For Quick Alerts
  ALLOW NOTIFICATIONS  
  For Daily Alerts

  ಟೀಸರ್ ಲಾಂಚ್ ಗೂ ಮುನ್ನ ಶಿವಣ್ಣ-ಮಾನ್ವಿತಾ ಏನ್ ಮಾಡಿದ್ರು ಗೊತ್ತಾ?

  By Pavithra
  |

  'ಟಗರು'.... ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಕ್ಸ್‌ ಪೆಕ್ಟೆಡ್ ಸಿನಿಮಾ. ಇಂದು ಸಂಜೆ ರಿಲೀಸ್ ಆಗುವ ಸಿನಿಮಾದ ಟೀಸರ್ ಗಾಗಿ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ 'ಟಗರು' ಸಿನಿಮಾ ತಂಡದ ಕೆಲವರು ಮಾತ್ರ ಇನ್ನೂ ಗೋವಾದಲ್ಲೇ ಬೀಡುಬಿಟ್ಟಿದ್ದಾರೆ. ಅರೆ... ಟೀಸರ್ ಲಾಂಚ್ ಪ್ರೋಗ್ರಾಂ ಇದ್ರೂ ಚಿತ್ರತಂಡ ಅಲ್ಲೇನು ಮಾಡ್ತಿದೆ ಅನ್ನೋದೇ ಸದ್ಯದ ಕುತೂಹಲ.

  ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಿಜಿ ಆಗಿರುವ 'ಟಗರು' ಟೀಂ ಮೂರು ದಿನಗಳಿಂದ ಚಿತ್ರೀಕರಣದಲ್ಲಿ ತೊಡಗಿದೆ. ಆದ್ರೆ, ಫ್ಯಾನ್ಸ್ ಅರೆಂಜ್ ಮಾಡಿರುವ ಕಾರ್ಯಕ್ರಮದಲ್ಲಿ ಸಂಜೆ ಬಂದು ಭಾಗಿಯಾಗಲಿದೆ.

  ಹ್ಯಾಟ್ರಿಕ್ ಹೀರೋ ಜೊತೆ ಕೆಂಡಸಂಪಿಗೆ

  ಹ್ಯಾಟ್ರಿಕ್ ಹೀರೋ ಜೊತೆ ಕೆಂಡಸಂಪಿಗೆ

  ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಜೊತೆ ಅಭಿನಯಿಸಿರುವ ಮಾನ್ವಿತಾ ಹರೀಶ್, ಶಿವಣ್ಣನ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. 'ಮೆಂಟಲ್' ಅನ್ನೋ ಸಾಂಗ್ ಇದಾಗಿದ್ದು ಮೂರು ದಿನಗಳಿಂದ ಗೋವಾದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ.

  ಮಾನ್ವಿತಾ ಹೊಸ ಲುಕ್‌ ಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್

  ಮಾನ್ವಿತಾ ಹೊಸ ಲುಕ್‌ ಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್

  'ಟಗರು' ಸಿನಿಮಾದಲ್ಲಿ ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಂಡಿರುವ ಮಾನ್ವಿತಾ ಹರೀಶ್ ಗೋವಾದ ಹಾಡಿನಲ್ಲೂ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಮೂಗುತಿ ಸುಂದರಿಯ ಹೊಸ ಗೆಟಪ್ ನೋಡಿ ಅವ್ರ ಅಭಿಮಾನಿಗಳು ಬೌಲ್ಡ್ ಆಗಿದ್ದಾರೆ.

   ಚರಣ್ ಮ್ಯೂಸಿಕ್ ಗೆ ಲಿರಿಕ್ಸ್

  ಚರಣ್ ಮ್ಯೂಸಿಕ್ ಗೆ ಲಿರಿಕ್ಸ್

  'ಮೆಂಟಲ್' ಸಾಂಗ್ ನ ಕಿರಣ್ ಕಾವೇರಪ್ಪ, ವರ್ದಿಕ್ ಜೋಸೆಫ್ ಎಂಬ ಇಬ್ಬರು ಯುವ ಚಿತ್ರ ಸಾಹಿತಿಗಳಿಂದ ಬರೆಸಲಾಗಿದೆ. 'ಟಗರು' ಸಿನಿಮಾದಲ್ಲಿ ಮಾನ್ವಿತಾ ಕ್ಯಾರೆಕ್ಟರ್ ಬೇರೆಯದ್ದೇ ರೀತಿಯಲ್ಲಿರೋದ್ರಿಂದ ಹಾಡಿನಲ್ಲಿ ಬದಲಾವಣೆ ಬರಲಿ ಅಂತ ಹೊಸಬರಿಗೆ ಚಾನ್ಸ್ ನೀಡಿದ್ದಾರೆ ನಿರ್ದೇಶಕರು.

  ಇಲ್ಲಿ ಎಲ್ಲರೂ ಅಭಿಮಾನಿಗಳೇ.!

  ಇಲ್ಲಿ ಎಲ್ಲರೂ ಅಭಿಮಾನಿಗಳೇ.!

  'ಟಗರು' ಸಿನಿಮಾದ ಟೀಸರ್ ನ ಅಭಿಮಾನಿಗಳಿಂದ ಬಿಡುಗಡೆ ಮಾಡಿಸಲಾಗ್ತಿದೆ. ಚಿತ್ರದ ನಿರ್ಮಾಪಕ ಶ್ರೀಕಾಂತ್ ಕೂಡ ಶಿವರಾಜ್ ಕುಮಾರ್ ಅವ್ರ ಅಭಿಮಾನಿಯಾಗಿರೋದ್ರಿಂದ ಈ ರೀತಿಯಲ್ಲಿ ಪ್ಲಾನ್ ಮಾಡಲಾಗಿದೆ.

  ಸಂಜೆ ಟೌನ್ ಹಾಲ್ ನಲ್ಲಿ ಗಣ್ಯರ ದಂಡು

  ಸಂಜೆ ಟೌನ್ ಹಾಲ್ ನಲ್ಲಿ ಗಣ್ಯರ ದಂಡು

  ಶಿವಣ್ಣನ 'ಟಗರು' ಸಿನಿಮಾದ ಟೀಸರ್ ಲಾಂಚ್ ನಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗಲಿದ್ದು ತೆಲುಗಿನ ಸ್ಟಾರ್ ಅಲ್ಲು ಸಿರೀಶ್ ಕೂಡ ಅಭಿಮಾನಿಗಳ ಜೊತೆ ಶಿವಣ್ಣನ ಅಭಿಮಾನಿಯಾಗಲಿದ್ದಾರೆ

  English summary
  Shivaraj kumar and Manvitha Harish busy with Tagaru song shooting in Goa

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X