ನಾಗರಹಾವಿನ ಅಬ್ಬರ ಕಣ್ತುಂಬಿಕೊಂಡ ಶಿವಣ್ಣ, ಜಗ್ಗೇಶ್
Recommended Video

45 ವರ್ಷಗಳ ಬಳಿಕ ಬಂದಿರುವ ನಟ ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾವನ್ನು ಅಭಿಮಾನಿಗಳು ಖುಷಿಯಿಂದ ಸ್ವಾಗತ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಚಿತ್ರರಂಗದ ದೊಡ್ಡ ದೊಡ್ಡ ನಟರು ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ನಟ ಶಿವರಾಜ್ ಕುಮಾರ್ ಇಂದು ಮಧ್ಯಾಹ್ನ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ 'ನಾಗರಹಾವು' ಸಿನಿಮಾವನ್ನು ನೋಡಿದ್ದಾರೆ. 'ನಾಗರಹಾವು' ಚಿತ್ರದ ಬಗ್ಗೆ ಅನೇಕ ನೆನಪುಗಳನ್ನು ಹಂಚಿಕೊಂಡಿದ್ದ ಶಿವಣ್ಣ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿದರು. ಈ ವೇಳೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಕೂಡ ಚಿತ್ರಮಂದಿರದಲ್ಲಿ ಹಾಜರಾಗಿದ್ದರು.

ಇನ್ನೊಂದು ಕಡೆ ನಟ ಜಗ್ಗೇಶ್ ಕೂಡ 'ನಾಗರಹಾವು' ಸಿನಿಮಾವನ್ನು ನೋಡಿದ್ದಾರೆ. ಚಿತ್ರ ನೋಡಿ ಬಂದ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ಬಾಲ್ಯದಲ್ಲಿ ನೋಡಿದ 'ನಾಗರಹಾವು' ರಾಮಾಚಾರಿ ಇಂದು ಚಿತ್ರಮಂದಿರದಲ್ಲಿ ನೋಡಿ ಕಣ್ತುಂಬಿಸಿಕೊಂಡೆ..ಸೂಪರ್ ದಾದ love you..'' ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ಕಳೆದ ಶುಕ್ರವಾರ ಬಿಡುಗಡೆಯಾದ 'ನಾಗರಹಾವು' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಸಿನಿಮಾ 75 ಲಕ್ಷ ದಿಂದ 1 ಕೋಟಿ ಕಲೆಕ್ಷನ್ ಮಾಡಿದೆಯಂತೆ.


Click it and Unblock the Notifications











