಿಧಾಮದ ಮಕ್ಕಳ ಜೊತೆ ಕಾಲ ಕಳೆದ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಮಕ್ಕಳಿಗಾಗಿ ಅನೇಕ ಉಡುಗೊರೆಗಳನ್ನ ನೀಡಿದ್ದಾರೆ. ಅಲ್ಲಿಯ ಮಕ್ಕಳು ಕೂಡ ಹ್ಯಾಟ್ರಿಕ್ ಹೀರೋ ಅವರನ್ನ ನೋಡಿ ಸಖತ್ ಖುಷಿ ಆಗಿದ್ದಾರೆ. ಇತ್ತೀಚಿಗಷ್ಟೇ ಪುನೀತ್ ರಾಜ್ ಕುಮಾರ್ ಕೂಡ ಶಕ್ತಿಧಾಮಕ್ಕೆ ಭೇಟಿ ನೀಡಿದ್ದರು.

  English summary
  Kannada actor Shivaraj Kumar and his wife Geeta Shivaraj Kumar have visited Mysore's 'Shakthi Dhama'. Parvaratma RajKumar is the founder of the 'Shakti Dhama' organization .
  Sunday, January 14, 2018, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X